ರಾಜಕೀಯವಾಗಿ ಮತ್ತು ಸೈದ್ಧಾಂತಿಕವಾಗಿ ತಾವು ಕಟುವಾಗಿ ಟೀಕಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಸೋನಿಯಾ ಗಾಂಧಿ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಹಲವು ಟೀಕೆಗಳ ಜೊತೆಜೊತೆಗೆ ಮೆಚ್ಚುಗೆಯ ಮಾತುಗಳನ್ನೂ ಆಡಿದ್ದಾರೆ.

ನವದೆಹಲಿ: ರಾಜಕೀಯವಾಗಿ ಮತ್ತು ಸೈದ್ಧಾಂತಿಕವಾಗಿ ತಾವು ಕಟುವಾಗಿ ಟೀಕಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಸೋನಿಯಾ ಗಾಂಧಿ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಹಲವು ಟೀಕೆಗಳ ಜೊತೆಜೊತೆಗೆ ಮೆಚ್ಚುಗೆಯ ಮಾತುಗಳನ್ನೂ ಆಡಿದ್ದಾರೆ.

ಬಿಲಾಂಗಿಂಗ್‌: ಎ ಜರ್ನಿ ಆಫ್‌ ಲವ್‌’

ಮಂಗಳವಾರ ಬಿಡುಗಡೆಯಾದ, ‘ಬಿಲಾಂಗಿಂಗ್‌: ಎ ಜರ್ನಿ ಆಫ್‌ ಲವ್‌’ನಲ್ಲಿ, ಸಂಸತ್ತಿನ ಅವರಣದಲ್ಲಿ ಮೋದಿ ಅವರೊಂದಿಗೆ ತಮ್ಮ ಮುಖಾಮುಖಿ, ಮೋದಿ ಅವರ ಜತೆಗಿನ ಲಘು ಮಾತುಕತೆ, ಹೆಚ್ಚೇನು ಆಪ್ತವಲ್ಲದ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.

ತಮ್ಮ ಕಲ್ಪನೆಯ ಭಾರತಕ್ಕಾಗಿ ಹೋರಾಡುತ್ತಿದ್ದಾರೆ

‘ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕಲ್ಪನೆಯ ಭಾರತಕ್ಕಾಗಿ ಹೋರಾಡುತ್ತಿದ್ದಾರೆ ಮತ್ತು ನಾನು ನನ್ನದೇ ಕಲ್ಪನೆಯ ಭಾರತಕ್ಕಾಗಿ ಹೋರಾಡುತ್ತಿದ್ದೇನೆ. ಆದರೆ ಅವರ ಆಪ್ತರು ಹೇಳಿದಷ್ಟು ಮೋದಿ ಅವರ ಆರಂಭಿಕ ಜೀವನ ಕಷ್ಟಕರವಾಗಿಲ್ಲದೇ ಇದ್ದರೂ, ಅವರು ಅವಕಾಶವಿಲ್ಲದ ಈ ಜಗತ್ತಿನಲ್ಲಿ, ಆರ್‌ಎಸ್‌ಎಸ್‌ನೊಳಗೆ ಸಾಕಷ್ಟು ಶ್ರಮವಹಿಸಿ ಅಧಿಕಾರಕ್ಕೆ ಏರಿದ್ದಾರೆ’ ಎಂದು ಸೋನಿಯಾ ಬಣ್ಣಿಸಿದ್ದಾರೆ.