**ಮೆಲೋನಿಗೆ ಮೋದಿ ‘ಮೆಲೋಡಿ’ ಚಾಕಲೇಟ್‌ ಗಿಫ್ಟ್‌

KannadaprabhaNewsNetwork |  
Published : May 21, 2026, 02:00 AM ISTUpdated : May 21, 2026, 05:06 AM IST
Melody Diplomacy! Giorgia Meloni Thanks PM Modi for Sweet Indian Gift

ಸಾರಾಂಶ

ಇಟಲಿ ಭೇಟಿ ವೇಳೆ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ನರೇಂದ್ರ ಮೋದಿ ಅವರು ಭಾರತದ ಒಂದು ಕಾಲದ ಜನಪ್ರಿಯ ‘ಪಾರ್ಲೆ ಮೆಲೋಡಿ’ ಚಾಕಲೇಟ್‌ ಅನ್ನು ಗಿಫ್ಟ್‌ ಆಗಿ ನೀಡಿ ಗಮನ ಸೆಳೆದಿದ್ದಾರೆ. ತಮ್ಮಿಬ್ಬರ ನಡುವಿನ ದೋಸ್ತಿಯ ನೆನಪಿಗಾಗಿ ಅವರು ಈ ಚಾಕಲೇಟ್‌ ಅನ್ನು ಗಿಫ್ಟ್‌ ಆಗಿ ನೀಡಿದ್ದಾರೆ.

 ರೋಮ್‌: ಇಟಲಿ ಭೇಟಿ ವೇಳೆ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ನರೇಂದ್ರ ಮೋದಿ ಅವರು ಭಾರತದ ಒಂದು ಕಾಲದ ಜನಪ್ರಿಯ ‘ಪಾರ್ಲೆ ಮೆಲೋಡಿ’ ಚಾಕಲೇಟ್‌ ಅನ್ನು ಗಿಫ್ಟ್‌ ಆಗಿ ನೀಡಿ ಗಮನ ಸೆಳೆದಿದ್ದಾರೆ. ತಮ್ಮಿಬ್ಬರ ನಡುವಿನ ದೋಸ್ತಿಯ ನೆನಪಿಗಾಗಿ ಅವರು ಈ ಚಾಕಲೇಟ್‌ ಅನ್ನು ಗಿಫ್ಟ್‌ ಆಗಿ ನೀಡಿದ್ದಾರೆ.

ಮೋದಿ ಅವರ ಈ ಗಿಫ್ಟ್‌ಗೆ ಜಾರ್ಜಿಯಾ ಮೆಲೋನಿ ತೀವ್ರ ಸಂತಸ

ಮೋದಿ ಅವರ ಈ ಗಿಫ್ಟ್‌ಗೆ ಜಾರ್ಜಿಯಾ ಮೆಲೋನಿ ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ. ಮೋದಿ ಅವರು ನನಗೆ ಉಡುಗೊರೆಯೊಂದನ್ನು ತಂದಿದ್ದಾರೆ. ಅತ್ಯುತ್ತಮವಾಗಿರುವ ಟಾಫಿ ಮೆಲೋಡಿಯನ್ನು ಗಿಫ್ಟ್‌ ಆಗಿ ನೀಡಿದ್ದಾರೆ. ಈ ಗಿಫ್ಟ್‌ಗಾಗಿ ಧನ್ಯವಾದಗಳು ಎಂದು ಹೇಳುವ ವಿಡಿಯೋವೊಂದನ್ನು ಮೆಲೋನಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮೋದಿ ಜತೆಗಿರುವ ಈ ವಿಡಿಯೋ ಇದೀಗ ವೈರಲ್‌ ಆಗಿದೆ.

ಮೋದಿ-ಮೆಲೋನಿ ಅವರ ಆತ್ಮೀಯ ಮಾತುಕತೆ

ದುಬೈನಲ್ಲಿ 2023ರಲ್ಲಿ ನಡೆದಿದ್ದ ಸಿಒಪಿ28 ಸಭೆ ವೇಳೆ ಮೋದಿ-ಮೆಲೋನಿ ಅವರ ಆತ್ಮೀಯ ಮಾತುಕತೆ ನಡೆಸಿದ್ದರು. ಆ ಬಳಿಕ ಮೋದಿ ಜತೆಗಿರುವ ಫೋಟೋವನ್ನು ‘ಸಿಒಪಿ28ನಲ್ಲಿ ಉತ್ತಮ ಗೆಳೆಯರು’ ಎಂಬ ಅಡಿಟಿಪ್ಪಣಿ ಹಾಕಿ #Melodi ಹ್ಯಾಷ್‌ ಟ್ಯಾಗ್‌ನೊಂದಿಗೆ ಮೆಲೋನಿ ಪೋಸ್ಟ್ ಮಾಡಿದ್ದರು. ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

9,911 ಹೊಸ ಎಂಬಿಬಿಎಸ್‌ ಸೀಟು ಘೋಷಣೆ
ವಾಂಗ್ಚುಕ್‌ಗೆ 2 ದಿನದಲ್ಲಿ ಸಾವಿನ ಅಪಾಯ : ಹೈಕೋರ್ಟ್‌ಗೆ ಅರ್ಜಿ