ದಕ್ಷ ಆಡಳಿತ ಮತ್ತು ಪ್ರಾಮಾಣಿಕ ಸೇವೆಯಿಂದ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ಮತ್ತು ಅಥಣಿ ಜನತೆಯ ಹೃದಯ ಗೆದ್ದಿರುವ ತಹಸೀಲ್ದಾರ್ ಸಿದರಾಯ ಬೋಸಗಿ ಈಗ ಪದೋನ್ನತಿ ಹೊಂದಿ ಎಸಿ ಆಗಿರುವುದು ನಮ್ಮೆಲ್ಲರಿಗೆ ಹೆಮ್ಮೆ ಸಂಗತಿಯಾಗಿದೆ. ಮುಂದಿನ ಆಡಳಿತದ ಹಾದಿಯಲ್ಲೂ ತಮಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಯುವ ಮುಖಂಡ ಚಿದಾನಂದ ಲಕ್ಷ್ಮಣ ಸವದಿ ಶುಭ ಹಾರೈಸಿದರು.
ಕನ್ನಡಪ್ರಭ ವಾರ್ತೆ ಅಥಣಿದಕ್ಷ ಆಡಳಿತ ಮತ್ತು ಪ್ರಾಮಾಣಿಕ ಸೇವೆಯಿಂದ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ಮತ್ತು ಅಥಣಿ ಜನತೆಯ ಹೃದಯ ಗೆದ್ದಿರುವ ತಹಸೀಲ್ದಾರ್ ಸಿದರಾಯ ಬೋಸಗಿ ಈಗ ಪದೋನ್ನತಿ ಹೊಂದಿ ಎಸಿ ಆಗಿರುವುದು ನಮ್ಮೆಲ್ಲರಿಗೆ ಹೆಮ್ಮೆ ಸಂಗತಿಯಾಗಿದೆ. ಮುಂದಿನ ಆಡಳಿತದ ಹಾದಿಯಲ್ಲೂ ತಮಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಯುವ ಮುಖಂಡ ಚಿದಾನಂದ ಲಕ್ಷ್ಮಣ ಸವದಿ ಶುಭ ಹಾರೈಸಿದರು.
ಪಟ್ಟಣದ ರಾಯಲ್ ಸಭಾಂಗಣದಲ್ಲಿ ಪದೋನ್ನತಿ ಹೊಂದಿದ ತಹಸಿಲ್ದಾರ್ ಸಿದರಾಯ ಬೋಸಗಿ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಸಿದರಾಯ ಬೋಸಗಿ ಅಥಣಿಯಲ್ಲಿ ೨ ವರ್ಷ ಸಾರ್ಥಕ ಸೇವೆ ಸಲ್ಲಿಸಿದ್ದಾರೆ. ಜನ ಸಾಮಾನ್ಯರಿಗೆ ಬಡವರಿಗೆ ಸರ್ಕಾರದ ಸೇವೆಗಳನ್ನು ಪ್ರಾಮಾಣಿಕವಾಗಿ ಯಾವುದೇ ಕಪ್ಪು ಚುಕ್ಕಿ ಇಲ್ಲದೆ ಸೇವೆ ಸಲ್ಲಿಸಿ ಜನ ಮೆಚ್ಚುಗೆ ಗಳಿಸಿದ್ದಾರೆ. ಶಾಸಕರು ಹಾಗೂ ಸಚಿವ ಲಕ್ಷ್ಮಣ ಸವದಿ ಅವರ ಮಾರ್ಗದರ್ಶನದಲ್ಲಿ ಪ್ರತಿಯೊಂದು ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಇವರ ಪಾತ್ರ ಹಿರಿದಾಗಿತ್ತು. ಇವರ ಪಾರದರ್ಶಕ ಆಡಳಿತ ಮುಂಬರುವ ಅಧಿಕಾರಿಗಳಿಗೆ ಮತ್ತು ತಾಲೂಕ ಮಟ್ಟದ ಎಲ್ಲಾ ಅಧಿಕಾರಿಗಳಿಗೆ ಸ್ಪೂರ್ತಿದಾಯಕವಾಗಿದೆ ಎಂದರು.ಪಂ.ರಾಜ್ಯ ಇಂಜಿನಿಯರಿಂಗ್ ವಿಭಾಗದ ಅಭಿಯಂತರ ವೀರಣ್ಣ ವಾಲಿ ಮಾತನಾಡಿ, ಸರ್ಕಾರಿ ಅಧಿಕಾರಿಗಳಿಗೆ ವೃತ್ತಿ, ಪ್ರವೃತ್ತಿ ಮತ್ತು ನಿವೃತ್ತಿ ಕಡ್ಡಾಯ. ಸರ್ಕಾರ ನಮಗೆ ನೀಡಿರುವ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ಮೂಲಕ ಜನರ ಮತ್ತು ಜನಪ್ರತಿನಿಧಿಗಳ ಹೃದಯ ಗೆಲ್ಲಬಹುದು. ಸಿದರಾಯ ಬೋಸಗಿ ಅವರ ಸೇವೆ ನಮ್ಮೆಲ್ಲರಿಗೆ ಪ್ರೇರಣೆಯಾಗಿದೆ. ಪದೋನ್ನತಿ ಹೊಂದಿರುವ ಅವರ ಮುಂದಿನ ಆಡಳಿತ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.ಬಳಿಕ ಪದೋನ್ನತಿ ಹೊಂದಿದ ತಹಸೀಲ್ದಾರ್ ಸಿದರಾಯ ಬೋಸಗಿ ಮಾತನಾಡಿ, ಮಹಾ ತಪಸ್ವಿ ಮುರುಘೇಂದ್ರ ಶಿವಯೋಗಿಗಳ ತಪೋಭೂಮಿ ನನಗೆ ಎರಡು ವರ್ಷ ಸೇವೆ ಸಲ್ಲಿಸುವ ಸೌಭಾಗ್ಯ ದೊರೆತಿದ್ದು ನನ್ನ ಪುಣ್ಯ. ಧಾರ್ಮಿಕ ಸಂಸ್ಕಾರ, ಹೃದಯ ವೈಶಾಲ್ಯ, ಪ್ರೀತಿ ಮತ್ತು ಗೌರವ ಪೂರ್ವಕವಾಗಿ ಸ್ಪಂದನೆ ಮಾಡಿದ ಜನರ ಪ್ರೀತಿ ನನ್ನ ಹೃದಯದಲ್ಲಿದೆ. ಎಲ್ಲಾ ಇಲಾಖೆಗಳ ತಾಯಿ ಎನಿಸಿಕೊಂಡಿರುವ ಕಂದಾಯ ಇಲಾಖೆಯ ನನ್ನ ಎಲ್ಲಾ ಸಿಬ್ಬಂದಿ, ವಿವಿಧ ಇಲಾಖೆಯ ಅಧಿಕಾರಿಗಳು ಸಮನ್ವಯತೆ ಮತ್ತು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದ ಫಲದಿಂದ ನನಗೆ ಉತ್ತಮ ಆಡಳಿತ ನೀಡಲು ಸಾಧ್ಯವಾಗಿದೆ. ಸಹಕಾರಿ ಸಚಿವ ಲಕ್ಷ್ಮಣ ಸವದಿ ಅವರ ಮಾರ್ಗದರ್ಶನದಲ್ಲಿ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಪ್ರಮಾಣಿಕ ಪ್ರಯತ್ನ ಮಾಡಿದ್ದೇವೆ. ಎರಡು ವರ್ಷಗಳ ಸಾರ್ಥಕ ಸೇವೆ ನನಗೆ ಸಂತೃಪ್ತಿ ತಂದಿದೆ ಎಂದು ಸ್ಮರಿಸಿದರು.ಈ ವೇಳೆ ಕಾಗವಾಡ ತಹಸಿಲ್ದಾರ್ ಆನಂದ ನೇಮಗೌಡ, ಉಪತಹಸಿಲ್ದಾರ್ ಮಹಾದೇವ ಬಿರಾದಾರ, ಬಿ.ವೈ.ಹೊಸಕೇರಿ, ತಾಪಂ ಅಧಿಕಾರಿ ಶಿವಾನಂದ ಕಲ್ಲಾಪುರ, ಸಿಪಿಐ ಸಂತೋಷ್ ಹಳ್ಳೂರ, ನೌಕರರ ಸಂಘದ ಅಧ್ಯಕ್ಷ ರಾಮಗೊಂಡ ಪಾಟೀಲ, ಬಿಇಒ ಎಂ.ಆರ್.ಮುಂಜೆ, ಅಭಿಯಂತರರಾದ ಪ್ರವೀಣ ಹುಣಸಿಕಟ್ಟಿ, ಗುರುರಾಜ್ ಸಂಪಣ್ಣವರ, ಸಿದ್ದು ಲಾಂಡ್ಗೆ, ಸಿಡಿಪಿಓ ಮಲ್ಲಪ್ಪ ಕೋಳಿ, ಪುರಸಭೆಯ ದತ್ತಾತ್ರೇಯ ಹಳ್ಳಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.