ಲಾಲು ಇಬ್ಬರು ಪುತ್ರಿಯರು ಸೇರಿ 22 ಕ್ಷೇತ್ರಕ್ಕೆ ಆರ್‌ಜೆಡಿ ಅಭ್ಯರ್ಥಿಗಳ ಹೆಸರು ಪ್ರಕಟ

KannadaprabhaNewsNetwork |  
Published : Apr 11, 2024, 12:53 AM ISTUpdated : Apr 11, 2024, 04:54 AM IST
ರೋಹಿಣಿ ಆಚಾರ್ಯ | Kannada Prabha

ಸಾರಾಂಶ

ಮುಂಬರುವ ಲೋಕಸಭಾ ಚುನಾವಣೆ ಸಂಬಂಧ ಲಾಲು ಪ್ರಸಾದ್‌ ಯಾದವ್‌ ನೇತೃತ್ವದ ಆರ್‌ಜೆಡಿ 22 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ

ಪಟನಾ: ಮುಂಬರುವ ಲೋಕಸಭಾ ಚುನಾವಣೆ ಸಂಬಂಧ ಲಾಲು ಪ್ರಸಾದ್‌ ಯಾದವ್‌ ನೇತೃತ್ವದ ಆರ್‌ಜೆಡಿ 22 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. 

ರಾಜ್ಯದ 40 ಸ್ಥಾನಗಳ ಪೈಕಿ ಇಂಡಿಯಾ ಮೈತ್ರಿಕೂಟದ ಆರ್‌ಜೆಡಿ 23 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಈ ಪೈಕಿ 22 ಸ್ಥಾನಗಳಿಗೆ ಅದು ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. ಇದರಲ್ಲಿ ಲಾಲು ಪ್ರಸಾದ್‌ ಅವರ ಇಬ್ಬರು ಪುತ್ರಿಯರಾದ ರೋಹಿಣಿ ಆಚಾರ್ಯ, ಮಿಸಾ ಭಾರತಿಗೆ ಸ್ಥಾನ ನೀಡಲಾಗಿದೆ. 

ಈ ಹಿಂದೆ ಲಾಲು ಪ್ರಸಾದ್‌ ಹಲವು ವರ್ಷ ಪ್ರತಿನಿಧಿಸಿದ್ದ ಸರಣ್‌ನಿಂದ ರೋಹಿಣಿ ಮತ್ತು ಪಾಟಲಿಪುತ್ರದಿಂದ ಮಿಸಾ ಕಣಕ್ಕೆ ಇಳಿಯುತ್ತಿದ್ದಾರೆ. ಮಿಸಾ, ಹಾಲಿ ರಾಜ್ಯಸಭಾ ಸದಸ್ಯೆಯೂ ಹೌದು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದೆಹಲಿಯ 30 ವರ್ಷದ ಜಡ್ಜ್‌ ಶವ ಪತ್ತೆ, ಆತ್ಮಹತ್ಯೆ ಶಂಕೆ
ಪ್ರಸಾರ ಭಾರತಿ ಮುಖ್ಯಸ್ಥ ಹುದ್ದೆಗೆ ಪ್ರಸೂನ್‌ ಜೋಶಿ