ಕರ್ನಾಟಕದಲ್ಲಿ ಶಾಸಕರ ಬೆನ್ನಲ್ಲೇ ಕೇಂದ್ರ ಸರ್ಕಾರವೂ ಸಂಸದರ ಸಂಬಳ ಶೇ.24ರಷ್ಟು ಹೆಚ್ಚಳ ಮಾಡಿ ಆದೇಶ

KannadaprabhaNewsNetwork |  
Published : Mar 25, 2025, 12:48 AM ISTUpdated : Mar 25, 2025, 04:12 AM IST
ವೇತನ | Kannada Prabha

ಸಾರಾಂಶ

ಕರ್ನಾಟಕದಲ್ಲಿ ಶಾಸಕರ ವೇತನದಲ್ಲಿ ಶೇ.100 ಹೆಚ್ಚಳ ಮಾಡಿದ ಬೆನ್ನಲ್ಲೇ, ಕೇಂದ್ರ ಸರ್ಕಾರವೂ ಸಂಸದರ ವೇತನದಲ್ಲಿ ಶೇ.24ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಇದರಿಂದಾಗಿ ಈವರೆಗೆ 1 ಲಕ್ಷ ರು. ಸಂಬಳ ಪಡೆಯುತ್ತಿದ್ದ ಸಂಸದರು ಇನ್ನು 1.24 ಲಕ್ಷ ರು. ಮಾಸಿಕ ವೇತನ ಪಡೆಯಲಿದ್ದಾರೆ.

ನವದೆಹಲಿ :  ಕರ್ನಾಟಕದಲ್ಲಿ ಶಾಸಕರ ವೇತನದಲ್ಲಿ ಶೇ.100 ಹೆಚ್ಚಳ ಮಾಡಿದ ಬೆನ್ನಲ್ಲೇ, ಕೇಂದ್ರ ಸರ್ಕಾರವೂ ಸಂಸದರ ವೇತನದಲ್ಲಿ ಶೇ.24ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಇದರಿಂದಾಗಿ ಈವರೆಗೆ 1 ಲಕ್ಷ ರು. ಸಂಬಳ ಪಡೆಯುತ್ತಿದ್ದ ಸಂಸದರು ಇನ್ನು 1.24 ಲಕ್ಷ ರು. ಮಾಸಿಕ ವೇತನ ಪಡೆಯಲಿದ್ದಾರೆ.

ಇದರ ಜತೆಗೆ ಇತರ ಭತ್ಯೆಗಳೂ ಏರಿಕೆ ಕಾಣಲಿವೆ. 2023ರ ಏ.1ರಿಂದಲೇ ಪೂರ್ವಾನ್ವಯವಾಗಿ ಹೊಸ ವೇತನ ಜಾರಿಗೆ ಬರಲಿದೆ.

ಸಂಸದೀಯ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಅಧಿಸೂಚನೆಯನ್ವಯ, ಹಾಲಿ ಸದಸ್ಯರಿಗೆ ದಿನಭತ್ಯೆ ಮತ್ತು 5 ವರ್ಷಗಳಿಗಿಂತ ಹೆಚ್ಚಿನ ಸೇವೆ ಸಲ್ಲಿಸಿದ ಮಾಜಿ ಸದಸ್ಯರ ಪಿಂಚಣಿ ಕೂಡಾ ಹೆಚ್ಚಿಸಲಾಗಿದೆ.

ಈ ಹಿಂದೆ ಅರುಣ್ ಜೇಟ್ಲಿ ವಿತ್ತ ಸಚಿವರಾಗಿದ್ದಾಗ ಸಂಸದರ ವೇತನವನ್ನು 50 ಸಾವಿರ ರು.ನಿಂದ 1 ಲಕ್ಷ ರು.ಗೆ ಹೆಚ್ಚಿಸಲಾಗಿತ್ತು.

ಯಾರಿಗೆ ಎಷ್ಟೆಷ್ಟು ಹೆಚ್ಚು?:

ಹೊಸ ವೇತನದ ಪ್ರಕಾರ, 1 ಲಕ್ಷ ರು. ಇದ್ದ ಸಂಸದರ ಸಂಬಳ 1.24 ಲಕ್ಷಕ್ಕೆ ಹೆಚ್ಚಳವಾಗಿದೆ. ದಿನಭತ್ಯೆ 2,000 ರು.ನಿಂದ 2,500 ರು.ಗೆ ಏರಲಿದೆ. ಮಾಸಿಕ ಕ್ಷೇತ್ರ ಭತ್ಯೆ 70 ಸಾವಿರ ರು.ನಿಂದ 87 ಸಾವಿರ ರು.ಗೆ, ಕಚೇರಿ ವೆಚ್ಚವನ್ನು 60 ಸಾವಿರ ರು.ನಿಂದ 75 ಸಾವಿರ ರು.ಗೆ ಹೆಚ್ಚಿಸಲಾಗಿದೆ. ಕಚೇರಿ ಖರ್ಚಿನಲ್ಲಿ 50 ಸಾವಿರ ರು. ನೀಡಿ ಕಂಪ್ಯೂಟರ್‌ ಆಪರೇಟರ್‌ ನೇಮಿಸಿಕೊಳ್ಳಬೇಕು. ಬಾಕಿ 25 ಸಾವಿರ ರು.ಗಳನ್ನು ಕಚೇರಿ ನಿರ್ವಹಣೆಗೆ ನೀಡಬೇಕು.

5 ವರ್ಷದ ಅವಧಿಯಲ್ಲಿ ಸಂಸದರು ಇನ್ನು 1 ಲಕ್ಷ ರು. ಬದಲು 1.25 ಲಕ್ಷ ರು. ಮೊತ್ತದ ಪೀಠೋಪಕರಣ ಖರೀದಿಸಬಹುದು. ಜೊತೆಗೆ 34 ಒನ್‌ ವೇ ಏರ್‌ ಟಿಕೆಟ್‌ ಶುಲ್ಕ ನೀಡಲಾಗುವುದು.

ಅದೇ ರೀತಿ, ಮಾಜಿ ಸಂಸದರ ಪಿಂಚಣಿ ಮಾಸಿಕ 25,000ದಿಂದ 31,000ಕ್ಕೆ ಹೆಚ್ಚಳವಾಗಿದೆ. 5 ವರ್ಷಗಳಿಗಿಂತ ಹೆಚ್ಚಿನ ಸೇವೆ ಸಲ್ಲಿಸಿದವರ ವಾರ್ಷಿಕ ಹೆಚ್ಚುವರಿ ಪಿಂಚಣಿಯನ್ನು ತಿಂಗಳಿಗೆ 2,000 ರು.ನಿಂದ 2,500 ರು.ಗೆ ಏರಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ