ಕೇಂದ್ರ ನೌಕರರ ವೇತನ ಕನಿಷ್ಠ ₹33000 ಏರಿಕೆ?! - 2.86 ಫಿಟ್ಮೆಂಟ್‌ ಫ್ಯಾಕ್ಟರ್‌ ಆಧರಿಸಿ ಲೆಕ್ಕಾಚಾರ

ಸಾರಾಂಶ

ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳ ಸಂಬಂಧ ಶಿಫಾರಸು ಮಾಡಲು ಸರ್ಕಾರ ರಚಿಸಿರುವ 8ನೇ ವೇತನ ಆಯೋಗವು ನೌಕರರಿಗೆ ಭರ್ಜರಿ ವೇತನದ ಕೊಡುಗೆ ನೀಡುವ ಸಾಧ್ಯತೆ ಇದೆ

 ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳ ಸಂಬಂಧ ಶಿಫಾರಸು ಮಾಡಲು ಸರ್ಕಾರ ರಚಿಸಿರುವ 8ನೇ ವೇತನ ಆಯೋಗವು ನೌಕರರಿಗೆ ಭರ್ಜರಿ ವೇತನದ ಕೊಡುಗೆ ನೀಡುವ ಸಾಧ್ಯತೆ ಇದೆ. ಅಟೆಂಡರ್‌, ಸಹಾಯಕ ಸಿಬ್ಬಂದಿಯಂತಹ ಲೆವೆಲ್‌ 1 ನೌಕರರ ಮೂಲ ವೇತನ 18 ಸಾವಿರ ರು.ನಿಂದ 51480 ರು.ಗೆ ಅಂದರೆ 33480 ರು.ನಷ್ಟು ಪರಿಷ್ಕರಣೆಯಾಗಬಹುದು ಎಂದು ವರದಿಗಳು ತಿಳಿಸಿವೆ.

ವೇತನ ಆಯೋಗವು ಹೊಸ ವೇತನ ಶಿಫಾರಸು ಮಾಡಲು ‘ಫಿಟ್‌ಮೆಂಟ್‌ ಫ್ಯಾಕ್ಟರ್‌’ ಅನ್ನು ಆಧಾರವಾಗಿ ಬಳಸುತ್ತದೆ. ಈ ಹಿಂದೆ 7ನೇ ವೇತನ ಆಯೋಗವು 2.57 ಫಿಟ್‌ಮೆಂಟ್‌ ಫ್ಯಾಕ್ಟರ್‌ ಆಧರಿಸಿ ವೇತನ ಏರಿಕೆಯ ಶಿಫಾರಸು ಮಾಡಿತ್ತು. ಅದರನ್ವಯ 7000 ರು. ಇದ್ದ ಲೆವೆಲ್‌ 1 ಅಧಿಕಾರಿಗಳ ಮೂಲವೇತನವನ್ನು 2016ರಲ್ಲಿ 18000 ರು.ಗೆ ಏರಿಸಲಾಗಿತ್ತು.

ಮೂಲವೇತನ 18000 ರು. ಇದ್ದರೂ ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ, ಸಾರಿಗೆ ಭತ್ಯೆ, ಮತ್ತಿತರೆ ಸೌಲಭ್ಯಗಳು ಸೇರಿದರೆ ಒಟ್ಟು ವೇತನ 36020 ರು.ಗೆ ತಲುಪಿತ್ತು.

ಭರ್ಜರಿ ಏರಿಕೆ?:

ಇದೀಗ ರಚನೆಯಾಗಿರುವ 8ನೇ ವೇತನ ಆಯೋಗವು 2.86 ಫಿಟ್‌ಮೆಂಟ್‌ ಫ್ಯಾಕ್ಟರ್‌ ಆಧಾರದಲ್ಲಿ ನೌಕರರ ವೇತನ ಪರಿಷ್ಕರಿಸಬಹುದು ಎಂದು ಹೇಳಲಾಗುತ್ತಿದೆ. ಇದು ಖಚಿತಪಟ್ಟಲ್ಲಿ ಹಾಲಿ 18000 ರು. ಇರುವ ಲೆವೆಲ್‌ 1 ನೌಕರರ ಮೂಲ ವೇತನ ಭರ್ಜರಿ 51480 ರು.ಗೆ ಪರಿಷ್ಕರಣೆಗೊಳ್ಳಲಿದೆ. ಮೊದಲ ಹಂತದ ಹುದ್ದೆಗಳು ಅಂದರೆ, ಅಟೆಂಡರ್‌ಗಳು, ಜವಾನರು, ಸಹಾಯಕ ಸಿಬ್ಬಂದಿಯಂಥ ನೌಕರರ ಮೂಲ ವೇತನ 33,480 ರು.ನಷ್ಟು ಜಿಗಿಯಬಹುದು ಎಂದು ವರದಿಗಳು ತಿಳಿಸಿವೆ.

ಅದೇ ರೀತಿ ಎಲ್ಲಾ ವರ್ಗದ ಹುದ್ದೆಗಳ ಮೂಲವೇತನವೂ ದುಪ್ಪಟ್ಟಾಗಲಿದೆ.

ಯಾವ ಸ್ತರಕ್ಕೆ ಎಷ್ಟು ವೇತನ ಸಂಭವ?

ಲೆವೆಲ್‌ 1 ಅಧಿಕಾರಿಗಳ ವೇತನ 18000 ರು.ನಿಂದ 36020 ರು.ನಷ್ಟು ಏರಿಕೆಯಾಗಿ 51480 ರು. ಗೆ

ಲೆವೆಲ್‌ 2 ಅಧಿಕಾರಿಗಳ ವೇತನ 19900 ರು. ನಿಂದ 37014 ರು.ನಷ್ಟು ಏರಿಕೆಯಾಗಿ 56914 ರು.ಗೆ

ಲೆವೆಲ್‌ 3 ಅಧಿಕಾರಿಗಳ ವೇತನ 21700 ರು. ನಿಂದ 40362 ರು.ನಷ್ಟು ಏರಿಕೆಯಾಗಿ 62062 ರು.ಗೆ

ಲೆವೆಲ್‌ 4 ಅಧಿಕಾರಿಗಳ ವೇತನ 25500 ರು.ನಿಂದ 47430 ರು.ನಷ್ಟು ಏರಿಕೆಯಾಗಿ 72930 ರು.ಗೆ

ಲೆವೆಲ್‌ 5 ಅಧಿಕಾರಿಗಳ ವೇತನ 29200 ರು.ನಿಂದ 54312 ರು.ನಷ್ಟು ಏರಿಕೆಯಾಗಿ 83512 ರು.ಗೆ

ಲೆವೆಲ್‌ 6 ಅಧಿಕಾರಿಗಳ ವೇತನ 35400 ರು. ನಿಂದ 65844 ರು.ನಷ್ಟು ಏರಿಕೆಯಾಗಿ 101244 ರು.ಗೆ

ಲೆವೆಲ್‌ 7 ಅಧಿಕಾರಿಗಳ ವೇತನ 44900 ರು. ನಿಂದ 83514 ರು.ನಷ್ಟು ಏರಿಕೆಯಾಗಿ 1,28,414 ರು.ಗೆ

ಲೆವೆಲ್‌ 8 ಅಧಿಕಾರಿಗಳ ವೇತನ 47600 ರು.ನಿಂದ 88536 ರು.ನಷ್ಟು ಏರಿಕೆಯಾಗಿ 136136 ರು.ಗೆ

ಲೆವೆಲ್‌ 9 ಅಧಿಕಾರಿಗಳ ವೇತನ 53100 ರು.ನಿಂದ 98766 ರು. ನಷ್ಟು ಏರಿಕೆಯಾಗಿ 151866 ರು.ಗೆ

ಲೆವೆಲ್‌ 10 ಅಧಿಕಾರಿಗಳ ವೇತನ 56100 ರು.ನಿಂದ 104346 ರು.ನಷ್ಟು ಏರಿಕೆಯಾಗಿ 160446 ರು.ಗೆ

ಮುಂದಿನ ವರ್ಷ ಅನುಮಾನ:

ಕೇಂದ್ರ ಸರ್ಕಾರಿ ನೌಕರರ ವೇತನ ಹಾಗೂ ಪಿಂಚಣಿಯನ್ನು ಪರಿಷ್ಕರಿಸಲಿರುವ ಎಂಟನೇ ವೇತನ ಆಯೋಗದ ವರದಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸಿಕ್ಕಿದ್ದರೂ ದೇಶದ 1.2 ಕೋಟಿ ಕೇಂದ್ರ ಸರ್ಕಾರಿ ನೌಕರರು ನಿರೀಕ್ಷಿಸಿದಂತೆ ಮುಂದಿನ ವರ್ಷ ಈ ವರದಿಯ ಅನುಷ್ಠಾನ ಅನುಮಾನ ಎನ್ನಲಾಗಿದೆ.

ಈ ಬಾರಿಯ ಬಜೆಟ್‌ನಲ್ಲಿ ವೇತನ ಆಯೋಗದ ವೆಚ್ಚಗಳ ಪ್ರಸ್ತಾಪ ಎಲ್ಲೂ ಇಲ್ಲ. ಅಲ್ಲದೆ, ಯಾವುದೇ ಹಣಕಾಸು ಆಯೋಗವು ತನ್ನ ವರದಿ ಸಲ್ಲಿಕೆಗೆ ಕನಿಷ್ಠ ಒಂದು ವರ್ಷ ತೆಗೆದುಕೊಳ್ಳುತ್ತದೆ. ಏಳನೇ ವೇತನ ಆಯೋಗವು 18 ತಿಂಗಳ ಅವಧಿಯನ್ನು ವರದಿ ಸಲ್ಲಿಕೆಗೆ ತೆಗೆದುಕೊಂಡಿತ್ತು. ಈ ಎಲ್ಲ ವಿಚಾರಗಳನ್ನು ನೋಡಿದರೆ 2026ರ ಜನವರಿ 1ರಿಂದ 8ನೇ ವೇತನ ಆಯೋಗದ ವರದಿ ಜಾರಿಗೆ ಬರಬಹುದು ಎಂಬ ನೌಕರರ ಲೆಕ್ಕಾಚಾರ ಉಲ್ಟಾ ಆಗಬಹುದು ಎಂದು ಮೂಲಗಳು ತಿಳಿಸಿವೆ.

ಏನಿದು ಲೆಕ್ಕಾಚಾರ?

- 7000 ರು. ಇದ್ದ ಲೆವೆಲ್‌ 1 ಸಿಬ್ಬಂದಿಯ ಸಂಬಳವನ್ನು 7ನೇ ವೇತನ ಆಯೋಗ 18 ಸಾವಿರ ರು.ಗೆ ಏರಿಸಿತ್ತು

- 2.57 ಫಿಟ್‌ಮೆಂಟ್‌ ಫ್ಯಾಕ್ಟರ್ ಆಧರಿಸಿ ಆಗ ಪರಿಷ್ಕರಣೆ ಮಾಡಲಾಗಿತ್ತು. ಈ ಬಾರಿ 2.86 ಫಿಟ್ಮೆಂಟ್‌ ಬಳಕೆ?

- 2.86 ಫಿಟ್‌ಮೆಂಟ್‌ ಫ್ಯಾಕ್ಟರ್‌ ಬಳಸಿದರೆ 18 ಸಾವಿರ ರು. ಇರುವ ಮೂಲ ವೇತನ 51480 ರು.ಗೆ ಜಿಗಿತ

- ಲೆವೆಲ್‌ 1 ಅಂದರೆ ಅಟೆಂಡರ್‌, ಜವಾನರು, ಸಹಾಯಕ ಸಿಬ್ಬಂದಿ ವರ್ಗದವರು. ಅವರಿಗೆ 33000 ಏರಿಕೆ?

ಸ್ತರ ಹಾಲಿ ವೇತನ ಏರಿಕೆ ಅಂತಿಮ ಮೂಲವೇತನ

1 18000 ರು. 33480 ರು. 51480 ರು.

2 19900 ರು. 37014 ರು. 56914 ರು.

3 21700 ರು. 40362 ರು. 62062 ರು.

4 25500 ರು. 47430 ರು. 72930 ರು.

5 29200 ರು. 54312 ರು. 83512 ರು.

6 35400 ರು. 65844 ರು. 101244 ರು.

7 44900 ರು. 83514 ರು. 1,28,414 ರು.

8 47600 ರು. 88536 ರು. 136136 ರು.

9 53100 ರು. 98766 ರು. 151866 ರು.

10 56100 ರು. 104346 ರು. 160446

Share this article