ಆಸ್ಟ್ರೇಲಿಯಾ ಭೇಟಿಗೂ ಮುನ್ನ ಪಿಎಂ ಮೋದಿಗೆ ಕೊಲೆ ಬೆದರಿಕೆ: ತನಿಖೆ

KannadaprabhaNewsNetwork |  
Published : Jul 05, 2026, 03:00 AM IST
Modi

ಸಾರಾಂಶ

ಜು.9ರಂದು ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾದ ಮೆಲ್ಬರ್ನ್‌ಗೆ ಭೇಟಿ ನೀಡಲಿದ್ದು, ಇದಕ್ಕೂ ಕೆಲ ದಿನಗಳ ಮುನ್ನ ಅವರಿಗೆ ಕೊಲೆ ಬೆದರಿಕೆ ಒಡ್ಡಲಾಗಿದೆ. ತಮ್ಮ ನೆಲದಲ್ಲಿ ವಿದೇಶಿ ನಾಯಕರೊಬ್ಬರ ಜೀವಕ್ಕೆ ಅಪಾಯ ಎದುರಾಗುವ ಸೂಚನೆ ಸಿಗುತ್ತಿದ್ದಂತೆ ಪೊಲೀಸರು ಅದರ ತನಿಖೆಗಿಳಿದಿದ್ದಾರೆ.

ಮೆಲ್ಬರ್ನ್: ಜು.9ರಂದು ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾದ ಮೆಲ್ಬರ್ನ್‌ಗೆ ಭೇಟಿ ನೀಡಲಿದ್ದು, ಇದಕ್ಕೂ ಕೆಲ ದಿನಗಳ ಮುನ್ನ ಅವರಿಗೆ ಕೊಲೆ ಬೆದರಿಕೆ ಒಡ್ಡಲಾಗಿದೆ. ತಮ್ಮ ನೆಲದಲ್ಲಿ ವಿದೇಶಿ ನಾಯಕರೊಬ್ಬರ ಜೀವಕ್ಕೆ ಅಪಾಯ ಎದುರಾಗುವ ಸೂಚನೆ ಸಿಗುತ್ತಿದ್ದಂತೆ ಪೊಲೀಸರು ಅದರ ತನಿಖೆಗಿಳಿದಿದ್ದಾರೆ.

‘ಮೆಲ್ಬರ್ನ್‌ ಮೀಟ್ಸ್‌ ಮೋದಿ’ ಕಾರ್ಯಕ್ರಮ

‘ಮೆಲ್ಬರ್ನ್‌ ಮೀಟ್ಸ್‌ ಮೋದಿ’ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಫೇಸ್‌ಬುಕ್‌ನಲ್ಲಿ ಹಾಕಲಾದ ಪೋಸ್ಟ್‌ ಒಂದಕ್ಕೆ, ‘ಕಾರ್ಯಕ್ರಮದ ವೇಳೆ ಮೈದಾನದ ಛಾವಣಿ ಮುಚ್ಚಿದರೆ ಒಳ್ಳೆಯದು. ಇಲ್ಲದಿದ್ದರೆ ಅವರು(ಮೋದಿ) ಸಾವಿಗಾಗಿ ಆಸ್ಟ್ರೇಲಿಯಾಗೆ ಬಂದಂತಾಗುತ್ತದೆ’ ಎಂದು ಅಬು ಮುಸ್ತಫಾ ಎಂಬ ಹೆಸರಿನ ಖಾತೆಯಿಂದ ಕಮೆಂಟ್‌ ಮಾಡಲಾಗಿತ್ತು. 

ಮೊಬೈಲ್‌ನ ಐಪಿ ವಿಳಾಸ   ಪತ್ತೆ

 ಇದಕ್ಕೆ ಬಳಸಲಾದ ಮೊಬೈಲ್‌ನ ಐಪಿ ವಿಳಾಸವನ್ನು ಪೊಲೀಸರು ಪತ್ತೆ ಮಾಡಿದ್ದು, ಆ ಉಪಕರಣವನ್ನು ಹೊಂದಿರುವ ವ್ಯಕ್ತಿ ಹಿಂದೆ ಯಾವುದಾದರೂ ಅಪರಾಧದಲ್ಲಿ ಭಾಗಿಯಾಗಿದ್ದನೇ ಎಂಬುದರ ತನಿಖೆ ನಡೆಸುತ್ತಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಪತಿ ಕೊಂದು ಬಾತ್‌ರೂಂ ಟೈಲ್ಸ್‌ ಅಡಿ ಹೂತ ಪತ್ನಿ
ತೆಲಂಗಾಣ ಡಿಎಸ್ಪಿ ಬಳಿ ಭರ್ಜರಿ₹200 ಕೋಟಿ ಅಕ್ರಮ ಆಸ್ತಿ ಪತ್ತೆ!