ಚುನಾವಣಾ ನೀತಿ ಸಂಹಿತೆ ಜಾರಿಯಾದರೆ ಏನಾಗುತ್ತೆ ?

KannadaprabhaNewsNetwork |  
Published : Mar 16, 2024, 01:52 AM ISTUpdated : Mar 16, 2024, 07:37 AM IST
ನೀತಿ ಸಂಹಿತೆ | Kannada Prabha

ಸಾರಾಂಶ

ಅಭಿವೃದ್ಧಿ ಕಾರ್ಯಗಳ ಶಂಕು, ಉದ್ಘಾಟನೆ ಮಾಡುವಂತಿಲ್ಲ. ರಾಜಕಾರಣಿಗಳು ಸರ್ಕಾರಿ ವಾಹನ, ಬಂಗಲೆ ಬಳಸುವಂತಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಹಣ ನೀಡುವಂತಿಲ್ಲ ಮುಂತಾದ ಕೆಲವು ವಿಷಯಗಳನ್ನೊಳಗೊಂಡ ನೀತಿ ಸಂಹಿತೆ ಜಾರಿಯಾಗಲಿದೆ.

ನವದೆಹಲಿ: ಭಾರತೀಯ ಚುನಾವಣಾ ಆಯೋಗವು 18ನೇ ಲೋಕಸಭಾ ಚುನಾವಣೆಗೆ ಶನಿವಾರ ಮಧ್ಯಾಹ್ನ 3 ಗಂಟೆಗೆ ಕರೆದಿರುವ ಸುದ್ದಿಗೋಷ್ಠಿಯಲ್ಲಿ ವೇಳಾಪಟ್ಟಿ ಪ್ರಕಟಿಸಲಿದ್ದು, ಬಳಿಕ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ. 

ಇದು ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಸರ್ಕಾರಳ ಮೇಲೆ ಚುನಾವಣಾ ಆಯೋಗ ಹೇರುವ ಕೆಲವೊಂದು ನಿರ್ಬಂಧಗಳಾಗಲಿವೆ. 

ಹಾಗಿದ್ದರೆ ಚುನಾವಣಾ ನೀತಿ ಸಂಹಿತೆ ಎಂದರೇನು? ಈ ಅವಧಿಯಲ್ಲಿ ರಾಜಕೀಯ ವ್ಯಕ್ತಿಗಳು, ಪಕ್ಷಗಳು, ಸರ್ಕಾರಗಳು ಏನು ಮಾಡಬಹುದು? ಏನು ಮಾಡಬಾರದು? ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ನೀತಿ ಸಂಹಿತೆ ಏನು? ಏಕೆ?

ಇದು ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆ ನಡೆಸುವ ಸಲುವಾಗಿ ಮತ್ತು ಪ್ರತಿಯೊಬ್ಬರಿಗೂ ಸಮಾನ ಅವಕಾಶ ಕಲ್ಪಿಸುವ ಸಲುವಾಗಿ ಚುನಾವಣಾ ಆಯೋಗವು ತನ್ನ ಅಧಿಕಾರ ಬಳಸಿ ಹೇರುವ ನಿರ್ಬಂಧಗಳಾಗಿವೆ. 

ಈ ಅವಧಿಯಲ್ಲಿ ರಾಜಕಾರಣಿಗಳು, ಪಕ್ಷಗಳ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿಡುತ್ತದೆ.bಸಂಹಿತೆ ಜಾರಿ ಬಳಿಕ ಏನೇನು ಬದಲಾವಣೆ ಆಗುತ್ತೆ? ಸರ್ಕಾರದಿಂದ ಯಾವುದೇ ಅನುದಾನ ಕೊಡುವುದು ಮತ್ತು ಅನುದಾನ ಕೊಡುವ ಕುರಿತು ಆಶ್ವಾಸನೆ ನೀಡುವುದು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸುವುದು ಅಭಿವೃದ್ಧಿ ಕಾಮಗಾರಿಗಳ ಕುರಿತು ಜನರಿಗೆ ಆಶ್ವಾಸನೆ ನೀಡುವುದು ಆಡಳಿತ ಪಕ್ಷದಿಂದ ಚುನಾವಣಾ ಕರ್ತವ್ಯಕ್ಕೆ ಸರ್ಕಾರಿ ವಾಹನ ಮತ್ತು ಇತರ ಸೇವೆಗಳನ್ನು ಬಳಸಿಕೊಳ್ಳುವುದು

ಸರ್ಕಾರಿ ವಿಶ್ರಾಂತಿ ಗೃಹಗಳಲ್ಲಿ ಸಾರ್ವಜನಿಕ ಸಭೆ ಮತ್ತು ಚುನಾವಣಾ ರಣತಂತ್ರ ರೂಪಿಸಲು ಬಳಸಿಕೊಳ್ಳುವುದು ಸರ್ಕಾರಿ ಬೊಕ್ಕಸದ ಹಣದಲ್ಲಿ ಮಾಧ್ಯಮಗಳಲ್ಲಿ ಜಾಹೀರಾತು ನೀಡುವುದು ಸರ್ಕಾರಿ ಮಾಧ್ಯಮದಲ್ಲಿ ಸರ್ಕಾರದ ಸಾಧನೆಗಳನ್ನು ಬಿಂಬಿಸುವಂತಹ ಲೇಖನಗಳನ್ನು ಪ್ರಕಟಿಸುವುದು.

ಸಂಹಿತೆ ಉಲ್ಲಂಘಿಸಿದರೆ ಏನಾಗುತ್ತೆ?
ಒಂದು ವೇಳೆ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದು ಕಂಡು ಬಂದಲ್ಲಿ ಅಂಥವರ ಜನಪ್ರತಿನಿಧಿಗಳ ಕಾಯ್ದೆ 1951ರ ಅನುಸಾರ ಸೂಕ್ತ ಶಿಕ್ಷೆ ವಿಧಿಸಲು ಅವಕಾಶವಿದ್ದು, ಉಲ್ಲಂಘನೆಯ ಪ್ರಮಾಣ ಗರಿಷ್ಠ ಪ್ರಮಾಣವಾಗಿದ್ದಲ್ಲಿ ಪಕ್ಷದ ಮಾನ್ಯತೆಯನ್ನೇ ಅಸಿಂಧುಗೊಳಿಸಲು ಚುನಾವಣಾ ಆಯೋಗಕ್ಕೆ ಅವಕಾಶವಿರುತ್ತದೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !