ಪ್ರಧಾನಿ ಮೋದಿ ಧ್ಯಾನ ನಡೆಸಲು ಕನ್ಯಾಕುಮಾರಿಗೆ ಆಗಮಿಸಿರುವ ನಡುವೆಯೇ, 33 ವರ್ಷಗಳ ಹಿಂದಿನ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನವದೆಹಲಿ: ಪ್ರಧಾನಿ ಮೋದಿ ಧ್ಯಾನ ನಡೆಸಲು ಕನ್ಯಾಕುಮಾರಿಗೆ ಆಗಮಿಸಿರುವ ನಡುವೆಯೇ, 33 ವರ್ಷಗಳ ಹಿಂದಿನ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸದ್ಯ ಮೋದಿ ಧ್ಯಾನ ನಿರತರಾಗಿರುವ ಅದೇ ಸ್ಥಳದಲ್ಲಿ ನಿಂತಿರುವ ಹಳೆಯ ಪೋಟೋವದು. ಅದು 1991 ಡಿಸೆಂಬರ್ 11 ರಂದು ತೆಗೆದಿದ್ದ ಫೋಟೋ, ಆ ಸಮಯದಲ್ಲಿ ಕನ್ಯಾಕುಮಾರಿಯ ವಿವೇಕಾನಂದ ರಾಕ್ ಸ್ಮಾರಕದಿಂದ ಕಾಶ್ಮೀರದವರೆಗೆ ಬಿಜೆಪಿಯ ನಾಯಕ ಡಾ. ಮುರುಳಿ ಮನೋಹರ ಜೋಷಿ ನೇತೃತ್ವದಲ್ಲಿ ಏಕತಾ ಯಾತ್ರೆಯನ್ನು ಕೈಗೊಳ್ಳಲಾಗಿತ್ತು.
ಆ ಯಾತ್ರೆಯಲ್ಲಿ ಅಂದು ಸಾಮಾನ್ಯ ಕಾರ್ಯಕರ್ತರಾಗಿದ್ದ ನರೇಂದ್ರ ಮೋದಿಯವರು ಭಾಗವಹಿಸಿದ್ದರು.