ಮುಂಬೈ: 28 ವರ್ಷ ಬಳಿಕ ಭಾರತದಲ್ಲಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ಚೆಕ್ ಗಣರಾಜ್ಯ ಸುಂದರಿ ಕ್ರಿಸ್ಟಿನಾ ಪಿಜ್‌ಕೋವಾ ವಿಜೇತರಾಗಿದ್ದಾರೆ. ಲೆಬನಾನ್ ಸುಂದರಿ ಯೆಸ್ಮಿನಾ ಮೊದಲ ರನ್ನರ್ ಅಪ್ ಆಗಿದ್ದಾರೆ.
ಈ ನಡುವೆ, ಇದಕ್ಕೂ ಮೊದಲು ಭಾರತ ಸುಂದರಿ ಹಾಗೂ ಕನ್ನಡತಿ ಸಿನಿ ಶೆಟ್ಟಿ ಹೊರಬಿದ್ದರು. ಟಾಪ್-4 ಸುಂದರಿಯರ ಆಯ್ಕೆಗೆ ನಡೆದ ಸ್ಪರ್ಧೆಯಲ್ಲಿ ಸಿನಿ ಅವರನ್ನು ಲೆಬನಾನ್ ಸುಂದರಿ ಸೋಲಿಸಿದರು.
ಭಾರತ ಈ ಪ್ರತಿಷ್ಠಿತ ಪ್ರಶಸ್ತಿಯನ್ನು 6 ಸಲ ಗೆದ್ದಿತ್ತು. ಆದರೆ ಈ ಬಾರಿ ವಿಫಲವಾಗಿದ್ದು, ಅಭಿಮಾನಿಗಳು ನಿರಾಶರಾದರು.
1996ರಲ್ಲಿ ಭಾರತದಲ್ಲಿ ನಡೆದ ಮಿಸ್ ವರ್ಲ್ಡ್ ಸ್ಪರ್ಧೆಯು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿತ್ತು ಎಂಬುದು ಸ್ಮರಣೀಯ.