ಕಳೆದ 3 ತಿಂಗಳಲ್ಲಿ 10 ಗ್ರಾಂಗೆ ಭರ್ಜರಿ 30000 ರು.ವರೆಗೆ ಇಳಿಕೆ ಕಂಡಿರುವ ಚಿನ್ನ ಮತ್ತು ಕೆಜಿಗೆ 1.50 ಲಕ್ಷ ರು.ವರೆಗೂ ಇಳಿಕೆ ಕಂಡಿರುವ ಎರಡೂ ಲೋಹಗಳ ದರ ಮುಂದಿನ ವಾರದಲ್ಲಿ ಮತ್ತಷ್ಟು ಇಳಿಯುವ ಸಾಧ್ಯತೆ ಎಂದು ಹೇಳಲಾಗಿದೆ.

ನವದೆಹಲಿ: ಕಳೆದ 3 ತಿಂಗಳಲ್ಲಿ 10 ಗ್ರಾಂಗೆ ಭರ್ಜರಿ 30000 ರು.ವರೆಗೆ ಇಳಿಕೆ ಕಂಡಿರುವ ಚಿನ್ನ ಮತ್ತು ಕೆಜಿಗೆ 1.50 ಲಕ್ಷ ರು.ವರೆಗೂ ಇಳಿಕೆ ಕಂಡಿರುವ ಎರಡೂ ಲೋಹಗಳ ದರ ಮುಂದಿನ ವಾರದಲ್ಲಿ ಮತ್ತಷ್ಟು ಇಳಿಯುವ ಸಾಧ್ಯತೆ ಎಂದು ಹೇಳಲಾಗಿದೆ.

ಹಣದುಬ್ಬರದ ಅಂಕಿ ಅಂಶಗಳನ್ನು ಬಿಡುಗಡೆ

ಶೀಘ್ರವೇ ಅಮೆರಿಕದ ಸರ್ಕಾರ ಹಣದುಬ್ಬರದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಲಿದೆ. ಇದನ್ನು ಆಧರಿಸಿ ಅಮೆರಿಕದ ಕೇಂದ್ರೀಯ ಬ್ಯಾಂಕ್‌ ತನ್ನ ಬಡ್ಡಿದರದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ.

ಹೀಗಾಗಿ ಹೂಡಿಕೆದಾರರು ಅಮೆರಿಕದ ಮೇಲೆ ಕಣ್ಣಿಟ್ಟಿದ್ದಾರೆ. ಮೇಲ್ಕಂಡ ಎರಡೂ ಬೆಳವಣಿಗೆ ಆಗುವವರೆಗೂ ಸದ್ಯ ಇಳಿಕೆ ಹಾದಿಯಲ್ಲಿರುವ ಚಿನ್ನ ಮತ್ತು ಬೆಳ್ಳಿಯ ದರ ಮತ್ತಷ್ಟು ಕುಸಿತ ಕಾಣುವ ಸಾಧ್ಯತೆ ಇದೆ ಎಂದು ಜೆಎಂ ಫೈನಾನ್ಷಿಯಲ್ ಸರ್ವಿಸಸ್‌ನ ಉಪಾಧ್ಯಕ್ಷ ಪ್ರಣವ್ ಮೇರ್ ಹೇಳಿದ್ದಾರೆ. ಕಳೆದ ಆಗಸ್ಟ್‌ನಿಂದ ಇಲ್ಲಿಯವರೆಗೆ ಚಿನ್ನ ಹಾಗೂ ಬೆಳ್ಳಿ ಬೆಲೆ ಹಂತ ಹಂತವಾಗಿ ಇಳಿಯುತ್ತಾ ಬಂದಿದೆ.

3 ತಿಂಗಳಲ್ಲಿ 10 ಗ್ರಾಂ ಚಿನ್ನದ ಬೆಲೆ 30000 ರು.ವರೆಗೆ ಇಳಿಕೆ

3 ತಿಂಗಳಲ್ಲಿ 10 ಗ್ರಾಂ ಚಿನ್ನದ ಬೆಲೆ 30000 ರು.ವರೆಗೆ ಮತ್ತು ಬೆಳ್ಳಿ ದರ ಕೆಜಿಗೆ 1.50 ಲಕ್ಷ ರು.ವರೆಗೂ ಇಳಿಕೆ ಕಂಡಿದೆ.