ಅಕ್ರಮ ಹಣ ವರ್ಗಾವಣೆ : ರೇ*ಸ್ಟ್‌ ಜ್ಯೋತಿಷಿ ಖರಾತ್‌ಗೆ ಇ.ಡಿ.ಶಾಕ್‌

KannadaprabhaNewsNetwork |  
Published : Apr 14, 2026, 02:00 AM ISTUpdated : Apr 14, 2026, 06:39 AM IST
Ashok Kharat

ಸಾರಾಂಶ

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಸ್ವಯಂ ಘೋಷಿತ ದೇವಮಾನವ ಅಶೋಕ್‌ ಖರಾತ್‌ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೋಮವಾರ ದಾಳಿ ನಡೆಸಿದ್ದಾರೆ.

ಮುಂಬೈ/ ನವದೆಹಲಿ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಸ್ವಯಂ ಘೋಷಿತ ದೇವಮಾನವ ಅಶೋಕ್‌ ಖರಾತ್‌ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೋಮವಾರ ದಾಳಿ ನಡೆಸಿದ್ದಾರೆ. ಖರಾತ್‌ರ ಹುಟ್ಟೂರು ನಾಸಿಕ್‌ನ 5 ಕಡೆ, ಪುಣೆ, ಶಿರಡಿಯ ಮೂರು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಈ ನಡುವೆ ಮೇಲೆ ಗರ್ಭಿಣಿಯೊಬ್ಬರು ದಾಖಲಿಸಿದ್ದ 3ನೇ ಅತ್ಯಾಚಾರ ಪ್ರಕರಣದಲ್ಲಿ ಖರಾತ್‌ರನ್ನು ನ್ಯಾಯಾಲಯ ಮತ್ತೆ 7 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ವ್ಯಾನ್- ಲಾರಿ ನಡುವೆ ಭೀಕರ ಅಪಘಾತ: 11 ಜನರ ಸಾವು

ಥಾಣೆ: ವ್ಯಾನೊಂದು, ಸಿಮೆಂಟ್‌ ಮಿಕ್ಸರ್‌ಗೆ ಡಿಕ್ಕಿ ಹೊಡೆದ ಪರಿಣಾಮ 3 ಮಹಿಳೆಯರು ಸೇರಿ 11 ಮಂದಿ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಸಂಭವಿಸಿದೆ. ಸ್ಥಳೀಯವಾಗಿ ಟ್ಯಾಕ್ಸಿ ಸೇವೆ ನೀಡುತ್ತಿದ್ದ ವ್ಯಾನ್‌, ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಸಿಮೆಂಟ್‌ ಮಿಕ್ಸರ್‌ ವಾಹನಕ್ಕೆ ಡಿಕ್ಕಿ ಅಪಘಾತ ಸಂಭವಿಸಿದೆ. 6 ಪ್ರಯಾಣಿಕರ ಕರೆದುಕೊಂಡು ಹೋಗುವ ಸಾಮರ್ಥ್ಯವಿದ್ದ ವ್ಯಾನ್‌ನಲ್ಲಿ ಮಿತಿ ಮೀರಿ ಪ್ರಯಾಣಿಕರನ್ನು ತುಂಬಿಸಲಾಗಿತ್ತು ಎಂದು ತಿಳಿದು ಬಂದಿದೆ. ಘಟನೆಗೆ ಮಹಾರಾಷ್ಟ್ರ ಸಿಎಂ ದೇವೆಂದ್ರ ಫಡ್ನವೀಸ್‌, ಡಿಸಿಎಂ ಏಕನಾಥ್‌ ಶಿಂಧೆ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.

ಪಾಕ್‌ ಷೇರು ಪಾತಳಕ್ಕೆ: 6730 ಅಂಕ ಭಾರೀ ಇಳಿಕೆ

ಕರಾಚಿ: ಇರಾನ್‌ ಮತ್ತು ಅಮೆರಿಕ ನಡುವೆ ಇಸ್ಲಾಮಾಬಾದ್‌ನಲ್ಲಿ ನಡೆದಿದ್ದ ಸಂಧಾನ ಮಾತುಕತೆ ವಿಫಲ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಷೇರುಪೇಟೆ ಪಾತಾಳಕ್ಕೆ ಇಳಿದಿದೆ. ಕೆಎಸ್‌ಇ-100 ಸೂಚ್ಯಂಕ 6730 ಅಂಕಗಳ ಭಾರೀ ಕುಸಿತ ಕಂಡು 1,60,726ರಲ್ಲಿ ಮುಕ್ತಾಯವಾಗಿದೆ.

ಡಾಲರ್‌ ಎದುರು ರುಪಾಯಿ ಮೌಲ್ಯ 93.35ಕ್ಕೆ ಕುಸಿತ

ಮುಂಬೈ: ಮಧ್ಯಪ್ರಾಚ್ಯ ಅನಿಶ್ಚಿತತೆ ನಡುವೆಯೇ, ಸೋಮವಾರ ಡಾಲರ್‌ ಎದುರು ರುಪಾಯಿ ಮೌಲ್ಯ 52 ಪೈಸೆ ಕುಸಿದು 93.35ರಲ್ಲಿ ಅಂತ್ಯವಾಗಿದೆ. ದಿನದ ಆರಂಭದಲ್ಲಿ 93.30 ಇದ್ದ ಮೌಲ್ಯ, ಮಧ್ಯದಲ್ಲಿ 93.40ಕ್ಕೆ ಕುಸಿದು ದಿನದಂತ್ಯಕ್ಕೆ 93.25ರಲ್ಲಿ ಮುಕ್ತಾಯವಾಯಿತು. ಶುಕ್ರವಾರ 32 ಪೈಸೆ ಇಳಿಕೆಯಾಗಿ 92.83ಕ್ಕೆ ತಲುಪಿತ್ತು. ಅಮೆರಿಕ-ಇರಾನ್‌ ಮಾತುಕತೆ ವಿಫಲವಾದ ಕಾರಣ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾಗಿದೆ. ಇದರಿಂದ ಡಾಲರ್‌ಗೆ ಜಾಗತಿಕ ಬೇಡಿಕೆ ಹೆಚ್ಚಾಗಿದ್ದು ರುಪಾಯಿ ಮೌಲ್ಯ ಕುಸಿಯಲು ಕಾರಣ.

ಸಂಧಾನ ಮುರಿದ ಬೆನ್ನಲ್ಲೇ ಕಚ್ಚಾತೈಲ ಮತ್ತೆ ಏರಿಕೆ: ಬ್ಯಾರೆಲ್‌ಗೆ 104 ಡಾಲರ್‌

ನವದೆಹಲಿ: ಇರಾನ್ ಮತ್ತು ಅಮೆರಿಕ ನಡುವೆ ಇಸ್ಲಾಮಾಬಾದ್‌ ಸಂಧಾನ ಮಾತುಕತೆ ಮುರಿದು ಬಿದ್ದ ಬೆನ್ನಲ್ಲೇ ಕಚ್ಚಾ ತೈಲದ ಬೆಲೆ ಮತ್ತೆ ಏರಿಕೆಯಾಗಿದೆ. ಬ್ಯಾರೆಲ್‌ ಕಚ್ಚಾ ತೈಲದ ಮೇಲೆ 103.69 ಡಾಲರ್‌ಗೆ ತಲುಪಿದೆ. ಇದರ ಜತೆಗೆ ಜಾಗತಿಕ ಮಾನದಂಡವಾದ ಬ್ರೆಂಟ್‌ ತೈಲ 102.24 ರು.ಗೆ ತಲುಪಿದೆ. ಯುದ್ಧ ಆರಂಭಕ್ಕೂ ಮುನ್ನ ಬ್ಯಾರೆಲ್‌ಗೆ 70 ಡಾಲರ್‌ ಇದ್ದ ಕಚ್ಚಾತೈಲದ ಬೆಲೆ ಕೆಲ ದಿನಗಳ ಹಿಂದೆ 120 ಡಾಲರ್‌ವರೆಗೂ ಏರಿತ್ತು. ಆದರೆ ಸಂಧಾನ ಸುದ್ದಿಯ ಹಿನ್ನೆಲೆಯಲ್ಲಿ ಮತ್ತೆ 90 ಡಾಲರ್‌ವರೆಗೂ ಇಳಿದಿತ್ತು. ಇದೀಗ ಸಂಧಾನ ವಿಫಲವಾಗಿದ್ದಕ್ಕೆ ಮತ್ತೆ ಏರಿಕೆ ಕಂಡಿದೆ.ಮತ್ತೊಂದೆಡೆ ಜಾಗತಿಕ ಷೇರುಪೇಟೆಯು ಕುಸಿದಿದೆ. ಜಪಾನ್‌ನ ನಿಕ್ಕೈ ಶೇ.0.7, ದಕ್ಷಿಣ ಕೊರಿಯಾದ ಕೊಸ್ಪಿ ಶೇ.0.9, ಫ್ರಾನ್ಸ್‌ ಮತ್ತು ಜರ್ಮನ್‌ ಶೇ.1, ಬ್ರಿಟನ್‌ 0.4ರಷ್ಟು ಇಳಿಕೆಯಾಗಿದೆ.

ಸಂಧಾನ ವಿಫಲ: ಸೆನ್ಸೆಕ್ಸ್‌ 702 ಅಂಕ ಇಳಿಕೆಕಂಡು 76847ರಲ್ಲಿ ಮುಕ್ತಾಯ

ಮುಂಬೈ: ಅಮೆರಿಕ ಮತ್ತು ಇರಾನ್ ನಡುವಿನ ಇಸ್ಲಾಮಾಬಾದ್‌ ಮಾತುಕತೆ ವಿಫಲ ಬೆನ್ನಲ್ಲೇ ಭಾರತದಲ್ಲಿ ಷೇರುಪೇಟೆ ಕುಸಿತ ಕಂಡಿದೆ. ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 702 ಅಂಕ ಇಳಿಕೆ ಕಂಡು 76847ರಲ್ಲಿ ಮುಕ್ತಾಯವಾಗಿದೆ. ನಿಫ್ಟಿ 207 ರಷ್ಟು ಕುಸಿದು 23,842 ಅಂತ್ಯಗೊಂಡಿದೆ. ಸೋಮವಾರ ವಹಿವಾಟು ಆರಂಭದಲ್ಲಿ ಸೂಚ್ಯಂಕ 1681 ಅಂಕಗಳವರೆಗೂ ಭಾರೀ ಕುಸಿತ ಕಂಡಿತ್ತಾದರೂ ಬಳಿಕ ಚೇತರಿಕೆ ಕಂಡಿತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಶೇ.33 ಸ್ತ್ರೀ ಮೀಸಲಿಗೆ ಲೋಕಸಭಾ ಸ್ಥಾನ 850ಕ್ಕೆ ಏರಿಕೆ
ಹೂಚೆಂಡು ಎಸೆದ ಅಭಿಮಾನಿ: ಬಾಂಬ್‌ ಎಂದು ಓಡಿದ ವಿಜಯ್‌