ಇಡೀ ಜೀವನ ದೇಶಕ್ಕೆ ಮುಡಿಪಿಟ್ಟ ಮೋದಿಗೆ ಆಪ್ತರೇ ಇಲ್ಲ: ಸ್ಮೃತಿ

KannadaprabhaNewsNetwork |  
Published : Sep 16, 2025, 12:03 AM IST
ಇರಾನಿ | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯಾರೂ ಆಪ್ತರಿಲ್ಲ ಎಂದು ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯಾರೂ ಆಪ್ತರಿಲ್ಲ ಎಂದು ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.

ನಟಿ ಸೋಹಾ ಅಲಿ ಖಾನ್‌ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಸ್ಮೃತಿ, ‘ಮೋದಿಗೆ ಯಾರೂ ಆಪ್ತರಿಲ್ಲ. ಅವರೊಂದಿಗೆ ನನಗೆ ನಿಕಟ ಸಂಬಂಧವಿದೆ ಎಂದು ಯಾರಾದರೂ ಬಂದು ಹೇಳಿದರೆ, ಒಂದೋ ಅವರಿಗೆ ಮೋದಿಯವರ ಬಗ್ಗೆ ಗೊತ್ತಿಲ್ಲ. ಅಥವಾ ಅವರು ಸುಳ್ಳು ಹೇಳುತ್ತಿದ್ದಾರೆ ಎಂದರ್ಥ’ ಎಂದು ಹೇಳಿದ್ದಾರೆ. ಜತೆಗೆ, ‘ಪ್ರಧಾನಿಯವರ ಆಪ್ತವಲಯದಲ್ಲಿ ಇರುವವರು ಯಾವತ್ತೂ ಮಾಧ್ಯಮದಲ್ಲಿ ಅಥವಾ ಮುನ್ನೆಲೆಗೆ ಬರುವುದಿಲ್ಲ’ ಎಂದೂ ಸ್ಮೃತಿ ತಿಳಿಸಿದ್ದಾರೆ.

ಇದಕ್ಕೆ ಕಾರಣವನ್ನೂ ಹೇಳಿರುವ ಅವರು, ‘ಪ್ರಧಾನಿ ಮೋದಿ ಅವರು ದೇಶಸೇವೆಯ ದೊಡ್ಡ ಉದ್ದೇಶವನ್ನಿಟ್ಟುಕೊಂಡು ಬಂದವರು. ಹಾಗಾಗಿ ಅದಕ್ಕೆ ಯೋಗ್ಯವಾಗಿರದವರನ್ನು ಅವರೆಂದೂ ಆರಿಸುವುದಿಲ್ಲ. ಇರುವ ಒಂದು ಜೀವನವನ್ನು ಅವರು ದೇಶಕ್ಕೆ ಮುಡಿಪಾಗಿಟ್ಟಿದ್ದಾರೆ’ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ನಮ್ಮನ್ನು ಅಮೆರಿಕ ಟಾಯ್ಲೆಟ್‌ ಪೇಪರ್‌ ರೀತಿ ಬಳಸ್ತು: ಪಾಕ್‌ ಸಚಿವ
ಪಿಒಕೆ, ಅಕ್ಸಾಯ್‌ ಚಿನ್‌ ಇರುವ ಭಾರತ ನಕ್ಷೆ ಅಳಿಸಿದ ಅಮೆರಿಕ