‘ಫ್ಲೈಯಿಂಗ್‌ ಕಿಸ್‌, ಕಣ್ಣು ಹೊಡೆಯುವುದು ಸಹ ಲೈಂಗಿಕ ಕಿರುಕುಳವೆಂದೇ ಆಗುತ್ತದೆ. ಅದು ಮಹಿಳೆಯ ಘನತೆಗೆ ಧಕ್ಕೆ’ ಎಂದು ಚಂಡೀಗಢ ಕೋರ್ಟ್‌ ವ್ಯಕ್ತಿಯೋರ್ವನಿಗೆ 10,000 ರು. ದಂಡ ಹಾಕಿದೆ.

ಮಹಿಳೆಯ ಘನತೆಗೆ ಧಕ್ಕೆ ತರುವುದು ಅಪರಾಧ: ಕೋರ್ಟ್‌

ಚಂಡೀಗಢ: ‘ಫ್ಲೈಯಿಂಗ್‌ ಕಿಸ್‌, ಕಣ್ಣು ಹೊಡೆಯುವುದು ಸಹ ಲೈಂಗಿಕ ಕಿರುಕುಳವೆಂದೇ ಆಗುತ್ತದೆ. ಅದು ಮಹಿಳೆಯ ಘನತೆಗೆ ಧಕ್ಕೆ’ ಎಂದು ಚಂಡೀಗಢ ಕೋರ್ಟ್‌ ವ್ಯಕ್ತಿಯೋರ್ವನಿಗೆ 10,000 ರು. ದಂಡ ಹಾಕಿದೆ. 2021ರಲ್ಲಿ ಮನೆಯ ಮುಂದೆ ಕಸ ಗುಡಿಸುವ ವೇಳೆ ವ್ಯಕ್ತಿಯೋರ್ವ 500 ರು. ನೋಟು ಬಿಸಾಡಿ, ಫ್ಲೈಯಿಂಗ್‌ ಕಿಸ್‌ ಕೊಟ್ಟ ಬಗ್ಗೆ ಮಹಿಳೆ ಹೂಡಿದ್ದ ಪ್ರಕರಣ ವಿಚಾರಣೆ ನಡೆಸಿದ ಇಲ್ಲಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ, ‘ನೋಟು ಬಿಸಾಡುವುದು, ಅಸಭ್ಯ ಚಿಹ್ನೆಗಳನ್ನು ತೋರುವುದು, ಫ್ಲೈಯಿಂಗ್‌ ಕಿಸ್‌ ಕೊಡುವುದೂ ಸಹ ಕಿರುಕುಳವೆಂದೇ ಪರಿಗಣಿಸಲಾಗುತ್ತದೆ ಎಂದಿದೆ. ದೋಷಿಯಂದ 20,000 ರು. ಪ್ರೊಬೇಷನ್‌ ಬಾಂಡ್‌ (ಶೂರಿಟಿ ಬಾಂಡ್‌) ಪಡೆದು, 10,000 ರು. ದಂಡ ಹಾಕಿದೆ.