ಅಕ್ಕಪಕ್ಕದ ದೇಶಗಳಿಗೂ ಯುದ್ಧದ ಕೊಳ್ಳಿ

KannadaprabhaNewsNetwork |  
Published : Mar 05, 2026, 02:00 AM ISTUpdated : Mar 05, 2026, 02:24 AM IST
war

ಸಾರಾಂಶ

ಅಮೆರಿಕ, ಇಸ್ರೇಲ್‌ ಮತ್ತು ಇರಾನ್ ನಡುವಣ ಯುದ್ಧ ಬುಧವಾರ 6ನೇ ದಿನ ಪೂರೈಸಿದ್ದು ಮತ್ತಷ್ಟು ದಾಳಿ, ಹಾನಿಗೆ ಸಾಕ್ಷಿಯಾಗಿದೆ. ಜೊತೆಗೆ ಯುದ್ಧಪ್ರದೇಶದ ವ್ಯಾಪ್ತಿ ಮತ್ತು ತೀವ್ರತೆ ಕೂಡಾ ವಿಸ್ತಾರಗೊಂಡಿದ್ದು, ಭಾರೀ ಆತಂಕಕ್ಕೆ ಕಾರಣವಾಗಿದೆ.

 ದುಬೈ: ಅಮೆರಿಕ, ಇಸ್ರೇಲ್‌ ಮತ್ತು ಇರಾನ್ ನಡುವಣ ಯುದ್ಧ ಬುಧವಾರ 6ನೇ ದಿನ ಪೂರೈಸಿದ್ದು ಮತ್ತಷ್ಟು ದಾಳಿ, ಹಾನಿಗೆ ಸಾಕ್ಷಿಯಾಗಿದೆ. ಜೊತೆಗೆ ಯುದ್ಧಪ್ರದೇಶದ ವ್ಯಾಪ್ತಿ ಮತ್ತು ತೀವ್ರತೆ ಕೂಡಾ ವಿಸ್ತಾರಗೊಂಡಿದ್ದು, ಭಾರೀ ಆತಂಕಕ್ಕೆ ಕಾರಣವಾಗಿದೆ. ಇದುವರೆಗೆ ಯುದ್ಧ ಇದುವರೆಗೆ ಮಧ್ಯಪ್ರಾಚ್ಯ ಮತ್ತು ಇಸ್ರೇಲ್‌ಗೆ ಸೀಮಿತವಾಗಿತ್ತು. ಆದರೆ ಅದು ಇದೀಗ ಒಂದೆಡೆ ಭಾರತದ ಮಡಿಲಿಗೆ ಬಂದಿದೆ. ಮತ್ತೊಂದೆಡೆ ಇರಾನ್‌ ಹಾರಿಸಿದ್ದ ಕ್ಷಿಪಣಿಯನ್ನು ನ್ಯಾಟೋ ಪಡೆಗಳು ಹೊಡೆದುರುಳಿಸಿವೆ. ಇದರ ನಡುವೆ ಇಸ್ರೇಲ್‌ ಮೇಲೆ ಇರಾನ್‌ ಕ್ಲಸ್ಟರ್‌ ಬಾಂಬ್‌ ಬಳಸಿದ್ದು, ಅದನ್ನು ರಷ್ಯಾ ಅಥವಾ ಚೀನಾ ನೀಡಿರಬಹುದು ಎಂಬ ಗುಮಾನಿ ವ್ಯಕ್ತವಾಗುವುದರೊಂದಿಗೆ ಯುದ್ಧದ ತೀವ್ರತೆ ಹೆಚ್ಚಿದೆ.ಇರಾನ್‌ ದಾಳಿ :

ಇರಾನ್‌ ಸೇನಾಪಡೆಗಳು, ಬುಧವಾರ ಸೌದಿ ಅರೇಬಿಯಾದಲ್ಲಿರುವ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಕಚೇರಿ, ದುಬೈನಲ್ಲಿರುವ ಅಮೆರಿಕ ರಾಯಭಾರ ಕಚೇರಿ, ಕತಾರ್‌ನ ಅಲ್‌ ಉದೇದ್‌ ಸೇನಾ ನೆಲೆ, ಸೌದಿ ಅರೇಬಿಯಾದ ರಾಸ್ ತನುರಾ ತೈಲ ಸಂಸ್ಕರಣ ಘಟಕ, ಇಸ್ರೇಲ್‌ ಸರ್ಕಾರದ ಕಟ್ಟಡಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ.

ಜೊತೆಗೆ ಒಂದು ವೇಳೆ ಲೆಬನಾನ್‌ ರಾಜಧಾನಿ ಭೈರೂತ್‌ನಲ್ಲಿರುವ ನಮ್ಮ ರಾಯಭಾರ ಕಚೇರಿ ಮೇಲೆ ದಾಳಿ ನಡೆಸಿದರೆ ನಾವು ನಾವು ವಿಶ್ವದೆಲ್ಲೆಡೆ ಇಸ್ರೇಲ್ ರಾಯಭಾರ ಕಚೇರಿ ಮೇಲೆ ದಾಳಿ ನಡೆಸುತ್ತೇವೆ ಎಂದು ಇರಾನ್‌ ಎಚ್ಚರಿಸಿದೆ. ಜೊತೆಗೆ ಕಳೆದ 5 ದಿನಗಳಿಂದ ಅಮೆರಿಕ ಮತ್ತು ಇಸ್ರೇಲ್‌ ನಡೆಸುತ್ತಿರುವ ದಾಳಿಯಲ್ಲಿ 1045 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.

ಜಂಟಿ ಪ್ರತಿದಾಳಿ:

ಇರಾನ್‌ ಸತತ ದಾಳಿಯ ಬೆನ್ನಲ್ಲೇ ಜಂಟಿ ದಾಳಿ ಮುಂದುವರೆಸಿರುವ ಅಮೆರಿಕ -ಇಸ್ರೇಲ್‌, ಇರಾನ್‌ ರಾಜಧಾನಿ ಟೆಹ್ರಾನ್ ಸೇರಿ ಹಲವು ನಗರಗಳ ಮೇಲೆ ಕ್ಷಿಪಣಿ, ಬಾಂಬ್ ಮಳೆಗರೆದಿವೆ. ಜೊತೆಗೆ ಎಫ್‌ 35ಐ ಅಧಿರ್‌ ಮೂಲಕ ಇರಾನ್‌ನ ಯಾಕ್‌ -130 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದೇವೆ. ನಮ್ಮ ವಿಮಾನಗಳಿಗೆ ಅಪಾಯಕಾರಿಯಾಗಿದ್ದ ಟೆಹ್ರಾನ್‌ ವಿಮಾನ ನಿಲ್ದಾಣದ ಡಿಫೆನ್ಸ್‌ ಆ್ಯಂಡ್‌ ಡಿಟೆಕ್ಷನ್‌ ಸಿಸ್ಟಮ್‌ ಧ್ವಂಸ ಮಾಡಿದ್ದೇವೆ. ಬ್ಯಾಲೆಸ್ಟಿಕ್‌ ಕ್ಷಿಪಣಿಗಳ ಉತ್ಪಾದನೆ, ಸಂಗ್ರಹ ಮತ್ತು ಉಡ್ಡಯನಕ್ಕಾಗಿ ಇರಾನ್‌ ಬಳಸುತ್ತಿದ್ದ ಇಸ್‌ಫಹಾನ್‌ ಘಟಕ ಧ್ವಂಸಗೊಳಿಸಿದ್ದಾಗಿ ಇಸ್ರೇಲ್‌ ಹೇಳಿದೆ. ಈ ನಡುವೆ ಇರಾನ್‌ ಹಾರಿಸಿದ ಕ್ಷಿಪಣಿಯೊಂದನ್ನು ನ್ಯಾಟೋ ಪಡೆಗಳು ಹೊಡೆದುರುಳಿಸಿದೆ ಎಂದು ಟರ್ಕಿ ಹೇಳಿದೆ. ಆದರೆ ಈ ಕ್ಷಿಪಣಿ ಗುರಿ ಏನಾಗಿತ್ತು ಎಂಬುದು ಪತ್ತೆಯಾಗಿಲ್ಲ

ಈ ನಡುವೆ ನಮ್ಮ ಮೇಲೆ ಇದುವರೆಗೂ ಇರಾನ್‌ನಿಂದ 1000ಕ್ಕೂ ಹೆಚ್ಚು ಡ್ರೋನ್‌, ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಯುಎಇ ಹೇಳಿದ್ದರೆ, ತನ್ನ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಸೌದಿ ಅರೇಬಿಯಾ ತಿರುಗೇಟಿನ ಎಚ್ಚರಿಕೆ ನೀಡಿದೆ

ಎಷ್ಟು ದಾಳಿ:

ಕಳೆದ 5 ದಿನಗಳಲ್ಲಿ ಇರಾನ್‌ನ ಒಂದು ಸಬ್‌ಮರೀನ್‌ ಸೇರಿ 17 ಹಡಗು ಧ್ವಂಸಗೊಳಿಸಿದ್ದೇವೆ, 2000ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆಸಿದ್ದೇವೆ. ಯುದ್ಧದಲ್ಲಿ ಅಮೆರಿಕದ 50000 ಯೋಧರು, 200ಕ್ಕೂ ಯುದ್ಧ ವಿಮಾನಗಳು ಭಾಗಿಯಾಗಿವೆ. ದಿನದ 24 ಗಂಟೆಯೂ ಯುದ್ಧ ನಡೆಯುತ್ತಿದೆ. ಮತ್ತೊಂದೆಡೆ ಜೊತೆಗೆ ಇರಾನ್‌ನಿಂದ ಇದುವರೆಗೆ 500 ಬ್ಯಾಲೆಸ್ಟಿಕ್‌ ಕ್ಷಿಪಣಿ, 2000ಕ್ಕೂ ಹೆಚ್ಚು ಅಧಿಕ ಡ್ರೋನ್‌ ದಾಳಿ ನಡೆಸಲಾಗಿದೆ ಎಂದು ಅಮೆರಿಕದ ಸೇನಾಪಡೆ ಹೇಳಿದೆ.

ಇಸ್ರೇಲ್‌- ಲೆಬನಾನ್‌:

ಈ ನಡುವೆ ಇಸ್ರೇಲ್‌ ಮತ್ತು ಲೆಬನಾನ್ ನಡುವೆ ಬುಧವಾರವೂ ದಾಳಿ ಪ್ರತಿದಾಳಿ ನಡೆದಿದೆ. ಈ ವೇಳೆ ಸಾಕಷ್ಟು ಸಾವು ನೋವು ಸಂಭವಿಸಿದೆ.

ಯುದ್ಧಾಪರಾಧ:

ಈ ನಡುವೆ ಎರಡು ದಿನಗಳ ಹಿಂದೆ ಇರಾನ್‌ನ ಶಾಲೆಯೊಂದರ ಮೇಲೆ ದಾಳಿ ನಡೆಸಿ 165 ಮಕ್ಕಳನ್ನು ಬಲಿ ಪಡೆದ ಪ್ರಕರಣ ಅಂತಾರಾಷ್ಟ್ರೀಯ ನಿಯಮಗಳ ಉಲ್ಲಂಘನೆ. ಇದು ಯುದ್ಧಾಪರಾಧ ಎಂದು ವಿಶ್ವಸಂಸ್ಥೆ ಆಕ್ರೋಶ ವ್ಯಕ್ತಪಡಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಹೋರ್ಮುಜ್‌ನಲ್ಲಿ ಸಾಗುವ ಹಡಗಿಗೆ ನಮ್ಮ ನೌಕಾಪಡೆ ಕಾವಲು: ಟ್ರಂಪ್‌
ಯುದ್ಧ ನಿಲ್ಲಿಸಲು ಸಿದ್ಧ, ಆದರೆ ಷರತ್ತುಗಳು ಅನ್ವಯ: ಇರಾನ್‌