ತಿರುಪತಿ ಝೂನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸಿಂಹಕ್ಕೆ ವ್ಯಕ್ತಿ ಬಲಿ!

KannadaprabhaNewsNetwork | Updated : Feb 16 2024, 08:39 AM IST

ಸಾರಾಂಶ

ಮೃಗಾಲಯವೊಂದರಲ್ಲಿ ಸಿಂಹದೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ.

ತಿರುಪತಿ: ಇಲ್ಲಿನ ವೆಂಕಟೇಶ್ವರ ಮೃಗಾಲಯದಲ್ಲಿ ಸಿಂಹದ ಸಂಚರಿಸುವ ಪರಿಧಿಯೊಳಗೆ ಹೋಗಿ ಸೆಲ್ಫಿ ತೆಗೆಯಲು ಯತ್ನಿಸಿದ ವ್ಯಕ್ತಿ ಸಿಂಹಕ್ಕೆ ಬಲಿಯಾದ ಘಟನೆ ಗುರುವಾರ ನಡೆದಿದೆ.

ರಾಜಸ್ಥಾನ ಮೂಲದ ವ್ಯಕ್ತಿ ಪ್ರಹ್ಲಾದ್‌ ಗುಲ್ಜಾರ್‌ ಎಂಬಾತ ಮೃಗಾಲಯಕ್ಕೆ ಬಂದಿದ್ದ. ಕುಡಿದ ಅಮಲಿನಲ್ಲಿ ಸಿಂಹ ಇರುವ ಆವರಣದ ಬೇಲಿ ಜಿಗಿದು, ಸಿಂಹದ ಅಂಗಳ ಪ್ರವೇಶಿಸಿದ್ದ.

ಅಲ್ಲಿ ತನ್ನ ಫೋನಿನಿಂದ ಸೆಲ್ಫಿ ತೆಗೆಯಲು ಯತ್ನಿಸಿದಾಗ ಸಿಂಹ ದಾಳಿ ಮಾಡಿದೆ. ಇದರಿಂದಾಗಿ ತಪ್ಪಿಸಿಕೊಳ್ಳಲು ಆಗದೇ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮೃಗಾಲಯ ಸಿಬ್ಬಂದಿ ತಿಳಿಸಿದ್ದಾರೆ.

Share this article