ಮೋದಿ ಕಲಿತ ಶಾಲೆಗೆ ದೇಶದ ಮಕ್ಕಳಿಗೆ ಟೂರ್‌!

KannadaprabhaNewsNetwork |  
Published : Jan 05, 2024, 01:45 AM ISTUpdated : Jan 05, 2024, 12:34 PM IST
ಮೋದಿ ಶಾಲೆ | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಓದಿದ್ದ ಶಾಲೆಗೆ, ವಿದ್ಯಾರ್ಥಿಗಳಿಗೆ 7 ದಿನಗಳ ಅಧ್ಯಯನ ಪ್ರವಾಸದ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಆರಂಭಿಸಲಿದೆ.

ನವದೆಹಲಿ: ಗುಜರಾತ್‌ನ ವಡ್‌ನಗರ ಪಟ್ಟಣದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಓದಿದ್ದ ಶಾಲೆಗೆ, ವಿದ್ಯಾರ್ಥಿಗಳಿಗಾಗಿ 7 ದಿನಗಳ ಅಧ್ಯಯನ ಪ್ರವಾಸದ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಆರಂಭಿಸಲಿದೆ. ವಿದ್ಯಾರ್ಥಿಗಳ ಹೆಸರು ನೋಂದಣಿಗಾಗಿ ಆನ್‌ಲೈನ್‌ ಪೋರ್ಟಲ್‌ ಅನ್ನು ಕೂಡ ಆರಂಭಿಸಲಾಗಿದ್ದು, ನೋಂದಾಯಿತ ವಿದ್ಯಾರ್ಥಿಗಳಿಗೆ ನಡೆಯುವ 3 ಹಂತದ ಸ್ಪರ್ಧೆಗಳಲ್ಲಿ ಆಯ್ಕೆಯಾದ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗುತ್ತದೆ.

ದೇಶಾದ್ಯಂತದ 9 ರಿಂದ 12 ನೇ ತರಗತಿಯ ಶಾಲಾ ವಿದ್ಯಾರ್ಥಿಗಳಿಗೆ ಅವಕಾಶವಿದೆ. 10 ಹುಡುಗಿಯರು ಮತ್ತು 10 ಹುಡುಗರು ಸೇರಿದಂತೆ 20 ವಿದ್ಯಾರ್ಥಿಗಳ ಬ್ಯಾಚ್ ವರ್ಷವಿಡೀ ಪ್ರತಿ ವಾರ ಈ ಪ್ರವಾಸ ಕಾರ್ಯಕ್ರಮದಲ್ಲಿ ಭಾಗವಹಿಸುತ್ತದೆ. 7 ದಿನದ ಪ್ರವಾಸದ ವೇಳೆ ಮೋದಿ ಅವರ ವಡ್‌ನಗರದ ಶಾಲೆಯಲ್ಲಿ ವಿವಿಧ ಹಂತದ ತರಬೇತಿ ಕಾರ್ಯಕ್ರಮ, ಉಪನ್ಯಾಸಗಳನ್ನು ಗಳನ್ನು ಹಮ್ಮಿಕೊಳ್ಳಲಾಗುತ್ತದೆ.

3 ಹಂತದ ಜಿಲ್ಲಾವಾರು ಆಯ್ಕೆ:

ಮೊದಲ ಹಂತದಲ್ಲಿ, ದೇಶದ ಯಾವುದೇ ಮಾನ್ಯತೆ ಪಡೆದ ಶಾಲೆಯಲ್ಲಿ 9 ರಿಂದ 12 ನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳು ತಮ್ಮ ಮಾಹಿತಿಯನ್ನು ನೀಡುವ ಮೂಲಕ https://prerana.education.gov.in ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.

ವಿದ್ಯಾರ್ಥಿಗಳು ಒದಗಿಸಿದ ವಿವರಗಳು ಮತ್ತು ಅವರ ವಿಶೇಷ ಸಾಧನೆಗಳ ಆಧಾರದ ಮೇಲೆ ಪ್ರತಿ ಜಿಲ್ಲೆಯಲ್ಲಿ 200 ವಿದ್ಯಾರ್ಥಿಗಳನ್ನು ಶಾರ್ಟ್‌ಲಿಸ್ಟ್‌ ಮಾಡಲಾಗುತ್ತದೆ, ಅವರಲ್ಲಿ ಶೇ.50 ಹುಡುಗಿಯರು ಇರುತ್ತಾರೆ.

ಎರಡನೇ ಹಂತದಲ್ಲಿ, ವಿದ್ಯಾರ್ಥಿಗಳು ಕಿರು ವೀಡಿಯೊ ರೆಕಾರ್ಡಿಂಗ್, ಪ್ರಬಂಧ/ಕವಿತೆ/ಕಥೆ ಮತ್ತು ಇತರ ಸೃಜನಶೀಲ ಅಭಿವ್ಯಕ್ತಿ (ಚಿತ್ರಕಲೆ/ವ್ಯಂಗ್ಯಚಿತ್ರ ಇತ್ಯಾದಿ) ಮುಂತಾದ ಬಹು-ಮಾದರಿಯ ಚಟುವಟಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು.ಮೂರನೇ ಹಂತದಲ್ಲಿ, ವೈಯಕ್ತಿಕ ಸಂದರ್ಶನ, ಸಾಧನೆಗಳನ್ನು ಆಧರಿಸಿ ಇಬ್ಬರು ಮಕ್ಕಳನ್ನು (ಒಬ್ಬ ಹುಡುಗ, ಒಬ್ಬ ಹುಡುಗಿ) ಆಯ್ಕೆ ಮಾಡಲಾಗುತ್ತದೆ. ಇವರ ಜತೆಗೆ ಮೀಸಲು ಕೆಟಗರಿಯಲ್ಲಿ ಇಬ್ಬರನ್ನು ಆಯ್ಕೆ ಮಾಡಲಾಗುತ್ತದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕಿಚ್ಚನ ವೀರಾವೇಶ ದರ್ಶನ್ ವಿರುದ್ಧ ಅಲ್ಲ, ಪೈರಸಿ ಬಗ್ಗೆ!
ಜಿ ರಾಮ್‌ ಜಿಗೆ ರಾಜ್ಯ ಶೇ.40ರಷ್ಟು ಪಾಲು ನೀಡಲಾಗದು : ಡಿಕೆಶಿ