ಪ್ರಧಾನಿ ಜೊತೆ ವೇದಿಕೆ ಹಂಚಿಕೊಳ್ಳಲ್ಲ: ಮಿಜೋರಂ ಸಿಎಂ

KannadaprabhaNewsNetwork | Published : Oct 25, 2023 1:15 AM

ಸಾರಾಂಶ

ಪಂಚರಾಜ್ಯ ಚುನಾವಣೆ ಕಣ ರಂಗೇರುತ್ತಿರುವ ನಡುವೆಯೇ ಈಶಾನ್ಯದ ಗಡಿ ರಾಜ್ಯ ಮಿಜೋರಂ ಮುಖ್ಯಮಂತ್ರಿ ಝೋರಂಥಂಗಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಜಂಟಿಯಾಗಿ ಚುನಾವಣಾ ಪ್ರಚಾರ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ಎನ್‌ಡಿಎನಲ್ಲಿದ್ದರೂ ಝೋರಂ ಥಂಗಾ ಭಿನ್ನರಾಗ ಮಣಿಪುರದಲ್ಲಿ ಬಿಜೆಪಿ ಕ್ರೈಸ್ತ ವಿರೋಧಿ ನಿಲುವು: ಸಿಎಂ ನವದೆಹಲಿ: ಪಂಚರಾಜ್ಯ ಚುನಾವಣೆ ಕಣ ರಂಗೇರುತ್ತಿರುವ ನಡುವೆಯೇ ಈಶಾನ್ಯದ ಗಡಿ ರಾಜ್ಯ ಮಿಜೋರಂ ಮುಖ್ಯಮಂತ್ರಿ ಝೋರಂಥಂಗಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಜಂಟಿಯಾಗಿ ಚುನಾವಣಾ ಪ್ರಚಾರ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಮಣಿಪುರ ವಿಚಾರದಲ್ಲಿ ಬಿಜೆಪಿ ಕ್ರಿಶ್ಚಿಯನ್‌ ವಿರೋಧಿ ನಿಲುವು ತೆಗೆದುಕೊಂಡಿದೆ. ನಮ್ಮ ರಾಜ್ಯದಲ್ಲಿ ಕ್ರಿಶ್ಚಿಯನ್‌ ಸಮುದಾಯ ಬಹುಸಂಖ್ಯಾತರಾಗಿರುವುದರಿಂದ ತಾವು ಬಿಜೆಪಿಯನ್ನು ಬೆಂಬಲಿಸಿದರೆ ತಮ್ಮ ಪಕ್ಷ ಮಿಜೋ ನ್ಯಾಷನಲ್‌ ಫ್ರಂಟ್‌ಗೆ (ಎಂಎನ್‌ಎಫ್‌) ಹಿನ್ನಡೆಯಾಗುವ ಸಂಭವವಿದೆ. ಹೀಗಾಗಿ ಕೇಂದ್ರದಲ್ಲಿ ಮಾತ್ರ ನಮ್ಮ ಪಕ್ಷ ಎನ್‌ಡಿಎ ಮೈತ್ರಿಕೂಟದಲ್ಲಿರಲಿದೆ. ರಾಜ್ಯದಲ್ಲಿ ಮೈತ್ರಿ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

Share this article