ಕಳೆದ 12 ವರ್ಷಗಳಲ್ಲಿ ದೇಶ, ಪ್ರಜಾಪ್ರಭುತ್ವ ಮತ್ತು ಸಾಂಸ್ಥಿಕ ರಚನೆಗಳಿಗೆ ವ್ಯಾಪಕ ಹಾನಿ ಮಾಡಲಾಗಿದೆ. ಒಂದು ವೇಳೆ ಈ ಸರ್ಕಾರ (ಮೋದಿ ಸರ್ಕಾರ) ಹೋದರೂ ಆರೋಗ್ಯಕರ ವ್ಯವಸ್ಥೆ ಮರುರೂಪಿಸಲು ಸಾಕಷ್ಟು ಸಮಯ ಹಾಗೂ ರಾಜಕೀಯ ಪಕ್ಷಗಳ ಪರಿಶ್ರಮ ಬೇಕಾಗಬಹುದು’ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
ಮೋದಿ ಅವಧಿಯಲ್ಲಿ
ಪ್ರಜಾಪ್ರಭುತ್ವಕ್ಕೆಭಾರೀ ಹಾನಿ ಆಗಿದೆ
ನವದೆಹಲಿ: ಕಳೆದ 12 ವರ್ಷಗಳಲ್ಲಿ ದೇಶ, ಪ್ರಜಾಪ್ರಭುತ್ವ ಮತ್ತು ಸಾಂಸ್ಥಿಕ ರಚನೆಗಳಿಗೆ ವ್ಯಾಪಕ ಹಾನಿ ಮಾಡಲಾಗಿದೆ. ಒಂದು ವೇಳೆ ಈ ಸರ್ಕಾರ (ಮೋದಿ ಸರ್ಕಾರ) ಹೋದರೂ ಆರೋಗ್ಯಕರ ವ್ಯವಸ್ಥೆ ಮರುರೂಪಿಸಲು ಸಾಕಷ್ಟು ಸಮಯ ಹಾಗೂ ರಾಜಕೀಯ ಪಕ್ಷಗಳ ಪರಿಶ್ರಮ ಬೇಕಾಗಬಹುದು’ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ. ಹಿಂದೂ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.==
ಬಾಬ್ರಿ ಮಸೀದಿಯಧ್ವಂಸ ನೋಡಿ
ನಾನು ಕಣ್ಣೀರಿಟ್ಟಿದ್ದೆನವದೆಹಲಿ: ‘1992ರ ಡಿ.6 ರಂದು ಟಿವಿಯಲ್ಲಿ ಬಾಬ್ರಿ ಮಸೀದಿ ಧ್ವಂಸಗೊಳ್ಳುವುದನ್ನು ನೋಡಿ ನನಗೆ ಕಣ್ಣೀರು ಬಂದಿತ್ತು’ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.ಬ್ರಿಟಿಷ್ ಪತ್ರಿಕೆ ‘ದಿ ಗಾರ್ಡಿಯನ್’ಗೆ ನೀಡಿದ ಸಂದರ್ಶನದಲ್ಲಿ, ‘ಬಾಬ್ರಿ ಮಸೀದಿ ಧ್ವಂಸ ನೋಡಿ ನನಗೆ ಕಣ್ಣೀರು ಬಂದಿತ್ತು. ಆ ಘಟನೆಯು ಭಾರತದ ಜಾತ್ಯತೀತ ಸ್ವರೂಪ ಉಳಿಸಿಕೊಳ್ಳಲು ಒಂದು ಸುದೀರ್ಘ ಹೋರಾಟದ ಅಗತ್ಯವಿದೆ ಎಂಬುದನ್ನು ನನ್ನ ಅರಿವಿಗೆ ತಂದಿತು’ ಎಂದರು.==ಪಿಟಿಐ ನವದೆಹಲಿ‘ತುರ್ತು ಪರಿಸ್ಥಿತಿ ಅವಧಿಯಲ್ಲಿ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಮೊಟಕುಗೊಳಿಸಲಾಗಿದ್ದರೂ ಅದನ್ನು ಸಂವಿಧಾನಬದ್ಧವಾಗಿಯೇ ಮಾಡಲಾಗಿತ್ತು. ಇಂದಿರಾ ಗಾಂಧಿ ಅವರ ದೃಷ್ಟಿಯಿಂದ ನೋಡಿದರೆ ಆ ಸಮಯದಲ್ಲಿ ಅವರು ಹಿಂಸಾತ್ಮಕ ಪ್ರತಿಭಟನೆಗಳು ಹಾಗೂ ವ್ಯಾಪಕವಾಗುತ್ತಿದ್ದ ಸಂಘಟಿತ ಗಲಭೆಯನ್ನು ಎದುರಿಸಲು ಪರದಾಡುತ್ತಿದ್ದರು. ಹೀಗಾಗಿ ತುರ್ತುಸ್ಥಿತಿ ಅನಿವಾರ್ಯವಾಗಿತ್ತು’ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿಕೊಂಡಿದ್ದಾರೆ.ತಮ್ಮ ಆತ್ಮಕಥೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಕೃತಿ ಬಿಡುಗಡೆಗೂ ಮುನ್ನ ‘ದಿ ಹಿಂದೂ’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಹಿಂದೆ ನಡೆದು ಹೋದ ಘಟನೆಗಳ ಕುರಿತು ಹಿಂತಿರುಗಿ ನೋಡುವುದರಿಂದ ಜನರಿಗೆ ಅದನ್ನು ಸರಿಯಾಗಿ ಗ್ರಹಿಸಲು ನೆರವಾಗುತ್ತದೆ ಮತ್ತು ಸ್ವತಃ ಇಂದಿರಾ ಗಾಂಧಿ ಅವರೇ ಮುಂದೆ ಆ ಘಟನೆಗೆ ಸಾರ್ವಜನಿಕವಾಗಿ ವಿಷಾದವನ್ನೂ ವ್ಯಕ್ತಪಡಿಸಿದ್ದಲ್ಲದೆ, ತುರ್ತು ಪರಿಸ್ಥಿತಿಗಾಗಿ ಕ್ಷಮೆಯನ್ನೂ ಕೋರಿದ್ದರು’ ಎಂದರು.‘ತುರ್ತುಪರಿಸ್ಥಿತಿಗೆ ಸಂಜಯ್ ಗಾಂಧಿ ಅವರ ಹೆಸರು ಪರ್ಯಾಯ ಪದವಾದಂತಿತ್ತು, ಇಂದಿರಾ ಗಾಂಧಿ ಅವರು ಪುತ್ರ ರಾಜೀವ್ ಗಾಂಧಿ ಹಾಗೂ ಇತರರ ಮಾತುಕೇಳಿದ್ದರೆ ತುರ್ತು ಪರಿಸ್ಥಿತಿ ಅವಧಿಯ ಕೌರ್ಯವನ್ನು ತಪ್ಪಿಸಬಹುದಿತ್ತೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಸೋನಿಯಾ, ‘ಸಾರ್ವಜನಿಕರ ಮನಸ್ಸಿನಲ್ಲಿ ತುರ್ತುಪರಿಸ್ಥಿತಿಗೆ ಸಂಜಯ್ ಅವರೊಬ್ಬರೇ ಪರ್ಯಾಯವಾಗಿ ಕಂಡರೂ ಇತರೆ ಕಾಂಗ್ರೆಸ್ ನಾಯಕರಿಂದಲೂ ಇಂದಿರಾ ಮೇಲೆ ತೀವ್ರ ಒತ್ತಡವಿತ್ತು. ರಾಜೀವ್ ಗಾಂಧಿ ಅವರಂಥ ವಿಭಿನ್ನ ಚಿಂತನೆಗಳನ್ನು ಹೊಂದಿದ್ದ ವ್ಯಕ್ತಿಗಳು ಇಂದಿರಾ ಗಾಂಧಿ ಅವರ ಸುತ್ತ ತೀರಾ ಕಡಿಮೆ ಸಂಖ್ಯೆಯಲ್ಲಿದ್ದರು’ ಎಂದ ಸೋನಿಯಾ, ‘ಕೊನೆಗೂ ನನ್ನ ನನ್ನ ಅತ್ತೆ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಸ್ವಂತ ವಿವೇಚನೆ ಬಳಸಿಕೊಂಡು ಪರಿಹಾರೋಪಾಯಗಳನ್ನು ಕಂಡುಕೊಂಡರೆಂಬುದು ನನ್ನ ಭಾವನೆ’ ಎಂದು ಸ್ಪಷ್ಟಪಡಿಸಿದರು.‘ತುರ್ತು ಪರಿಸ್ಥಿತಿ ಬಳಿಕವಷ್ಟೇ ನನಗೆ ಆ ಸಮಯದ ಪರಿಣಾಮಗಳ ಗಂಭೀರತೆ ನನಗೆ ತಿಳಿಯಿತು. ಪ್ರಜಾತಾಂತ್ರಿಕ ಹಕ್ಕುಗಳನ್ನು ಆ ಸಮಯದಲ್ಲಿ ಮೊಟಕುಗೊಳಿಸಲಾಗಿತ್ತು. ಹೇಬಿಯಸ್ ಕಾರ್ಪಸ್ ಅನ್ನು ರದ್ದು ಮಾಡಲಾಗಿತ್ತು. ಆದರೆ ಇದನ್ನು ಸಾಂವಿಧಾನಿಕವಾಗಿಯೇ ಮಾಡಲಾಗಿತ್ತು’ ಎಂದು ಸೋನಿಯಾ ತಿಳಿಸಿದರು.
==** ಸೋನಿಯಾ ಇಟಲಿ ಕನ್ನಡಕ ತೆರೆಯಲಿ: ಬಿಜೆಪಿ- ಅವರ ಹೇಳಿಕೆಗಳು ಸತ್ಯ ಮರೆಮಾಚುವುದಿಲ್ಲ: ಚುಗ್ನವದೆಹಲಿ: ಮೋದಿ ಸರ್ಕಾರ ಹಾಗೂ ಕಮಲ ಪಕ್ಷದ ವಿರುದ್ಧ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮಾಡಿರುವ ಆರೋಪಗಳಿಗೆ ಬಿಜೆಪಿ ತೀವ್ರ ಕಿಡಿಕಾರಿದೆ. ‘ಕಳೆದ 12 ವರ್ಷಗಳಲ್ಲಿ ದೇಶದಲ್ಲಾಗಿರುವ ಪ್ರಗತಿಯನ್ನು ಸೋನಿಯಾ ಗಾಂಧಿ ಅವರು ಇಟಾಲಿಯನ್ ಕನ್ನಡಕ ತೆಗೆದು ನೋಡಲಿ’ ಎಂದಿದೆ.ಇದೇ ವೇಳೆ, ‘ತುರ್ತು ಪರಿಸ್ಥಿತಿ ಹೇರಿಕೆಯನ್ನು ಸೋನಿಯಾ ಸಮರ್ಥಿಸಿಕೊಂಡಿರೆ’ ಎಂದು ಆರೋಪಿಸಿರುವ ಬಿಜೆಪಿ, ‘ಅವರ ಪ್ರಚಾರದ ಪ್ರಯತ್ನವು ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ’ ಎಂದು ಆರೋಪಿಸಿದೆ.‘ನೀವು ಇಟಾಲಿಯನ್ ಕನ್ನಡಕ ತೆಗೆದು ನೋಡಿದರೆ ಭಾರತವು ನಿಮಗೆ ಸ್ಪಷ್ಟವಾಗಿ ಕಾಣಲಿದೆ. ಸಬ್ಕಾ ಸಾಥ್ ಸಬ್ಕಾ ವಿಕಾಸ್, ಸಬ್ಕಾ ಪ್ರಯಾಸ್ ಪರಿಕಲ್ಪನೆ ಮತ್ತು ಶೇ.7.8ರಷ್ಟು ಆರ್ಥಿಕ ಬೆಳವಣಿಗೆಯೊಂದಿಗೆ ಅಂತಾರಾಷ್ಟ್ರೀಯ ಶಕ್ತಿಯಾಗಿ ಭಾರತ ಬೆಳೆಯುತ್ತಿದೆ. ಹೊಸ ಭರವಸೆಯ ಅಲೆ ದೇಶದ ನಾಗರಿಕರಲ್ಲಿ ಮನೆ ಮಾಡಿದೆ. ಇದನ್ನು ನಿಮಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ’ ಎಂದು ಹಿರಿಯ ಬಿಜೆಪಿ ನಾಯಕ ಚರಣ್ ಚುಗ್ ಟಾಂಗ್ ನೀಡಿದರು.+++++++ಜಾತಿ, ಧರ್ಮ ಮತ್ತು ವೋಟ್ ಬ್ಯಾಂಕ್ ರಾಜಕೀಯದ ಆಧಾರದ ಮೇಲೆ ದೇಶವನ್ನು ವಿಭಜಿಸಿದ್ದೇ ಕಾಂಗ್ರೆಸ್ನ ಇತಿಹಾಸ ಎಂದು ಆರೋಪಿಸಿದ ಅವರು, ಸೋನಿಯಾ ಅವರು, ಮೊದಲು ತಮ್ಮ ಪಕ್ಷದ ಆಡಳಿತಾವಧಿಯಲ್ಲಿ ನಡೆದ ವಿವಿಧ ಹಗರಣಗಳು ಹಾಗೂ ಸಿಖ್ ದಂಗೆ ಮತ್ತು ಭೋಪಾಲ್ ದುರಂತ ಕುರಿತೂ ಕೃತಿ ಬರೆಯಲಿ ಎಂದು ಟಾಂಗ್ ನೀಡಿದ್ದಾರೆ.ಸೋನಿಯಾ ಗಾಂಧಿ ಅವರಿಗೆ ಬಿಜೆಪಿ ನೇತೃತ್ವದ ಎನ್ಡಿಎ ಅಡಿ ಸನಾತನ ಧರ್ಮದ ಬೆಳವಣಿಗೆಯನ್ನು ನೋಡಲು ಆಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
=** ಮೋದಿ ಅವಧಿಯಲ್ಲಿ ದೇಶಕ್ಕೆ ಭಾರಿ ಹಾನಿ: ಸೋನಿಯಾ
- 12 ವರ್ಷಗಳಲ್ಲಿ ನಮ್ಮ ದೇಶದ ಪ್ರಜಾಪ್ರಭುತ್ವಕ್ಕೆ ಹಾನಿ- ಸಾಂಸ್ಥಿಕ ರಚನೆಗೆ ಭಾರೀ ಧಕ್ಕೆ । ಮರುರೂಪಿಸಲು ಟೈಂ ಬೇಕು- ಪತ್ರಿಕಾ ಸಂದರ್ಶನದಲ್ಲಿ ಎಐಸಿಸಿ ನಾಯಕಿ ತೀವ್ರ ಆಕ್ರೋಶಪಿಟಿಐ ನವದೆಹಲಿಕಳೆದ 12 ವರ್ಷಗಳಲ್ಲಿ ದೇಶ, ಪ್ರಜಾಪ್ರಭುತ್ವ ಮತ್ತು ಸಾಂಸ್ಥಿಕ ರಚನೆಗಳಿಗೆ ವ್ಯಾಪಕ ಹಾನಿ ಮಾಡಲಾಗಿದೆ. ಒಂದು ವೇಳೆ ಈ ಸರ್ಕಾರ (ಮೋದಿ ಸರ್ಕಾರ) ಹೋದರೂ ಆರೋಗ್ಯಕರ ವ್ಯವಸ್ಥೆ ಮರುರೂಪಿಸಲು ಸಾಕಷ್ಟು ಸಮಯ ಹಾಗೂ ರಾಜಕೀಯ ಪಕ್ಷಗಳ ಪರಿಶ್ರಮ ಬೇಕಾಗಬಹುದು’ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ಆತ್ಮಕಥೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಲೋಕಾರ್ಪಣೆಗೂ ಮುನ್ನ‘ದಿ ಹಿಂದೂ’ ಪತ್ರಿಕೆಗೆ ಸಂದರ್ಶನ ನೀಡಿದ ಅವರು, ‘ಜನರಲ್ಲೀಗ ಚಡಪಡಿಕೆ ಆರಂಭವಾಗಿದೆ, ಮೋದಿ ಸರ್ಕಾರದಿಂದಾದ ಹಾನಿಯನ್ನು ಅವರು ಅರ್ಥಮಾಡಿಕೊಳ್ಳುತ್ತಿದ್ದಾರೆ. ದೇಶವು ಸರಿಯಾದ ಆಡಳಿತಕ್ಕೆಮರಳವುದನ್ನು ಜನ ಸ್ವಾಗತಿಸುತ್ತಾರೆಂಬ ಬಗ್ಗೆ ನನಗೆ ನಂಬಿಕೆ ಇದೆ’ ಎಂದರು.ನಮ್ಮ ಪಕ್ಷ ಹೋರಾಡುತ್ತಿದೆ:‘ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್, ಇತರೆ ಪಕ್ಷಗಳಿಗೆ ಸಮಾನವಾದ ಅವಕಾಶಗಳು ಸಿಗುತ್ತಿಲ್ಲ. ಚುನಾವಣಾ ಆಯೋಗದಂಥ ಸಾಂವಿಧಾನಿಕ ಸಂಸ್ಥೆಗಳು, ಮುಖ್ಯವಾಹಿನಿ ಮಾಧ್ಯಮಗಳ ಮೇಲಿನ ನಿಯಂತ್ರಣ, ಹಣದ ಶಕ್ತಿ ಮತ್ತು ಧರ್ಮದ ದುರ್ಬಳಕೆಯ ಹೊರತಾಗಿಯೂ ನಮ್ಮ ಪಕ್ಷ ಹೋರಾಟ ಕೈಬಿಟ್ಟಿಲ್ಲ. ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಅನೇಕ ಕಿರುಕುಳ ಎದುರಿಸಿದ ಹೊರತಾಗಿಯೂ ಎಲ್ಲಾ ಗ್ರಾಮ, ಎಲ್ಲಾ ಜಿಲ್ಲೆಗಳಲ್ಲೂ ಸಂವಿಧಾನಿಕ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ’ ಎಂದು ಹೇಳಿದರು.‘ಇತ್ತೀಚಿನ ತಿಂಗಳುಗಳಲ್ಲಿ ಹಲವು ಚುನಾವಣೆಗಳನ್ನು ಕಳವು ಮಾಡಲಾಗಿದೆ ಎಂಬುದು ಸಾಬೀತಾಗಿದೆ, ಜನರಿಗೆ ಈ ಕುರಿತ ಅರಿವೂ ಇದೆ’ ಎಂದು ಆರೋಪಿಸಿರುವ ಅವರು, ‘ಕಾಂಗ್ರೆಸ್ ಸಮಾನ ಮನಸ್ಕ ಪಕ್ಷಗಳ ಜತೆಗೆ ಕೆಲಸ ಮಾಡುತ್ತಿದ್ದು, ನಮ್ಮ ಗೆಲ್ಲುವ ಅವಕಾಶ ದಿನದಿಂದ ದಿನಕ್ಕೆ ಸುಧಾರಿಸುತ್ತಿದೆ’ ಎಂದು ಅಭಿಪ್ರಾಯಪಟ್ಟರು,
ಹಲವು ಮಾರ್ಗಗಳಿವೆ:‘ಪ್ರಧಾನಿ ಮೋದಿ ಮತ್ತು ಅವರ ಬೆಳವಣಿಗೆಯಿಂದ ಕಾಂಗ್ರೆಸ್ ಪಕ್ಷ ಯಾವ ಪಾಠ ಕಲಿಯಬಹುದು?’ ಎಂಬ ಪ್ರಶ್ನೆಗೆ, ‘ಕಾಂಗ್ರೆಸ್ ಪಕ್ಷದೊಳಗೆ ರಾಜಕೀಯವಾಗಿ ಬೆಳೆಯಲು ಹಲವು ಮಾರ್ಗಗಳಿವೆ. ಇದಕ್ಕೆ ಡಾ.ಮನಮೋಹನ ಸಿಂಗ್, ಮಲ್ಲಿಕಾರ್ಜುನ ಖರ್ಗೆ ಉದಾಹರಣೆ. ಹಾಗಾಗಿ ನಮಗೆ ಆರೆಸ್ಸೆಸ್ನಿಂದ ಹೆಚ್ಚಿನದನ್ನೇನೂ ಕಲಿಯುವ ಅಗತ್ಯವಿದೆ’ ಎಂದು ಅನಿಸುತ್ತಿಲ್ಲ ಎಂದು ಹೇಳಿಕೊಂಡರು.