23 ಸೀಟಿಗೆ ಉದ್ಧವ್‌ ಪಟ್ಟು: ಮಹಾರಾಷ್ಟ್ರದಲ್ಲೂ ಕೈಗೆ ಸಂಕಷ್ಟ

KannadaprabhaNewsNetwork |  
Published : Jan 26, 2024, 01:45 AM IST
ಉದ್ಧವ್‌ | Kannada Prabha

ಸಾರಾಂಶ

25 ಸೀಟುಗಳ ಹಂಚಿಕೆಗೆ ಎನ್‌ಸಿಪಿ- ಕಾಂಗ್ರೆಸ್‌ ನಡುವೆ ಸೆಣಸು ನಡೆಸಲಿ. ಮಿಕ್ಕ 23 ಸೀಟುಗಳನ್ನು ಉದ್ಧವ್‌ ಬಣ ತಮಗೆ ಬಿಟ್ಟುಕೊಡಿ ಎಂದು ಬಿಗಿಪಟ್ಟು ಹಿಡಿದಿದ್ದು, ಮೈತ್ರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

ನಾಸಿಕ್: ಇಂಡಿಯಾ ಮೈತ್ರಿಕೂಟದ ಸೀಟು ಹಂಚಿಕೆ ಬಿಕ್ಕಟ್ಟು ಪಶ್ಚಿಮ ಬಂಗಾಳ, ಪಂಜಾಬ್‌, ಬಿಹಾರದ ಬಳಿಕ ಮಹಾರಾಷ್ಟ್ರದಲ್ಲೂ ಕಾಂಗ್ರೆಸ್ ಪಾಲಿಗೆ ಸಂಕಷ್ಟ ತಂದಿಡುವ ಎಲ್ಲಾ ಸಾಧ್ಯತೆಗಳು ಕಂಡುಬಂದಿವೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ 48ರ ಪೈಕಿ ತಾನು ಸ್ಪರ್ಧಿಸಿದ್ದ 23 ಸ್ಥಾನಗಳಲ್ಲಿ ಈ ಬಾರಿಯೂ ತಾನು ಸ್ಪರ್ಧಿಸಿಯೇ ತೀರುವುದಾಗಿ ಉದ್ಧವ್‌ ಬಣದ ಶಿವಸೇನೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಈ ಮೂಲಕ ಕಾಂಗ್ರೆಸ್‌ ಬೇಕಿದ್ದರೆ, ಎನ್‌ಸಿಪಿ ಜೊತೆ ಸೀಟು ಹಂಚಿಕೆ ಮಾತುಕತೆ ನಡೆಸಲಿ ಎಂದು ಪರೋಕ್ಷವಾಗಿ ಸೂಚಿಸಿದೆ.

ಕಳೆದ ಬಾರಿ ಕಾಂಗ್ರೆಸ್‌ 26 ಮತ್ತು ಎನ್‌ಸಿಪಿ 22 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದವು.

ಆದರೆ ಈ ಬಾರಿ 48ರ ಪೈಕಿ 23 ತನಗೆ ಬೇಕೆಂದು ಉದ್ಧವ್‌ ಬಣ ಪಟ್ಟು ಹಿಡಿದಿದೆ. ಹೀಗಾಗಿ ಉಳಿದ 25 ಸೀಟುಗಳನ್ನು ಕಾಂಗ್ರೆಸ್‌ ಮತ್ತು ಎನ್‌ಸಿಪಿ ಹಂಚಿಕೊಳ್ಳಬೇಕಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕಾಶ್ಮೀರಿಗಳಿಂದ ಇರಾನಿಗರ ನೆರವಿಗೆ ಚಿನ್ನ, ಬೆಳ್ಳಿ ದಾನ!
2011ರ ಗಣತಿ ಆಧರಿಸಿ ಸಂಸತ್ತಲ್ಲಿ ಶೇ.33 ಮಹಿಳಾ ಮೀಸಲು?