ಪ್ರಯಾಗರಾಜ್‌ : ಇಂದಿನಿಂದ 45 ದಿನ ಕಾಲ 12 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳ ವೈಭವ

KannadaprabhaNewsNetwork |  
Published : Jan 13, 2025, 12:46 AM ISTUpdated : Jan 13, 2025, 07:09 AM IST
ಪ್ರಯಾಗರಾಜ್‌ ಸಂಗಮ | Kannada Prabha

ಸಾರಾಂಶ

12 ವರ್ಷಗಳಿಗೊಮ್ಮೆ ನಡೆಯುವ ವಿಶ್ವದ ಬೃಹತ್‌ ಧಾರ್ಮಿಕ ಸಮಾಗಮವಾದ ‘ಮಹಾ ಕುಂಭಮೇಳ’ಕ್ಕೆ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಪುಷ್ಯ ಹುಣ್ಣಿಮೆಯ ಪವಿತ್ರ ದಿನವಾದ ಸೋಮವಾರ ಚಾಲನೆ ಸಿಗಲಿದೆ.

 ಪ್ರಯಾಗರಾಜ್‌ : 12 ವರ್ಷಗಳಿಗೊಮ್ಮೆ ನಡೆಯುವ ವಿಶ್ವದ ಬೃಹತ್‌ ಧಾರ್ಮಿಕ ಸಮಾಗಮವಾದ ‘ಮಹಾ ಕುಂಭಮೇಳ’ಕ್ಕೆ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಪುಷ್ಯ ಹುಣ್ಣಿಮೆಯ ಪವಿತ್ರ ದಿನವಾದ ಸೋಮವಾರ ಚಾಲನೆ ಸಿಗಲಿದೆ. ಪುಣ್ಯಸ್ನಾನದೊಂದಿಗೆ ಆರಂಭವಾಗಲಿರುವ ಕಾರ್ಯಕ್ರಮ ಫೆ.26ರ ಶಿವರಾತ್ರಿಯಂದು 45 ದಿನಗಳ ಬಳಿಕ ಸಂಪನ್ನಗೊಳ್ಳಲಿದೆ.

ಈ ಬಾರಿಯ ಕುಂಭಮೇಳಕ್ಕೆ ದಾಖಲೆ 35- 40 ಕೋಟಿ ಜನರ ಆಗಮನದ ನಿರೀಕ್ಷೆಯಿದ್ದು, ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಸರ್ಕಾರ ಅಭೂತಪೂರ್ವ ಸಿದ್ಧತೆಗಳನ್ನು ನಡೆಸಿದೆ. ದೇಶ ವಿದೇಶಗಳಿಂದ ಆಗಮಿಸುವ ಭಕ್ತರಿಗೆ ಎಲ್ಲಾ ಮೂಲಸೌಕರ್ಯ ಒದಗಿಸುವುದರ ಜೊತೆಗೆ ಅತ್ಯಾಧುನಿಕ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಿದೆ.

ಪ್ರಯಾಗ್‌ರಾಜ್‌ ನಗರದ ನದಿ ತಟದ ಸಮೀಪದಲ್ಲೇ 10000 ಎಕರೆ ಪ್ರದೇಶದಲ್ಲಿ ಮಹಾಕುಂಭ ನಗರ ಸ್ಥಾಪಿಸಲಾಗಿದ್ದು, ಅಲ್ಲಿ ವಸತಿ, ಶೌಚಾಲಯ, ಚಿಕಿತ್ಸೆ, ಭದ್ರತೆ, ಧಾರ್ಮಿಕ ಕಾರ್ಯಕ್ರಮಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠೆಯ ಬಳಿಕದ ಮೊದಲ ಕುಂಭವಾಗಿರುವುದರಿಂದ ಇದು ಇನ್ನಷ್ಟು ಮಹತ್ವ ಪಡೆದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸುಪ್ರೀಂನಲ್ಲಿ ವಕೀಲೆ ಆದ ಬಂಗಾಳದ ಮುಖ್ಯಮಂತ್ರಿ ದೀದಿ!
7 ಲಕ್ಷ ಸೇಬು ಮರ ಉಳಿಸಲು ಚಿಪ್ಕೋ ಚಳವಳಿ : 3 ಕಾಶ್ಮೀರ ರೈಲ್ವೆಗಳ ರದ್ದು