ಭೂಲಂಚ ಹಗರಣ: ಲಾಲು ಪ್ರಾಸಿಕ್ಯೂಷನ್‌ಗೆ ಮುರ್ಮು ಅಸ್ತು

Follow Us

ಸಾರಾಂಶ

ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವ ನೌಕರಿಗಾಗಿ ಭೂಮಿ (ಭೂ ಉದ್ಯೋಗ) ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್‌ ಯಾದವ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಪ್ರಾಸಿಕ್ಯೂಷನ್‌ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮತಿ ನೀಡಿದ್ದಾರೆ.

ನವದೆಹಲಿ: ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವ ನೌಕರಿಗಾಗಿ ಭೂಮಿ (ಭೂ ಉದ್ಯೋಗ) ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್‌ ಯಾದವ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಪ್ರಾಸಿಕ್ಯೂಷನ್‌ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮತಿ ನೀಡಿದ್ದಾರೆ.

ಇಡಿ ಅಧಿಕಾರಿಗಳು ಕಳೆದ ಆಗಸ್ಟ್‌ನಲ್ಲಿ ಲಾಲು, ಪುತ್ರ ತೇಜಸ್ವಿ ಯಾದವ್‌ ಮತ್ತು ಕುಟುಂಬದ ಇತರ ಸದಸ್ಯರ ವಿರುದ್ಧ ಹಣ ವರ್ಗಾವಣೆ ತಡೆ ಕಾಯ್ಡೆ ಅಡಿಯಲ್ಲಿ ಜಾರ್ಜ್‌ಶೀಟ್‌ ಸಲ್ಲಿಸಿತ್ತು. 2004-2009ರ ಅವಧಿಯಲ್ಲಿ ಭಾರತೀಯ ರೈಲ್ವೆಯಲ್ಲಿ ಗ್ರೂಪ್ ಡಿ ಬದಲಿ ಅಧಿಕಾರಿಗಳ ನೇಮಕಾತಿಯಲ್ಲಿ ಆಗ ಕೇಂದ್ರ ಸಚಿವರಾಗಿದ್ದ ಲಾಲು ಭ್ರಷ್ಟಾಚಾರ ನಡೆಸಿದ್ದಾರೆ. ಲಂಚ ರೂಪದಲ್ಲಿ ಭೂಮಿ ಪಡೆದಿದ್ದಾರೆ ಎಂಬ ಆರೋಪವಿದೆ.

ಈ ಪ್ರಕರಣದಲ್ಲಿ ಸಿಬಿಐ ಸಹ ಮೂರು ಆರೋಪ ಪಟ್ಟಿಗಳನ್ನು ಸಹ ಸಲ್ಲಿಸಿದೆ. ಇದೇ ಹಗರಣದಲ್ಲಿ ಅವರ ವಿರುದ್ಧ ಇದೀಗ ಪ್ರಾಸಿಕ್ಯೂಷನ್‌ಗೆ ಮುರ್ಮು ಬಿಎನ್‌ಎಸ್‌ ಕಾನೂನಿನಡಿ ಅನುಮತಿಸಿದ್ದಾರೆ.