-ಯುದ್ಧಕ್ಕೆ 14 ದಿನ ಪೂರ್ಣ । ಕೊಲ್ಲಿ ರಾಷ್ಟ್ರಗಳ ಮೇಲೆ ನಿಲ್ಲದ ಯುದ್ಧ-ಇರಾನ್ ಸಾರ್ವಜನಿಕ ಮೆರವಣಿಗೆ ವೇಳೆ ಸ್ಫೋಟ । ದುಬೈನಲ್ಲೂ ಬೆಂಕಿ-ಸೌದಿಯತ್ತ ನುಗ್ಗಿದ ವಿಮಾನಗಳ ದಂಡು । ಲೆಬನಾನ್‌ನಲ್ಲಿ ವ್ಯಕ್ತಿ ಸಾವು-ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿಗಳ ಮಳೆ । 58 ಮಂದಿಗೆ ಗಾಯ-ಇರಾನ್‌ನಿಂದ ಇರಾಕ್‌ನಲ್ಲಿನ ಫ್ರೆಂಚ್ ನೆಲೆ ಧ್ವಂಸ । ಯೋಧ ಮೃತ
ಟೆಹ್ರಾನ್/ದುಬೈ/ಬೈರೂತ್:
ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷ ಶುಕ್ರವಾರ 14 ದಿನಗಳನ್ನು ಪೂರೈಸಿದೆ. ಅಮೆರಿಕ ಹಾಗೂ ಇಸ್ರೇಲ್ ಪಡೆಗಳು ಶತ್ರುದೇಶ ಇರಾನ್ ಮೇಲೆ ದಾಳಿಯನ್ನು ಮುಂದುವರಿಸಿದ್ದರೆ, ಅತ್ತ ಇರಾನ್ ಅಮೆರಿಕದ ಮಿತ್ರದೇಶಗಳಾಗಿರುವ ಯುಎಇ, ಸೌದಿ ಅರೇಬಿಯಾ ಮೊದಲಾದ ಕೊಲ್ಲಿ ರಾಷ್ಟ್ರಗಳ ಮೇಲೆ ಪ್ರತಿದಾಳಿಯನ್ನು ಜಾರಿಯಲ್ಲಿಟ್ಟಿದೆ. ದುಬೈ, ಟೆಹ್ರಾನ್, ಬೈರೂತ್ ಸೇರಿದಂತೆ ಯುದ್ಧಗ್ರಸ್ತ ದೇಶಗಳ ಹಲವು ನಗರಗಳು ಶುಕ್ರವಾರ ಭೀಕರ ದಾಳಿಗಳಿಗೆ ತುತ್ತಾಗಿವೆ. ಟೆಹ್ರಾನ್‌ನಲ್ಲಿ ಸ್ಫೋಟ: ಪ್ಯಾಲೆಸ್ಟೈನ್ ಅನ್ನು ಬೆಂಬಲಿಸುವುದಕ್ಕಾಗಿ ಇರಾನ್‌ನಲ್ಲಿ ವಾರ್ಷಿಕವಾಗಿ ‘ಕುದ್ಸ್ ದಿನ’ವನ್ನು ಆಚರಿಸಲಾಗುತ್ತದೆ. ಈ ಪ್ರಯುಕ್ತ ಶುಕ್ರವಾರ ಟೆಹ್ರಾನ್ ವಿವಿ ಸಮೀಪದ ಎಂಗೆಲಾಬ್ ರಸ್ತೆಯಲ್ಲಿರುವ ವೃತ್ತದಲ್ಲಿ ಮೆರವಣಿಗೆ ನಡೆಯುತ್ತಿತ್ತು. ಸಾವಿರಾರು ಜನ ರಸ್ತೆಗಿಳಿದು ಅಮೆರಿಕ ಹಾಗೂ ಇಸ್ರೇಲ್ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು. ಈ ವೇಳೆ ದೊಡ್ಡ ಸ್ಫೋಟ ಸಂಭವಿಸಿದೆ ಎಂದು ಅಲ್ಲಿನ ಟೀವಿ ವರದಿ ಮಾಡಿದೆ. ಆದರೆ ಸಾವುನೋವುಗಳ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ದಾಳಿಗೂ ಮೊದಲು ಈ ಬಗ್ಗೆ ಇಸ್ರೇಲ್ ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ.==
ದುಬೈನ ಬುರ್ಜ್ ಖಲೀಫಾ ಸನಿಹದ ಫೈನಾನ್ಷಿಯಲ್ ಸೆಂಟರ್ ಕಟ್ಟಡದ ಮೇಲೆ ಇರಾನ್ ವಾಯುದಾಳಿ ಮಾಡಿದ್ದು, 2 ದೊಡ್ಡ ಸ್ಫೋಟ ಸಂಭವಿಸಿವೆ ಹಾಗೂ ದಟ್ಟ ಕಪ್ಪು ಹೊಗೆ ಮುಗೆಲೆತ್ತರಕ್ಕೆ ವ್ಯಾಪಿಸಿದೆ. ಆದರೆ, ‘ಕಟ್ಟಡವೊಂದಕ್ಕೆ ಸಣ್ಣ ಹಾನಿಯಾಗಿದೆ, ಯಾವುದೇ ಸಾವುನೋವು ಸಂಭವಿಸಿಲ್ಲ’ ಎಂದು ದುಬೈ ಮಾಧ್ಯಮ ಕಚೇರಿ ತಿಳಿಸಿದೆ. ಶುಕ್ರವಾರ ಬೆಳಿಗ್ಗೆ ಕೈಗಾರಿಕಾ ಪ್ರದೇಶವಾದ ಅಲ್ ಕ್ವೋಜ್‌ನಲ್ಲಿಯೂ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತು.ಸೌದಿಯತ್ತ ವಿಮಾನಗಳ ದಂಡು: ‘ಸೌದಿ ಅರೇಬಿಯಾದ ಪೂರ್ವ ಮತ್ತು ಮಧ್ಯ ಪ್ರಾಂತ್ಯಗಳ ಕಡೆ ಬರುತ್ತಿದ್ದ ಸುಮಾರು 10 ಡ್ರೋನ್‌ಗಳನ್ನು ನಮ್ಮ ವಾಯುರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ. ಕೆಲವೇ ಗಂಟೆಗಳಲ್ಲಿ ಸೌದಿ ವಾಯುಪ್ರದೇಶವನ್ನು ಪ್ರವೇಶಿಸಿದ ಡ್ರೋನ್‌ಗಳ ಸಂಖ್ಯೆ ಸುಮಾರು 50ಕ್ಕೆ ಏರಿಕೆಯಾಗಿದೆ’ ಎಂದು ಸೌದಿ ರಕ್ಷಣಾ ಸಚಿವಾಲಯ ತಿಳಿಸಿದೆ.
ಜೆರುಸಲೇಂನಿಂದ 100 ಕಿ.ಮೀ ದೂರದಲ್ಲಿರುವ ಹಾಗೂ ಲೆಬನಾನ್ ಗಡಿ ಸಮೀಪದಲ್ಲಿರುವ ಝರ್ಝಿರ್ ನಗರದ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ. ಈ ವೇಳೆ 58 ಜನ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಶುಕ್ರವಾರ ಮುಂಜಾನೆ ಉತ್ತರ ಇಸ್ರೇಲ್ ಮತ್ತು ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲಿ ಪಡೆಗಳ ಮೇಲೆ ಹಲವಾರು ರಾಕೆಟ್ ದಾಳಿ ನಡೆಸಿದ್ದಾಗಿ ಹಿಜ್ಬುಲ್ಲಾ ಹೇಳಿಕೊಂಡಿದೆ. ಇರಾನ್‌ನಿಂದ ಇರಾಕ್‌ನಲ್ಲಿನ ಫ್ರಾನ್ಸ್ ನೆಲೆ ನಾಶ: