ಲಿವ್-ಇನ್ ಸಂಬಂಧ ಗಾಂಧರ್ವ ವಿವಾಹಕ್ಕೆ ಸಮ: ಮದ್ರಾಸ್‌ ಹೈ

KannadaprabhaNewsNetwork |  
Published : Jan 22, 2026, 02:18 AM IST
ಮದುವೆ | Kannada Prabha

ಸಾರಾಂಶ

ಲಿವ್-ಇನ್ ಸಂಬಂಧವೆಂಬುದು ಭಾರತೀಯ ಸಂಪ್ರದಾಯದ ಗಾಂಧರ್ವ ವಿವಾಹಕ್ಕೆ ಸಮ. ಹಾಗಾಗಿ ಲಿವ್‌-ಇನ್‌ನಲ್ಲಿರುವ ಮಹಿಳೆಯರನ್ನು ಕಾನೂನು ರಕ್ಷಣೆಯಿಂದ ಹೊರಗಿಡಬಾರದು. ಸೂಕ್ತ ಸಂದರ್ಭಗಳಲ್ಲಿ ಅವರಿಗೆ ಹೆಂಡತಿಯ ಸ್ಥಾನಮಾನ ನೀಡಬೇಕು ಎಂದು ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠವು ಬುಧವಾರ ಅಭಿಪ್ರಾಯಪಟ್ಟಿದೆ.

- ಲಿವ್-ಇನ್‌ ಸ್ತ್ರೀಯರೂ ಪತ್ನಿ ಸ್ಥಾನಕ್ಕೆ ಅರ್ಹ

- ಸೆಕ್ಸ್‌ ಬಳಿಕ ವಂಚಿಸುವ ಪುರುಷರಿಗೆ ಚಾಟಿ

ಮದುರೈ: ಲಿವ್-ಇನ್ ಸಂಬಂಧವೆಂಬುದು ಭಾರತೀಯ ಸಂಪ್ರದಾಯದ ಗಾಂಧರ್ವ ವಿವಾಹಕ್ಕೆ ಸಮ. ಹಾಗಾಗಿ ಲಿವ್‌-ಇನ್‌ನಲ್ಲಿರುವ ಮಹಿಳೆಯರನ್ನು ಕಾನೂನು ರಕ್ಷಣೆಯಿಂದ ಹೊರಗಿಡಬಾರದು. ಸೂಕ್ತ ಸಂದರ್ಭಗಳಲ್ಲಿ ಅವರಿಗೆ ಹೆಂಡತಿಯ ಸ್ಥಾನಮಾನ ನೀಡಬೇಕು ಎಂದು ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠವು ಬುಧವಾರ ಅಭಿಪ್ರಾಯಪಟ್ಟಿದೆ.

ತಿರುಚಿರಾಪಳ್ಳಿಯ ವ್ಯಕ್ತಿಯೊಬ್ಬ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ, ಲಿವ್‌-ಇನ್ ಸಂಬಂಧದಲ್ಲಿದ್ದು, ದೈಹಿಕ ಸಂಬಂಧ ಬೆಳೆಸಿದ್ದ. ಆ ಬಳಿಕ ಆಕೆಗೆ ಕೈಕೊಟ್ಟು ಜೈಲು ಪಾಲಾಗಿದ್ದ. ಆತನ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಶ್ರೀಮತಿ, ‘ಲಿವ್-ಇನ್ ಸಂಬಂಧಗಳು ಭಾರತೀಯ ಸಮಾಜಕ್ಕೆ ಸಾಂಸ್ಕೃತಿಕ ಆಘಾತ. ಆದಾಗ್ಯೂ ಅವು ಪ್ರಚಲಿತದಲ್ಲಿವೆ. ಪ್ರಾಚೀನ ಭಾರತದಲ್ಲಿ 8 ಬಗೆಯ ವಿವಾಹಗಳನ್ನು ಉಲ್ಲೇಖಿಸಲಾಗಿದೆ. ಅದರಲ್ಲಿ ಪರಸ್ಪರ ಪ್ರೀತಿ ಮತ್ತು ಒಪ್ಪಿಗೆಯಿಂದ ಒಂದಾಗುವ ಗಾಂಧರ್ವ ವಿವಾಹವೂ ಒಂದು. ಇಂದಿನ ಲಿವ್-ಇನ್ ಸಂಬಂಧಗಳನ್ನು ಅದೇ ದೃಷ್ಟಿಯಲ್ಲಿ ನೋಡಬೇಕು’ ಎಂದರು.

ಜೊತೆಗೆ, ‘ಮೊದಲು ಗಂಡಸರು ತಮ್ಮನ್ನು ತಾವು ನವಕಾಲದ ವ್ಯಕ್ತಿಗಳು ಎಂದು ಬಿಂಬಿಸಿಕೊಳ್ಳುತ್ತಾರೆ. ಸಂಬಂಧ ಹದಗೆಟ್ಟಾಗ, ಮಹಿಳೆಯ ಶೀಲವನ್ನು ಪ್ರಶ್ನಿಸುತ್ತಾರೆ. ಅಂಥ ಗಂಡಸರು ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಎಚ್ಚರಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ನೆಟ್ಟಲ್ಲಿ ವಿಡಿಯೋ ಹಾಕಿ ವ್ಯಕ್ತಿಗೆ ಸಾವಿಗೆ ಕಾರಣ : ಕೇರಳದ ಶಿಮ್ಜಿತಾ ಸೆರೆ
ಲಿವ್ - ಇನ್ ಸಂಬಂಧ ಗಾಂಧರ್ವ ವಿವಾಹಕ್ಕೆ ಸಮ : ಕೋರ್ಟ್‌