ನಕ್ಸಲ್‌ ಪೀಡಿತ ಜಾರ್ಖಂಡ್‌ನ ಕೆಲವು ಊರಲ್ಲಿ ಮೊದಲ ಸಲ ಚುನಾವಣೆ

KannadaprabhaNewsNetwork |  
Published : Apr 08, 2024, 01:08 AM ISTUpdated : Apr 08, 2024, 05:43 AM IST
ನಕ್ಸಲರು | Kannada Prabha

ಸಾರಾಂಶ

ಜಾರ್ಖಂಡ್‌ನಲ್ಲಿ ಅತಿ ಹೆಚ್ಚು ನಕ್ಸಲ್‌ ಪೀಡಿತ ಜಿಲ್ಲೆಗಳಲ್ಲಿ ಒಂದಾಗಿರುವ ಸಿಂಗ್‌ಭೂಮ್‌ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಇದೇ ಮೊದಲ ಬಾರಿಗೆ ಚುನಾವಣೆ ನಡೆಸಲು ಆಯೋಗ ಸಿದ್ಧತೆ ಕೈಗೊಂಡಿದೆ.

ರಾಂಚಿ: ಜಾರ್ಖಂಡ್‌ನಲ್ಲಿ ಅತಿ ಹೆಚ್ಚು ನಕ್ಸಲ್‌ ಪೀಡಿತ ಜಿಲ್ಲೆಗಳಲ್ಲಿ ಒಂದಾಗಿರುವ ಸಿಂಗ್‌ಭೂಮ್‌ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಇದೇ ಮೊದಲ ಬಾರಿಗೆ ಚುನಾವಣೆ ನಡೆಸಲು ಆಯೋಗ ಸಿದ್ಧತೆ ಕೈಗೊಂಡಿದೆ. ಇದಕ್ಕಾಗಿ ಹೆಲಿಕಾಪ್ಟರ್‌ ಮೂಲಕ ಚುನಾವಣಾ ಸಿಬ್ಬಂದಿ, ಮತಯಂತ್ರ ಹಾಗೂ ಸಲಕರಣೆಗಳನ್ನು ಮತಕೇಂದ್ರಗಳಿಗೆ ಕಳಿಸಲು ಆಯೋಗ ತೀರ್ಮಾನಿಸಿದೆ.

ಸಿಂಗ್‌ಭೂಮ್‌ ಜಿಲ್ಲೆಯು ಅತಿ ಹೆಚ್ಚು ನಕ್ಸಲರನ್ನು ಹೊಂದಿರುವ ಜಿಲ್ಲೆಯಾಗಿದ್ದು, ಕಳೆದ ಒಂದು ವರ್ಷದಲ್ಲಿ 46 ಉಗ್ರ ಘಟನೆಗಳು ನಡೆದಿವೆ. ಇದರಿಂದಾಗಿ ಒಂದೇ ವರ್ಷದಲ್ಲಿ 22 ಮಂದಿ ಸಾವನ್ನಪ್ಪಿದ್ದರು. ಹೀಗಾಗಿ ಜಿಲ್ಲೆಯ ಕೆಲವು ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ ಕನಿಷ್ಠ ಎರಡು ದಶಕಗಳಿಂದ ಮತದಾನವೇ ನಡೆದಿಲ್ಲ. ಈ ಕಾರಣವಾಗಿ ಈ ಬಾರಿ ಯಾವುದೇ ವ್ಯಕ್ತಿಯೂ ಮತದಾನದಿಂದ ವಂಚಿತನಾಗಬಾರದೆಂಬ ಕಾರಣಕ್ಕೆ ಚುನಾವಣಾ ಆಯೋಗ ಈ ಕ್ರಮ ತೆಗೆದುಕೊಂಡಿದೆ.

ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಕುಲ್ದೀಪ್‌ ಚೌಧರಿ,‘ಸಿಂಗ್‌ಭೂಮ್‌ ಜಿಲ್ಲೆಯ ರೋಬೋಕೆರಾ, ಬಿಂಜ್‌, ತಲ್ಕೋಬಾದ್‌, ಜರೈಕೆಲಾ, ರೋಂ, ರೆಂಗ್ರಾಹಟು ಮುಂತಾದ ಸ್ಥಳಗಳ 118 ಮತಗಟ್ಟೆ ತೆರೆಯಲಿದ್ದೇವೆ. ಈ ಪ್ರದೇಶದಲ್ಲಿ 100ಕ್ಕೂ ಹೆಚ್ಚು ವಯಸ್ಸಿನ 62 ಮತದಾರರಿದ್ದು, 3909 ಮತದಾರರು 85 ವಯಸ್ಸು ದಾಟಿದ್ದಾರೆ. 13,703 ಅಂಗವಿಕಲರಿದ್ದಾರೆ. ಇವರೆಲ್ಲರಿಗೂ ಮತದಾನ ಅವಕಾಶ ಕಲ್ಪಿಸಲಾಗುವುದು’ ಎಂದು ಮಾಹಿತಿ ನೀಡಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಪಂಚರಾಜ್ಯಗಳ ಚುನಾವಣೆ ಮುಹೂರ್ತ ಫಿಕ್ಸ್ : ಇಲ್ಲಿ ಗೆಲ್ಲೋರ್ಯಾರು ? ಸೋಲು ಯಾರಿಗೆ?
ಕಚ್ಚಾ ತೈಲ ಹೊತ್ತ ಮತ್ತೊಂದು ಹಡಗು ಭಾರತಕ್ಕೆ