ಭೋಪಾಲ್: ಗಂಡ ಹನಿಮೂನ್‌ಗೆ ಗೋವಾದ ಬದಲು ಅಯೋಧ್ಯೆಗೆ ಕರೆದೊಯ್ದಿದ್ದಾನೆ ಎಂದು ಆರೋಪಿಸಿ 5 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಸ್ಥಳೀಯ ಮಹಿಳೆಯೊಬ್ಬರು ಡೈವೋರ್ಸ್ ಕೋರಿದ್ದಾರೆ.
ಮೊದಲು ಗಂಡ ಮೊದಲು ಗೋವಾಗೆ ಹನಿಮೂನ್ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದರು.
ಆದರೆ ಹೊರಡಲು ಒಂದು ದಿನ ಬಾಕಿ ಉಳಿದಿರುವಾಗ ಅವರ ತಾಯಿ ಕೋರಿಕೆ ಮೇರೆಗೆ ಕುಟುಂಬ ಸದಸ್ಯರೆಲ್ಲರೂ ಗೋವಾಗೆ ಬದಲಾಗಿ ಅಯೋಧ್ಯೆ ಮತ್ತು ವಾರಾಣಸಿಗೆ ಕರೆದೊಯ್ದು ತನ್ನ ಕನಸನ್ನು ನುಚ್ಚುನೂರು ಮಾಡಿದ್ದಾರೆ ಎಂದು ಪತ್ನಿ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದ್ದಾಳೆ.