ಪ್ರಧಾನಿ ನರೇಂದ್ರ ಮೋದಿಯವರಿಗೆ ‘ಧರ್ಮ ಚಕ್ರವರ್ತಿ’ ಎಂಬ ಬಿರುದು

KannadaprabhaNewsNetwork |  
Published : Jun 29, 2025, 01:33 AM ISTUpdated : Jun 29, 2025, 05:10 AM IST
Prime Minister Narendra Modi (Photo: ANI)

ಸಾರಾಂಶ

ಜೈನ ಧರ್ಮಗುರು ಆಚಾರ್ಯ ವಿದ್ಯಾನಂದಜೀ ಮಹಾರಾಜರ 100ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ‘ಧರ್ಮ ಚಕ್ರವರ್ತಿ’ ಎಂಬ ಬಿರುದನ್ನು ಪ್ರದಾನ ಮಾಡಲಾಗಿದೆ.

ನವದೆಹಲಿ: ಜೈನ ಧರ್ಮಗುರು ಆಚಾರ್ಯ ವಿದ್ಯಾನಂದಜೀ ಮಹಾರಾಜರ 100ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ‘ಧರ್ಮ ಚಕ್ರವರ್ತಿ’ ಎಂಬ ಬಿರುದನ್ನು ಪ್ರದಾನ ಮಾಡಲಾಗಿದೆ. 

ಶನಿವಾರ ಕೇಂದ್ರ ಸಂಸ್ಕೃತಿ ಸಚಿವಾಲಯವು ದೆಹಲಿಯ ಭಗವಾನ್ ಮಹಾವೀರ್ ಅಹಿಂಸಾ ಭಾರತಿ ಟ್ರಸ್ಟ್ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರವಣಬೆಳಗೊಳದ ಆಗಮಕೀರ್ತಿ ಭಟ್ಟಾರಕ ಮುನಿಗಳು ಪ್ರಧಾನಿ ಮೋದಿಯವರಿಗೆ ಬಿರುದನ್ನು ನೀಡಿ ಆಶೀರ್ವದಿಸಿದರು. 

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಧಾನಿ, ‘ಸಂತರಿಂದ ಏನೇ ಪಡೆದರೂ ಅದನ್ನು ‘ಪ್ರಸಾದ’ ಎಂದು ಸ್ವೀಕರಿಸುವುದು ನಮ್ಮ ಸಂಸ್ಕೃತಿ. ಆದ್ದರಿಂದ, ನಾನು ಈ ಪ್ರಸಾದವನ್ನು ವಿನಮ್ರವಾಗಿ ಸ್ವೀಕರಿಸುತ್ತೇನೆ ಮತ್ತು ಅದನ್ನು ಭಾರತಮಾತೆಗೆ ಅರ್ಪಿಸುತ್ತೇನೆ’ ಎಂದರು.

ಏರಿಂಡಿಯಾ ದುರಂತಕ್ಕೆ ಬಲಿಯಾದ ಎಲ್ಲ 260 ಜನರ ಗುರುತು ಪತ್ತೆ

ಅಹಮದಾಬಾದ್‌: ಗುಜರಾತಿನ ಅಹಮದಾಬಾದ್‌ನಲ್ಲಿ ನಡೆದ ಏರಿಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟವರೆಲ್ಲರ ಡಿಎನ್‌ಎ ಸಂಬಂಧಿಕರೊಂದಿಗೆ ಹೊಂದಾಣಿಕೆಯಾಗಿದ್ದು, ಒಟ್ಟು ಸಾವನ್ನಪ್ಪಿದ್ದವರು 260 ಮಂದಿ ಎನ್ನುವುದು ದೃಢವಾಗಿದೆ. 

ವಿಮಾನ ಅವಘಡಕ್ಕೆ ಬಲಿಯಾದವರ ಪೈಕಿ ಓರ್ವರ ಮೃತದೇಹದ ಗುರುತು ಪತ್ತೆ ಬಾಕಿಯುಳಿದಿತ್ತು. ಆದರೆ ಶನಿವಾರ ಆ ಶವದ ಡಿಎನ್‌ಎ ಸಂಬಂಧಿಕರೊಂದಿಗೆ ಹೋಲಿಕೆಯಾಗಿದ್ದು, ಕುಟುಂಬಸ್ಥರಿಗೆ ಶವ ಹಸ್ತಾಂತರಿಸಲಾಗಿದೆ. ಆರಂಭದಲ್ಲಿ ಗುಜರಾತ್ ದುರಂತಕ್ಕೆ 272 ಮಂದಿ ಬಲಿಯಾಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಡಿಎನ್‌ಎ ಪರೀಕ್ಷೆಯಲ್ಲಿ 260 ಮೃತದೇಹಗಳ ಗುರುತು ಪತ್ತೆಯಾಗಿದ್ದು, ಅದರಲ್ಲಿ ವಿಮಾನದಲ್ಲಿ 241 ಪ್ರಯಾಣಿಕರು, ಇತರ 19 ಮಂದಿ ಸೇರಿದ್ದಾರೆ.

ಸಿಎಂ ಬೆಂಗಾವಲು ಕಾರಿಗೆ ನೀರು ಮಿಶ್ರಿತ ಡೀಸೆಲ್‌ಗೆ ಮಳೆಯೇ ಕಾರಣ: ಕಂಪನಿ

ಭೋಪಾಲ್‌/ರತ್ಲಾಂ: ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್‌ ಯಾದವ್ ಅವರ 19 ಬೆಂಗಾವಲು ವಾಹನಗಳಿಗೆ ಕಲಬೆರಕೆ ಇಂಧನ ತುಂಬಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ್‌ ಪೆಟ್ರೋಲಿಯಂ (ಬಿಪಿಸಿಎಲ್‌) ಸ್ಪಷ್ಟನೆ ನೀಡಿದೆ.

 ‘ಅನಿರೀಕ್ಷಿತ ಭಾರಿ ಮಳೆಯಿಂದಾಗಿ ಮಳೆ ನೀರು ಡೀಸೆಲ್‌ ಟ್ಯಾಂಕ್‌ಗೆ ಸೇರಿತ್ತು. ಹೀಗಾಗಿ ಇಂಧನ ಕಲಬೆರಕೆಯಾಗಿದೆ’ ಎಂದು ಹೇಳಿದೆ. ಜೂ.26 ರಾತ್ರಿ ಸಿಎಂರ 19 ಬೆಂಗಾವಲು ಕಾರುಗಳು ಕಲಬೆರಕೆ ಇಂಧನದಿಂದಾಗಿ ಕೆಟ್ಟು ನಿಂತಿದ್ದವು. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪಂಪ್‌ ಸೀಲ್‌ ಮಾಡಲಾಗಿತ್ತು. ಶನಿವಾರ ಆಹಾರ ಮತ್ತು ಗ್ರಾಹಕ ವ್ಯವಹಾರ ಇಲಾಖೆಯು ಇಂಧನದ ಮಾದರಿ ಸಂಗ್ರಹಿಸಿ, ಕಲಬೆರಕೆ ಇಂಧನ ಅಡಿಯಲ್ಲಿ ಪ್ರಕರಣ ದಾಖಲಿಸಿದೆ.

ಪ್ರತಿಷ್ಠೆ ಬಳಿಕ ಅಯೋಧ್ಯೆ ರಾಮಮಂದಿರಕ್ಕೆ 5.5 ಕೋಟಿ ಭಕ್ತರ ಭೇಟಿ

ಅಯೋಧ್ಯಾ: 2024ರ ಜ.22ರಂದು ಅಯೋಧ್ಯೆ ರಾಮಮಂದಿರದಲ್ಲಿ ಶ್ರೀರಾಮಲಲಾನ ಪ್ರಾಣಪ್ರತಿಷ್ಠೆಯಾದ ಬಳಿಕ ಭಕ್ತಸಾಗರವೇ ಹರಿದು ಬರುತ್ತಿದ್ದು, ಇದುವರೆಗೂ 5.5 ಕೋಟಿಗೂ ಅಧಿಕ ಭಕ್ತರು ಭೇಟಿ ನೀಡಿ, ಶ್ರೀರಾಮನ ದರ್ಶನ ಪಡೆದಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ. 

ಕೇಂದ್ರ ಸಚಿವರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಚಿತ್ರತಾರೆಯರು ಸೇರಿದಂತೆ 4.5 ಲಕ್ಷಕ್ಕೂ ಅಧಿಕ ವಿಐಪಿಗಳು ಭೇಟಿ ನೀಡಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದರ್ಶನದ ವ್ಯವಸ್ಥೆಗಳು ಅನುಕೂಲಕರವಾಗಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಸಾಮಾನ್ಯ ಭಕ್ತರಾಗಲಿ ಅಥವಾ ಗಣ್ಯರಾಗಲಿ, ಎಲ್ಲಾ ಭಕ್ತರಿಗೂ ಸುಗಮ ದರ್ಶನವನ್ನು ಕಲ್ಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

8 ವರ್ಷ ಕಸ ಗುಡಿಸಿದ್ದ ಗ್ರಾಮದಲ್ಲೇ ಸರಪಂಚ ಹುದ್ದೇಗೆರಿದ ಮಹಿಳೆ

ಅಹಮದಾಬಾದ್‌: 8 ವರ್ಷ ಗುಜರಾತಿನ ಹಳ್ಳಿಯಲ್ಲಿ ಬೀದಿ ಗುಡಿಸುತ್ತಿದ್ದ ಪೌರ ಕಾರ್ಮಿಕ ಮಹಿಳೆಯೊಬ್ಬರು ಇದೀಗ ಅದೇ ಗ್ರಾಮದ ಸರಪಂಚರಾಗಿ ಆಯ್ಕೆಯಾಗುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ.ಗುಜರಾತಿನ ಸನಂದಾ ತಾಲೂಕಿನ ನಿರ್ದೋಡ್‌ ಗ್ರಾಮದಲ್ಲಿ ರಮೀಲಾ ವಘೇಲಾ ಎನ್ನುವ ಪೌರ ಕಾರ್ಮಿಕ ಮಹಿಳಾ ಈ ಗ್ರಾಮದ ಕಳೆದ 8 ವರ್ಷಗಳಿಂದ ಬೀದಿಗಳ ಸ್ವಚ್ಛತೆ ಕೆಲಸವನ್ನು ಮಾಡುತ್ತಿದ್ದರು. 

ಇಲ್ಲಿನ ಸ್ಥಳೀಯಾಡಳಿತ ಅಧಿಕಾರಿಗಳನ್ನು ಸರ್ ಎಂದು ಸಂಭೋಧಿಸಿ ಮಾತನಾಡುತ್ತಿದ್ದರು. ಆದರೆ ರಮೀಲಾ ಇತ್ತೀಚೆಗೆ ಇಲ್ಲಿ ನಡೆದ ಸರಪಂಚ ಚುನಾವಣೆಗೆ ನಿಂತು ಗೆಲುವು ಸಾಧಿಸುವ ಮೂಲಕ ತಮ್ಮ ಅದೃಷ್ಟ ಬದಲಿಸಿಕೊಂಡಿದ್ದಾರೆ. ಚುನಾವಣೆಯಲ್ಲಿ 800ಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆದ್ದಿ ಬೀಗಿದ್ದು, ತಾನು 8 ವರ್ಷ ಕೆಲಸ ಮಾಡಿದ್ದ ಗ್ರಾಮವನ್ನು ಮುಂದಿನ 5 ವರ್ಷಗಳ ಅವಧಿಗೆ ಮುನ್ನಡೆಸಲಿದ್ದಾರೆ,

PREV
Read more Articles on

Latest Stories

ನಿಮಿಷಪ್ರಿಯಾಗೆ ಕ್ಷಮಾದಾನ ಬೇಡ, ಗಲ್ಲಾಗಲಿ
ಅಕ್ಬರ್‌ ಕ್ರೂರ, ಆದರೆ ಸಹಿಷ್ಣು, ಬಾಬರ್‌ ನಿರ್ದಯಿ: ಕೇಂದ್ರೀಯ ಪಠ್ಯ
ದೇಶದಲ್ಲಿ 9 ಲಕ್ಷ ಮಕ್ಕಳು ಒಂದೂ ಲಸಿಕೆ ಪಡೆದಿಲ್ಲ: ವರದಿ