ಗ್ರೀನ್‌ಲ್ಯಾಂಡ್‌ ವಶಕ್ಕೆ ಬಲಪ್ರಯೋಗ ಮಾಡಲ್ಲ: ಟ್ರಂಪ್‌

KannadaprabhaNewsNetwork |  
Published : Jan 22, 2026, 02:15 AM IST
Donald Trump

ಸಾರಾಂಶ

 ಗ್ರೀನ್‌ಲ್ಯಾಂಡ್ ದ್ವೀಪ ಪಡೆದೇ ತೀರುವ ಹಠಕ್ಕೆ ಬಿದ್ದಿರುವ   ಟ್ರಂಪ್, ಗ್ರೀನ್‌ಲ್ಯಾಂಡ್ ಉತ್ತರ ಅಮೆರಿಕದ ಭಾಗ. ನಮ್ಮನ್ನು ಹೊರತುಪಡಿಸಿದರೆ ಇನ್ಯಾರಿಂದಲೂ ಅದರ ರಕ್ಷಣೆ ಸಾಧ್ಯವಿಲ್ಲ. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ನಮಗೆ ಗ್ರೀನ್‌ಲ್ಯಾಂಡ್‌ ಬೇಕು. ಆದರೆ ಇದಕ್ಕಾಗಿ ಬಲಪ್ರಯೋಗ ಮಾಡುವುದಿಲ್ಲ  

 ದಾವೋಸ್‌: ಡೆನ್ಮಾರ್ಕ್‌ನ ಸ್ವಾಯತ್ತ ಪ್ರದೇಶವಾದ ಗ್ರೀನ್‌ಲ್ಯಾಂಡ್ ದ್ವೀಪವನ್ನು ಪಡೆದೇ ತೀರುವ ಹಠಕ್ಕೆ ಬಿದ್ದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್, ಗ್ರೀನ್‌ಲ್ಯಾಂಡ್ ಉತ್ತರ ಅಮೆರಿಕದ ಭಾಗ. ನಮ್ಮನ್ನು ಹೊರತುಪಡಿಸಿದರೆ ಇನ್ಯಾರಿಂದಲೂ ಅದರ ರಕ್ಷಣೆ ಸಾಧ್ಯವಿಲ್ಲ. 

ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ನಮಗೆ ಗ್ರೀನ್‌ಲ್ಯಾಂಡ್‌ ಬೇಕು

ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ನಮಗೆ ಗ್ರೀನ್‌ಲ್ಯಾಂಡ್‌ ಬೇಕು. ಆದರೆ ಇದಕ್ಕಾಗಿ ಬಲಪ್ರಯೋಗ ಮಾಡುವುದಿಲ್ಲ ಎಂದು ಬುಧವಾರ ಹೇಳಿದ್ದಾರೆ. ಆದರೆ ಯಾವ ಮಾರ್ಗದ ಮೂಲಕ ವಶಕ್ಕೆ ಪಡೆಯಲಿದ್ದಾರೆ ಎಂಬ ಗುಟ್ಟನ್ನು ಅವರು ಬಿಟ್ಟುಕೊಟ್ಟಿಲ್ಲ.

ಬುಧವಾರ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗದಲ್ಲಿ ಮಾತನಾಡಿದ ಅವರು, ‘ಡೆನ್ಮಾರ್ಕ್‌ ಮತ್ತು ಗ್ರೀನ್‌ಲ್ಯಾಂಡ್‌ ಜನರ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ಅಮೆರಿಕ ಮಾತ್ರವೇ ಗ್ರೀನ್‌ಲ್ಯಾಂಡ್‌ ಅನ್ನು ರಕ್ಷಿಸಬಲ್ಲದಾಗಿದೆ. ಡೆನ್ಮಾರ್ಕ್‌ ಸಣ್ಣದೊಂದು ಸುಂದರ ಮಂಜುಗಡ್ಡೆಯ ತುಂಡು. ನಾವು ಅವರಿಗೆ ಕೊಟ್ಟಿದ್ದಕ್ಕೆ ಹೋಲಿಸಿದರೆ ಮರಳಿ ಕೇಳುತ್ತಿರುವುದು ಅತ್ಯಲ್ಪ ಮಾತ್ರವೇ. 

ಅಲ್ಲಿನ ಖನಿಜ ಸಂಪತ್ತಿನ ಕಾರಣಕ್ಕೆ ಅಲ್ಲ

ಜಗತ್ತಿನ ರಕ್ಷಣೆಗಾಗಿ ನಮಗೆ ಗ್ರೀನ್‌ಲ್ಯಾಂಡ್‌ ಬೇಕಿದೆಯೋ ಹೊರತೂ ಅಲ್ಲಿನ ಖನಿಜ ಸಂಪತ್ತಿನ ಕಾರಣಕ್ಕೆ ಅಲ್ಲ. ಆದರೆ ನೀವು (ನ್ಯಾಟೋ) ಅದನ್ನು ಕೊಡುವುದಿಲ್ಲ. ನೀವು ಸರಿ ಎಂದರೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ. ಇಲ್ಲ ಎಂದರೆ ನಾವದನ್ನು ನೆನಪಿಸಿಕೊಳ್ಳುತ್ತೇವೆ. ಗ್ರೀನ್‌ಲ್ಯಾಂಡ್‌ ವಶಕ್ಕೆ ನಾನು ಬಲಪ್ರಯೋಗ ಮಾಡಬಹುದು ಎಂದು ಜನರು ಯೋಚಿಸುತ್ತಿದ್ದಾರೆ. 

ಆದರೆ ಗ್ರೀನ್‌ಲ್ಯಾಂಡ್‌ ವಶಪಡಿಸಿಕೊಳ್ಳಲು ಯಾವುದೇ ಬಲಪ್ರಯೋಗ ಮಾಡುವುದಿಲ್ಲ. ಈ ಅಸುರಕ್ಷಿತ ದ್ವೀಪವು ವಾಸ್ತವದಲ್ಲಿ ಉತ್ತರ ಅಮೆರಿಕದ ಭಾಗ. ಅದು ನಮ್ಮ ಪ್ರದೇಶ’ ಎಂದರು.ಹಲವು ಯುರೋಪಿಯನ್‌ ದೇಶಗಳು ಕೂಡಾ ಹಲವು ಭೂಭಾಗಗಳನ್ನು ವಶಪಡಿಸಿಕೊಂಡಿವೆ. ಅದರಲ್ಲಿ ತಪ್ಪೇನೂ ಇಲ್ಲ. ಹಿಂದೆ ಗ್ರೀನ್‌ಲ್ಯಾಂಡ್‌ಗಾಗಿ ನಾವು ಡೆನ್ಮಾರ್ಕ್‌ ಪರ ಹೋರಾಡಿದ್ದಾಗ ಶಕ್ತಿಶಾಲಿಯಾಗಿದ್ದೆವು. ಆದರೆ ಇದೀಗ ಅದಕ್ಕಿಂತ ಹೆಚ್ಚು ಶಕ್ತಿಶಾಲಿಯಾಗಿದ್ದೇವೆ ಎಂದು ನ್ಯಾಟೋ ದೇಶಗಳಿಗೆ ಎಚ್ಚರಿಕೆ ಸಂದೇಶ ರವಾನಿಸುವ ಯತ್ನವನ್ನೂ ಟ್ರಂಪ್‌ ಮಾಡಿದರು.

ಅಲ್ಲದೆ ಗ್ರೀನ್‌ಲ್ಯಾಂಡ್‌ ಹಸ್ತಾಂತರ ಕುರಿತಂತೆ ಶೀಘ್ರವೇ ಅಮೆರಿಕದ ಜೊತೆ ಮಾತುಕತೆ ನಡೆಸುವಂತೆ ಡೆನ್ಮಾಕ್‌ಗೆ ಎಚ್ಚರಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ನೆಟ್ಟಲ್ಲಿ ವಿಡಿಯೋ ಹಾಕಿ ವ್ಯಕ್ತಿಗೆ ಸಾವಿಗೆ ಕಾರಣ : ಕೇರಳದ ಶಿಮ್ಜಿತಾ ಸೆರೆ
ಲಿವ್ - ಇನ್ ಸಂಬಂಧ ಗಾಂಧರ್ವ ವಿವಾಹಕ್ಕೆ ಸಮ : ಕೋರ್ಟ್‌