ಶ್ರೀರಾಮ ಜನ್ಮಭೂಮಿ ಅಯೋಧ್ಯೆ ಹಾಗೂ ಸೀತಾ ಜನ್ಮಭೂಮಿ ನೇಪಾಳದ ಜನಕಪುರ ಧಾಮವನ್ನು ಸಂಪರ್ಕಿಸುವ ‘ಸರಯೂ-ಕಮಲಾ ಎಕ್ಸ್ಪ್ರೆಸ್’ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳದ ಪ್ರಧಾನಿ ಬಾಲೇಂದ್ರ ಶಾ ಸೋಮವಾರ ವರ್ಚುವಲ್ ಮೂಲಕ ಹಸಿರು ನಿಶಾನೆ ತೋರಿದರು.
ಅಯೋಧ್ಯೆ : ಶ್ರೀರಾಮ ಜನ್ಮಭೂಮಿ ಅಯೋಧ್ಯೆ ಹಾಗೂ ಸೀತಾ ಜನ್ಮಭೂಮಿ ನೇಪಾಳದ ಜನಕಪುರ ಧಾಮವನ್ನು ಸಂಪರ್ಕಿಸುವ ‘ಸರಯೂ-ಕಮಲಾ ಎಕ್ಸ್ಪ್ರೆಸ್’ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳದ ಪ್ರಧಾನಿ ಬಾಲೇಂದ್ರ ಶಾ ಸೋಮವಾರ ವರ್ಚುವಲ್ ಮೂಲಕ ಹಸಿರು ನಿಶಾನೆ ತೋರಿದರು. ಈ ಮೂಲಕ ಜನತೆಯ ಬಹುಕಾಲದ ಬೇಡಿಕೆ ಈಡೇರಿದೆ. ಈ ಎರಡೂ ಕ್ಷೇತ್ರಗಳ ಅಂತರ 604 ಕಿ.ಮೀ. ಇದ್ದು, 19 ಗಂಟೆಗಳಲ್ಲಿ ರೈಲು ಕ್ರಮಿಸಲಿದೆ. ನ.28ಕ್ಕೆ ಅಧಿಕೃತ ಸಂಚಾರ ಆರಂಭವಾಗಲಿದೆ.
ಯಾವ ನಿಲ್ದಾಣಗಳು?
ಅಯೋಧ್ಯೆ ಕ್ಯಾಂಟ್, ಮಂಕಾಪುರ, ಬಸ್ತಿ, ಗೋರಖ್ಪುರ, ನರ್ಕಟಿಯಾಗಂಜ್, ರಕ್ಸೌಲ್, ಸೀತಾಮಢಿ, ಶಿಶೋ, ಮಧುಬನಿ. ಜಯನಗರ ಜನಕಪುರಿ
ಯಾನ ಯಾವಾಗ?:
- ಪ್ರತಿ ಸೋಮವಾರ ಸಂಜೆ 5.50ಕ್ಕೆ ಅಯೋಧ್ಯೆ ಕ್ಯಾಂಟ್ನಿಂದ ಹೊರಟು ಮಂಗಳವಾರ ಮಧ್ಯಾಹ್ನ 12.40ಕ್ಕೆ ಜನಕಪುರ ಧಾಮಕ್ಕೆ
- ಪ್ರತಿ ಶನಿವಾರ ಮಧ್ಯಾಹ್ನ 1.10ಕ್ಕೆ ಜನಕಪುರ ಧಾಮದಿಂದ ಹೊರಟು, ಭಾನುವಾರ ಬೆಳಿಗ್ಗೆ 8.10ಕ್ಕೆ ಅಯೋಧ್ಯೆ ಕ್ಯಾಂಟ್ಗೆ
ರೈಲು ಸಂಚಾರದ ವಿವರ:
ಅಯೋಧ್ಯೆ ಕ್ಯಾಂಟ್ ಮತ್ತು ಜನಕಪುರ ಧಾಮದ ನಡುವಿನ 604 ಕಿ.ಮೀ. ದೂರವನ್ನು ಈ ರೈಲು 19 ಗಂಟೆಗಳಲ್ಲಿ ಕ್ರಮಿಸಲಿದೆ. ಪ್ರತಿ ಸೋಮವಾರ ಸಂಜೆ 5.50ಕ್ಕೆ ಅಯೋಧ್ಯೆ ಕ್ಯಾಂಟ್ನಿಂದ ಹೊರಟು ಮಂಗಳವಾರ ಮಧ್ಯಾಹ್ನ 12.40ಕ್ಕೆ (ನೇಪಾಳ ಕಾಲಮಾನ) ಜನಕಪುರ ಧಾಮ ತಲುಪಲಿದೆ. ಮಾರ್ಗಮಧ್ಯೆ ಮಂಕಾಪುರ, ಬಸ್ತಿ, ಗೋರಖ್ಪುರ, ನರ್ಕಟಿಯಾಗಂಜ್, ರಕ್ಸಾಲ್, ಸೀತಾಮಢಿ, ಶಿಶೋ, ಮಧುಬನಿ ಮತ್ತು ಜಯನಗರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ಮರುಪ್ರಯಾಣದಲ್ಲಿ ಪ್ರತಿ ಶನಿವಾರ ಮಧ್ಯಾಹ್ನ 1.10ಕ್ಕೆ ಜನಕಪುರ ಧಾಮದಿಂದ ಹೊರಟು, ಭಾನುವಾರ ಬೆಳಿಗ್ಗೆ 8.10ಕ್ಕೆ ಅಯೋಧ್ಯೆ ಕ್ಯಾಂಟ್ ತಲುಪಲಿದೆ.
ಟಿಕೆಟ್ ದರ ಮಾಹಿತಿ:
ಈ ರೈಲಿನ ಸಂಚಾರ ನ.28ರಿಂದ ಆರಂಭವಾಗಲಿದೆ. ಸ್ಲೀಪರ್, ಎಸಿ 3-ಟೈರ್, ಎಸಿ 3-ಟೈರ್ ಎಕಾನಮಿ ಮತ್ತು ಎಸಿ 2-ಟೈರ್ ಬೋಗಿಗಳ ಸೌಲಭ್ಯವಿದೆ. ಭಾರತೀಯ ರೈಲ್ವೆಯು ಐಆರ್ಸಿಟಿಸಿ ವೆಬ್ಸೈಟ್ನಲ್ಲಿ ಈ ಹೊಸ ರೈಲಿನ ಅಧಿಕೃತ ಟಿಕೆಟ್ ದರವನ್ನು ಇನ್ನೂ ಪ್ರಕಟಿಸಬೇಕಿದೆ. ಪ್ರಸ್ತುತ ಈ ಮಾರ್ಗದ ಸಮೀಪದ ಜನಕಪುರ ರೋಡ್ ನಿಲ್ದಾಣಕ್ಕೆ ಸಂಚರಿಸುವ ಇತರ ರೈಲುಗಳಲ್ಲಿ ಸ್ಲೀಪರ್ ದರ 290-330 ರು. ಹಾಗೂ ಎಸಿ ದರಗಳು 1,780 ರು. ವರೆಗೆ ಇವೆ.

