ಮುಂಬೈ: ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಕುಟುಂಬ ಮಂಗಳವಾರ ಸಾಮೂಜಿಕ ವಿವಾಹ ಕಾರ್ಯಕ್ರಮವನ್ನು ನಡೆಸಿತು. ಈ ಸಮಾರಂಭದಲ್ಲಿ 50ಕ್ಕೂ ಹೆಚ್ಚು ಜೋಡಿಗಳು ನವ ದಾಂಪತ್ಯಕ್ಕೆ ಕಾಲಿಟ್ಟರು. ಅನಂತ್ ಅಂಬಾನಿ ವಿವಾಹಕ್ಕೂ ಮುನ್ನ ಈ ಸಮಾರಂಭವನ್ನು ಕುಟುಂಬ ಕೈಗೊಂಡಿತು.
==
ರಾಮ ಮಂದಿರ ಅರ್ಚಕರಿಗೆ ಕೇಸರಿ ಬದಲು ಹಳದಿ ಬಣ್ಣದ ಉಡುಪುಅಯೋಧ್ಯೆ: ರಾಮ ಮಂದಿರ ಅಚರ್ಕರ ಡ್ರೆಸ್ ಕೋಡ್‌ನಲ್ಲಿ ಬದಲಾವಣೆ ಆಗಿದೆ. ಈ ಬದಲಾವಣೆ ನಂತರ ಅಯೋಧ್ಯೆಯಲ್ಲಿ ಅರ್ಚಕರು ಹಳದಿ ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಅರ್ಚಕರು ಕೆಲಸ ಸಮಯದಲ್ಲಿ ಸ್ಮಾರ್ಟ್‌ಫೋನ್ ಬಳಕೆಗೆ ನಿಷೇಧ ಹೇರಿದೆ.ದೇವಾಲಯವನ್ನು ನಿರ್ವಹಿಸುವ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಈ ಹಿಂದಿದ್ದ ಸಾಂಪ್ರದಾಯಿಕ ಕೇಸರಿ ಉಡುಪು ಬದಲಿಸಿ ಪುರೋಹಿತರಿಗೆ ಹಳದಿ ಬಣ್ಣದ ಕುರ್ತಾ ಮತ್ತು ದೋಸ್ತಿಯನ್ನು ಪರಿಚಯಿಸಿದೆ. ಪುರೋಹಿತರ ನಡುವೆ ಏಕರೂಪತೆಯನ್ನು ತರುವ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದೆ.
==
ಕಾಠ್ಮಂಡು: ನೇಪಾಳ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಪ್ರಚಂಡ ವಿರುದ್ಧ ಮಿತ್ರಪಕ್ಷವಾದ ಸಿಪಿಎನ್-ಯುಎಂಎಲ್ ಬಂಡೆದ್ದಿದ್ದು, ವಿಪಕ್ಷವಾದ ನೇಪಾಳಿ ಕಾಂಗ್ರೆಸ್ ಜತೆ ಅಧಿಕಾರ ಹಂಚಿಕೆ ಮೈತ್ರಿ ಮಾಡಿಕೊಂಡು, ‘ರಾಷ್ಟ್ರೀಯ ಒಮ್ಮತದ ಸರ್ಕಾರ’ ರಚಿಸಲು ಮುಂದಾಗಿವೆ. ಈ ಮೂಲಕ ಪ್ರಧಾನಿ ಪುಷ್ಪಕಮಲ್ ದಹಲ್ ‘ಪ್ರಚಂಡ’ ಅವರಿಗೆ ಹಿನ್ನಡೆ ಉಂಟಾಗಿದ್ದು ಪದಚ್ಯುತರಾಗುವ ಸಾಧ್ಯತೆ ಇದೆ.ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹದ್ದೂರ್ ದೇವುಬಾ ಮತ್ತು ಸಿಪಿಎನ್-ಯುಎಂಎಲ್ ಮುಖ್ಯಸ್ಥ , ಮಾಜಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಹೊಸ ಮೈತ್ರಿಯ ಬಗ್ಗೆ ಚರ್ಚಿಸಿದ್ದಾರೆ. ದೇವುಬಾ ಮತ್ತು ಓಲಿ ಅಧಿಕಾರ ಹಂಚಿಕೆ ಸೂತ್ರದ ಮೇಲೆ ಪ್ರಧಾನಿ ಹುದ್ದೆಯನ್ನು ಸಮಾನ ಅವಧಿಗೆ ಹಂಚಿಕೊಳ್ಳುವ ಒಮ್ಮತಕ್ಕೆ ಬಂದಿದ್ದಾರೆ.ಎರಡು ಪಕ್ಷಗಳ ಮೈತ್ರಿಯಿಂದ ಸಂಸಂತ್ತಿನಲ್ಲಿ ಈ ಕೂಟದ ಬಲ ಸರಳ ಬಹುಮತಕ್ಕಿಂತ ಅಧಿಕವಾಗಲಿದೆ. ಒಂದು ವೇಳೆ ಹೊಸ ಮೈತ್ರಿ ಅಂತಿಮವಾದರೆ ಪ್ರಚಂಡದ ನೇತೃತ್ವದ ಜೊತೆಗಿನ ನಾಲ್ಕು ತಿಂಗಳ ಸಿಪಿಎನ್-ಯುಎಂಎಲ್ ಮೈತ್ರಿ ಮುರಿದು ಬೀಳಲಿದೆ. ಕಳೆದ 16 ವರ್ಷಗಳಲ್ಲಿ ನೇಪಾಳ 13 ಸರ್ಕಾರಗಳನ್ನು ಕಂಡಿದೆ.
ಬದರೀನಾಥದಲ್ಲಿ ಅಲಕನಂದಾ ನದಿಯಲ್ಲಿ ಪ್ರವಾಹ: ಭಕ್ತರಲ್ಲಿ ಆತಂಕ
ಅಲಕನಂದಾ ನದಿಯ ಪ್ರವಾಹದಿಂದ ನದಿಯ ದಡದಲ್ಲಿ ಕೈಗೊಂಡಿದ್ದ ಉತ್ಖನನದಲ್ಲಿ ಸಂಗ್ರಹಿಸಲಾಗಿದ್ದ ಅವಶೇಷಗಳೆಲ್ಲಾ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ ಎಂದು ಅರ್ಚಕರೊಬ್ಬರು ತಿಳಿಸಿದ್ದಾರೆ.