ಡ್ರೋನ್‌ ಬಾಂಬ್‌ ದಾಳಿ: ಮಣಿಪುರದಲ್ಲಿ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವಿನ ಸಂಘರ್ಷ ತೀವ್ರ

KannadaprabhaNewsNetwork |  
Published : Sep 04, 2024, 01:53 AM ISTUpdated : Sep 04, 2024, 05:52 AM IST
ಡ್ರೋನ್‌ | Kannada Prabha

ಸಾರಾಂಶ

ಮಣಿಪುರದಲ್ಲಿ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಡ್ರೋನ್‌ ಮೂಲಕ ಬಾಂಬ್‌ ದಾಳಿ ನಡೆಸಲಾಗುತ್ತಿದೆ. ಈ ದಾಳಿಗಳಲ್ಲಿ ಇಬ್ಬರು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ.

ಇಂಫಾಲ್‌: ಮಣಿಪುರದಲ್ಲಿ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವಿನ ಸಂಘರ್ಷ ತಹಬದಿಗೆ ಸರ್ಕಾರಗಳು ಹರಸಾಹಸ ಪಡುತ್ತಿರುವಾಗಲೇ, ದುಷ್ಕರ್ಮಿಗಳು ಡ್ರೋನ್‌ ಮೂಲಕ ಬಾಂಬ್‌ ದಾಳಿ ನಡೆಸುವ ದುಷ್ಕೃತ್ಯಕ್ಕೆ ಇಳಿಯುವ ಮೂಲಕ ಭದ್ರತಾ ಪಡೆಗಳಿಗೆ ಸವಾಲು ಹಾಕಿವೆ.

ಕಳೆದ 2 ದಿನದಲ್ಲಿ ರಾಜ್ಯದ ಇಂಫಾಲ್‌ ಜಿಲ್ಲೆಯ ಕೌಟ್ರುಕ್ ಮತ್ತು ಲೈಕೈ ಪ್ರದೇಶಗಳಲ್ಲಿ ಕುಕಿ ಸಮುದಾಯದವರು ನಡೆಸಿದ ಎರಡು ಪ್ರತ್ಯೇಕ ಡ್ರೋನ್‌ ಬಾಂಬ್‌ ದಾಳಿಗಳಲ್ಲಿ ಮೈತೇಯಿ ಸಮುದಾಯದ ಓರ್ವ ಮಹಿಳೆ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದು, ಅನೇಕರು ಗಂಭಿರವಾಗಿ ಗಾಯಗೊಂಡಿದ್ದರು.

ಈ ಘಟನೆ ಬೆನ್ನಲ್ಲೇ ಮಾತನಾಡಿದ ಮುಖ್ಯಮಂತ್ರಿ ಬಿರೇನ್‌ ಸಿಂಗ್‌ ಇದನ್ನು ಭಯೋತ್ಪಾದಕ ಕೃತ್ಯ ಎಂದು ಕರೆದಿದ್ದು, ಸ್ಥಳಿಯರ ವಿರುದ್ಧದ ಇಂತಹ ದಾಳಿಗೆ ಸರ್ಕಾರ ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಭರವಸೆ ನೀಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಭಾರತದಲ್ಲಿ ಹಲವರ ವಾಟ್ಸಾಪ್‌ಖಾತೆ ದಿಢೀರ್‌ ಬ್ಲಾಕ್‌, ಆಕ್ರೋಶ
ಚಂದ್ರನ ಮೇಲೆ ನಾಳೆ ಸ್ಪೇಸ್‌ ಎಕ್ಸ್‌ನ ರಾಕೆಟ್‌ ಕ್ರ್ಯಾಶ್‌