ರಾಜಕೀಯ ವೈರಿ ಬಳಿ ರೋಹಿಣಿ ಮನವಿ
ಇತ್ತೀಚಿನ ಚುನಾವಣೆಯಲ್ಲಿ ಆರ್‌ಜೆಡಿ ಸೋಲಿನ ಬಳಿಕ ತಮ್ಮ ಮೇಲೆ ಸೋದರ ತೇಜಸ್ವಿ ಯಾದವ್ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದ ರೋಹಿಣಿ, ರಾಜಕೀಯ ಮತ್ತು ಕುಟುಂಬವನ್ನು ತೊರೆಯುತ್ತಿರುವುದಾಗಿ ಘೋಷಿಸಿ ದೆಹಲಿಗೆ ತೆರಳಿದ್ದರು.
ಅದರ ಬೆನ್ನಲ್ಲೇ ಇದೀಗ ಟ್ವೀಟ್ ಮಾಡಿರುವ ರೋಹಿಣಿ, ‘ಹೆಣ್ಣುಮಕ್ಕಳಿಗೆ 10,000 ರು. ಹಣ ನೀಡುವುದು, ಬೈಸಿಕಲ್ ವಿತರಿಸುವುದಕ್ಕಿಂತ, ಅವರು ತಮ್ಮ ತವರುಮನೆಗೆ ಯಾವುದೇ ಭಯ, ಪಶ್ಚಾತ್ತಾಪ, ಅವಮಾನ ಅಥವಾ ತಮ್ಮನ್ನು ತಾವು ಸಮರ್ಥಿಕೊಳ್ಳುವ ಅಗತ್ಯವಿಲ್ಲದಂತೆ ಹೋಗುವಂತಾಗಬೇಕು’ ಎಂದು ಸಿಎಂ ನಿತೀಶ್ ಕುಮಾರ್‌ಗೆ ಮನವಿ ಮಾಡಿದ್ದಾರೆ. ಈ ಮೂಲಕ ಸೋದರ ತೇಜಸ್ವಿ ಯಾದವ್ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.==
ಸಾಲ ತೀರಿಸಲು ಹಿಮಾಚಲ ಸರ್ಕಾರದಿಂದ ಹೊಸ ಸಾಲ1 ಲಕ್ಷ ಕೋಟಿ ರು.ದಾಟಿದ ಸಾಲದ ಹೊರೆ
ಉಚಿತ ಕೊಡುಗೆಗಳಿಂದಾಗಿ ಸಂಕಷ್ಟದಲ್ಲಿ
ಮಂಡಿ/ಶಿಮ್ಲಾ: ಚುನಾವಣೆ ವೇಳೆ ಭರ್ಜರಿ ಗ್ಯಾರೆಂಟಿಗಳನ್ನು ಘೋಷಿಸಿ, ಹಲವನ್ನು ಜಾರಿಗೂ ತಂದಿರುವ ಹಿಮಾಚಲಪ್ರದೇಶದ ಕಾಂಗ್ರೆಸ್ ಸರ್ಕಾರ, ಇದೀಗ ಸಾಲದ ಸುಳಿಯಲ್ಲಿ ಸಿಲುಕಿದೆ. ‘ಹಳೆ ತೀರಿಸಲು ಮತ್ತೆ ಹೊಸ ಸಾಲವನ್ನು ತೆಗೆದುಕೊಂದ್ದೇವೆ’ ಎಂದು ಸ್ವತಂ ಸಿಎಂ ಸುಖವಿಂದರ್ ಸಿಂಗ್ ಸುಖು ಹೇಳಿದ್ದಾರೆ.ತಮ್ಮ ಸರ್ಕಾರ 3 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಮಂಡಿಯಲ್ಲಿ ನಡೆದ ಸಂಕಲ್ಪ ರ್‍ಯಾಲಿಯಲ್ಲಿ ಮಾತನಾಡಿದ ಸುಖು, ‘ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮೊದಲೇ ರಾಜ್ಯದ ಸಾಲ 75000 ಕೋಟಿ ರು. ಇತ್ತು. ಈಗ ಅದು 1 ಲಕ್ಷ ಕೋಟಿ ರು. ದಾಟಿಹೋಗಿದ್ದು, ಅದರ ಮರುಪಾವತಿಗೆ ಮತ್ತೆ ಸಾಲ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು’ ಎಂದಿದ್ದಾರೆ.ಅತ್ತ ಈ ಅವ್ಯವಸ್ಥೆಗೆ ಕಾಂಗ್ರೆಸ್ ಆಡಳಿತವೇ ಕಾರಣ ಎಂದು ಆರೋಪಿಸಿರುವ ರಾಜ್ಯ ಬಿಜೆಪಿ ನಾಯಕರು, ‘ಸಾರ್ವಜನಿಕ ಹಣದ ಕೆಟ್ಟ ನಿರ್ವಹಣೆಯೇ ಈ ಸ್ಥಿತಿಗೆ ಕಾರಣ’ ಎಂದಿದ್ದಾರೆ.ಹಿಮಾಚಲದ ಕಾಂಗ್ರೆಸ್ ಸರ್ಕಾರವು 18 ವರ್ಷ ಮೇಲ್ಪಟ್ಟ ಸ್ತ್ರೀಯರಿಗೆ ಮಾಸಿಕ 1,500 ರು., ಉದ್ಯೋಗ ಆರಂಭಿಸಲು ಯುವಕರಿಗೆ 680 ಕೋಟಿ ರು. ಸೇರಿದಂತೆ ಹಲವು ಗ್ಯಾರೆಂಟಿಗಳನ್ನು 2023ರಲ್ಲಿ ಜಾರಿಗೆ ತಂದಿತ್ತು.