ಶುಕ್ರವಾರ ಲೋಕಾರ್ಪಣೆಗೊಂಡ ನೂತನ ಗುಲಾಬಿ ಮಾರ್ಗದಲ್ಲಿ ಬೆಳಗ್ಗೆ 4.55ರಿಂದ ರೈಲು ಸಂಚಾರ ಆರಂಭವಾಗಲಿದ್ದು, ಟಿಕೆಟ್ ದರ ಕನಿಷ್ಠ 10 ರು. ಹಾಗೂ ಗರಿಷ್ಠ 30 ರು.ನಿಗದಿಪಡಿಸಲಾಗಿದೆ.
ರಾಜಧಾನಿಯಲ್ಲಿ ಹಸಿರು, ನೇರಳೆ, ಹಳದಿ ಮೆಟ್ರೋ ಓಡಾಟದ ಬಳಿಕ-ಪಿಂಕ್ ಲೈನ್ ಮೆಟ್ರೋಗೆ ಮೋದಿ ಚಾಲನೆ । ಪ್ರತಿ 8 ನಿಮಿಷಕ್ಕೊಂದು ಮೆಟ್ರೋ ರೈಲು ಸೇವೆಗೆ । ಬೆಳಗ್ಗೆ 4.55ರಿಂದ ಓಡಾಟ ಆರಂಭ-ಈ ಮಾರ್ಗದ ಆರು ನಿಲ್ದಾಣಗಳ ಟಿಕೆಟ್ ದರ ಕನಿಷ್ಠ 10 ರು.ನಿಂದ ಗರಿಷ್ಠ 30 ರು. । ವಾರಂತ್ಯದಲ್ಲಿ ಪ್ರತಿ 10 ನಿಮಿಷಕ್ಕೆ ಒಂದು ರೈಲುಕನ್ನಡಪ್ರಭ ವಾರ್ತೆ ಬೆಂಗಳೂರು
ಶುಕ್ರವಾರ ಲೋಕಾರ್ಪಣೆಗೊಂಡ ನೂತನ ಗುಲಾಬಿ ಮಾರ್ಗದಲ್ಲಿ ಬೆಳಗ್ಗೆ 4.55ರಿಂದ ರೈಲು ಸಂಚಾರ ಆರಂಭವಾಗಲಿದ್ದು, ಟಿಕೆಟ್ ದರ ಕನಿಷ್ಠ 10 ರು. ಹಾಗೂ ಗರಿಷ್ಠ 30 ರು.ನಿಗದಿಪಡಿಸಲಾಗಿದೆ.ಸೋಮವಾರ ಕಾಳೇನ ಅಗ್ರಹಾರ ನಿಲ್ದಾಣದಿಂದ ಬೆಳಗ್ಗೆ 4.55ರಿಂದ ರೈಲು ಸಂಚಾರ ಆರಂಭಿವಾದರೆ, ಸುದ್ದುಗುಂಟೆಪಾಳ್ಯ ನಿಲ್ದಾಣದಿಂದ ಬೆಳಗ್ಗೆ 5 ಗಂಟೆಗೆ ಮೊದಲ ರೈಲು ಸಂಚರಿಸಲಿದೆ.
ಮಂಗಳವಾರದಿಂದ ಶನಿವಾರದವರೆಗೆ ಎರಡೂ ನಿಲ್ದಾಣಗಳಿಂದ ಬೆಳಗ್ಗೆ 6 ಗಂಟೆಗೆ ರೈಲು ಸಂಚಾರ ಆರಂಭವಾಗಲಿದೆ. ಭಾನುವಾರ ಮಾತ್ರ ಬೆಳಗ್ಗೆ 7ರಿಂದ ರೈಲು ಸಂಚಾರ ಆರಂಭವಾಗಲಿದೆ. ದಿನದ ಕೊನೆಯ ರೈಲು ಕಾಳೇನ ಅಗ್ರಹಾರ ನಿಲ್ದಾಣದಿಂದ ರಾತ್ರಿ10.50ಕ್ಕೆ ಹೊರಡಲಿದ್ದು, ಸುದ್ದುಗುಂಟೆಪಾಳ್ಯದಿಂದ 10.54ಕ್ಕೆ ನಿರ್ಗಮಿಸಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ದಟ್ಟಣೆಯ ಅವಧಿಯಲ್ಲಿ ಪ್ರತಿ 8 ನಿಮಿಷಕ್ಕೆ ಒಂದು ರೈಲು ಸಂಚರಿಸುತ್ತದೆ. ಉಳಿದ ಅವಧಿಯಲ್ಲಿ ಪ್ರತಿ 10 ನಿಮಿಷಕ್ಕೊಂದು ರೈಲು ಸಂಚರಿಸುತ್ತದೆ. ಶನಿವಾರ ಮತ್ತು ಭಾನುವಾರಗಳಂದು ಪ್ರತಿ 10 ನಿಮಿಷಕ್ಕೊಂದು ರೈಲು ಸಂಚರಿಸುತ್ತದೆ. ಪ್ರಯಾಣಿಕರ ದಟ್ಟಣೆ ಆಧರಿಸಿ ರೈಲು ಸೇವೆಯಲ್ಲಿ ಪರಿಷ್ಕರಣೆ ಮಾಡಲಾಗುತ್ತದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.---
ಗರಿಷ್ಠ ಟಿಕೆಟ್ ದರ 90 ರು.?ಹಾಲಿ ಬೆಂಗಳೂರು ಮೆಟ್ರೋ ಗರಿಷ್ಠ ದರ 90 ರು. ಇದೆ. ಇದೇ ದರವನ್ನು ಮುಂದುವರೆಸಲಾಗುವುದೋ ಅಥವಾ ಪರಿಷ್ಕರಣೆ ಮಾಡಲಾಗುತ್ತದೆಯೋ ಎನ್ನುವ ಕುರಿತು ಬಿಎಂಆರ್ಸಿಎಲ್ ಸ್ಪಷ್ಟನೆ ನೀಡಿಲ್ಲ. ನೂತನ ಗುಲಾಬಿ ಮಾರ್ಗದ ಯಾವುದೇ ನಿಲ್ದಾಣದಿಂದ ಮೆಟ್ರೋ ರೈಲು ಹತ್ತುವ ಪ್ರಯಾಣಿಕರು ಜಯದೇವ ಇಂಟರ್ಚೇಂಜ್ ನಿಲ್ದಾಣದಲ್ಲಿ ಇಳಿದು ಹಳದಿ ಮಾರ್ಗದ ರೈಲಿನಲ್ಲಿ ಸಂಚರಿಸಬಹುದು. ಹಾಗೆಯೇ ಹಳಿದ ಮಾರ್ಗದ ಆರ್.ವಿ. ಕಾಲೇಜು ಇಂಟರ್ಚೇಂಜ್ ನಿಲ್ದಾಣದಲ್ಲಿ ಇಳಿದು ಹಸಿರು ಮಾರ್ಗದ ರೈಲು ಹತ್ತಿ ಮೆಜೆಸ್ಟಿಕ್ ತೆರಳಬಹುದು. ಮೆಜೆಸ್ಟಿಕ್ ಇಂಟರ್ಚೇಂಜ್ ನಿಲ್ದಾಣದಿಂದ ನೇರಳ ಮಾರ್ಗದಲ್ಲಿ ಸಂಚರಿಸಬಹುದಾಗಿದೆ. ಹೀಗೆ, ಗುಲಾಬಿ ಮಾರ್ಗದಲ್ಲಿ ರೈಲು ಹತ್ತುವ ಪ್ರಯಾಣಿಕರು ನಗರದ 4 ದಿಕ್ಕುಗಳಲ್ಲೂ ಸಂಚರಿಸಬಹುದು. ಗುಲಾಬಿ ಮಾರ್ಗದ ಹೊಸ ಆರು ಹೊಸ ನಿಲ್ದಾಣಗಳ ಸೇರ್ಪಡೆಯೊಂದಿಗೆ ರಾಜಧಾನಿಯ ಒಟ್ಟು ಮೆಟ್ರೋ ನಿಲ್ದಾಣಗಳ ಸಂಖ್ಯೆ 91ಕ್ಕೆ ಏರಿಕೆಯಾಗಿದೆ.
