ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ್ದ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್‌ ಕೀ ಬಾತ್‌ಗೆ ದಶಕದ ಸಂಭ್ರಮ

KannadaprabhaNewsNetwork |  
Published : Sep 30, 2024, 01:27 AM ISTUpdated : Sep 30, 2024, 05:41 AM IST
ಮೋದಿ | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್‌ ಕೀ ಬಾತ್‌’ 10 ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಸಂತಸ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ.

ನವದೆಹಲಿ: ಸಮಾಜದ ವಿವಿಧ ವಿಷಯಗಳ ಬಗ್ಗೆ ಜನರೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಮತ್ತು ಜನರಿಂದ ಅಭಿಪ್ರಾಯ ಸಂಗ್ರಹಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ್ದ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್‌ ಕೀ ಬಾತ್‌’ಗೆ ಇದೀಗ ದಶಕದ ಸಂಭ್ರಮ.

2014ರಲ್ಲಿ ಪ್ರಧಾನಿ ಮೋದಿ ಕೇಂದ್ರದಲ್ಲಿ ಮೊದಲ ಬಾರಿಗೆ ಪ್ರಧಾನಿಯಾದ ವೇಳೆ ವಿಜಯದಶಮಿ ಅಂಗವಾಗಿ ಅ.3ರಂದು ಮೊದಲ ಮನ್‌ ಕೀ ಬಾತ್‌ನಲ್ಲಿ ಮಾತನಾಡಿದ್ದರು. ಇನ್ನೊಂದು ವಾರದಲ್ಲಿ (ಅ.3) ಮೊದಲ ಕಾರ್ಯಕ್ರಮಕ್ಕೆ 10 ವರ್ಷ ತುಂಬಲಿದೆ. ಇದುವರೆಗೂ ಒಟ್ಟು 114 ಕಾರ್ಯಕ್ರಮಗಳು ಪ್ರಸಾರವಾಗಿವೆ.

ಈ ಹಿನ್ನೆಲೆಯಲ್ಲಿ ಭಾನುವಾರ ಪ್ರಸಾರವಾದ ಸೆಪ್ಟೆಂಬರ್‌ ಮಾಸಿಕದ ಮನ್‌ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ‘ನಕಾರಾತ್ಮಕ ಸಂಭಾಷಣೆಗಳು ಮಾತ್ರ ಜನರ ಗಮನ ಸೆಳೆಯುತ್ತದೆ ಎನ್ನುವ ಮಾತನ್ನು ಮನ್‌ ಕೀ ಬಾತ್‌ ಸುಳ್ಳು ಮಾಡಿದೆ. ಈ ಸಂಚಿಕೆ ನನ್ನನ್ನು ಭಾವುಕವಾಗಿಸಿದೆ. ಹಳೆಯ ನೆನಪುಗಳ ಮಹಾಪೂರವೇ ಹರಿದು ಬರುತ್ತಿದೆ. ಮನ್‌ ಕೀ ಬಾತ್‌ 10 ವರ್ಷಗಳನ್ನು ಪೂರೈಸಿದೆ’ ಎಂದಿದ್ದಾರೆ.

‘ದಶಕದ ಹಿಂದೆ ಅಕ್ಟೋಬರ್‌ 3 ವಿಜಯದಶಮಿಯಂದು ಮನ್‌ ಕೀ ಬಾತ್‌ ಆರಂಭವಾಗಿತ್ತು. ಈ ಪಯಣವನ್ನು ಎಂದಿಗೂ ಮರೆಯುವುದಕ್ಕೆ ಸಾಧ್ಯವಿಲ್ಲ. ಮಸಾಲೆ ಮಾತುಗಳು ನಕಾರಾತ್ಮಕ ಸಂಭಾಷಣೆಗಳು ಮಾತ್ರ ಜನರ ಗಮನ ಸೆಳೆಯುತ್ತದೆ ಎನ್ನುವ ಮಾತನ್ನು ಸುಳ್ಳಾಗಿಸಿ, ಜನರು ಸಕರಾತ್ಮಕ ಸಂದೇಶ, ಸ್ಫೂರ್ತಿದಾಯಕ ಮಾತುಗಳಿಗೆ ಎಷ್ಟು ಹಾತೊರೆಯುತ್ತಾರೆ ಎನ್ನುವುದು ಮನ್ ಕೀ ಬಾತ್‌ ಮೂಲಕ ಸಾಬೀತಾಗಿದೆ ಈ ಕಾರ್ಯಕ್ರಮ ದೇಶದ ಒಗ್ಗಟ್ಟಿನ ಬಲದ ಮತ್ತು ಭಾರತದ ಸ್ಪೂರ್ತಿಯ ಪ್ರತೀಕವಾಗಿ ಹೊರಹೊಮ್ಮಿದೆ.. ಈ ಕಾರ್ಯಕ್ರಮವನ್ನು 12 ವಿದೇಶಿ ಮತ್ತು 22 ಭಾರತೀಯ ಭಾಷೆಗಳಲ್ಲಿ ಆಲಿಸಬಹುದು’ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೇಘಾಲಯ ಮೇಲಿಲ್ಲ ಬಾಂಗ್ಲಾ ಸಂಘರ್ಷ ಪರಿಣಾಮ : ವಿಜಯ್‌
ಹಿಂಸಾಪೀಡಿತ ಮಣಿಪುರಕ್ಕೆ 1 ವರ್ಷದ ಬಳಿಕ ಸರ್ಕಾರ