ಮುಂಬೈನ ಕಾಲೇಜೊಂದರಲ್ಲಿ ಸಹ ಪ್ರಾಧ್ಯಾಪಕನಿಂದ ವೈದ್ಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

KannadaprabhaNewsNetwork |  
Published : Sep 16, 2024, 01:52 AM ISTUpdated : Sep 16, 2024, 04:48 AM IST
ಪ್ರತಿಭಟನೆ | Kannada Prabha

ಸಾರಾಂಶ

ಕೊಲ್ಕತಾ ಆರ್‌ಜಿ ಕರ್‌ ಕಾಲೇಜು ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಮುಂಬೈನ ಕಾಲೇಜೊಂದರಲ್ಲಿ ಸಹ ಪ್ರಾಧ್ಯಾಪಕನೊಬ್ಬ ವೈದ್ಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.

 ಮುಂಬೈ :  ಕೊಲ್ಕತಾ ಆರ್‌ಜಿ ಕರ್‌ ಕಾಲೇಜು ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಮುಂಬೈನ ಕಾಲೇಜೊಂದರಲ್ಲಿ ಸಹ ಪ್ರಾಧ್ಯಾಪಕನೊಬ್ಬ ವೈದ್ಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.

ಮುಂಬೈ ಸೆಂಟ್ರಲ್‌ನಲ್ಲಿ ನಗರಪಾಲಿಕೆ ನಡೆಸುವ ನಾಯರ್‌ ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿಯೊಬ್ಬಳಿಗೆ ಸಹ ಪ್ರಾಧ್ಯಾಪಕ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದ್ದು, ಆತನನ್ನು ಶನಿವಾರ ಅಮಾನತುಗೊಳಿಸಲಾಗಿದೆ. ಈ ಪ್ರಕರಣದ ತನಿಖೆಯನ್ನು ನಗರ ಪಾಲಿಕೆಯ ಸಮಿತಿ ಕೈಗೆತ್ತಿಕೊಂಡಿದೆ. ಈ ತನಿಖಾ ಸಮಿತಿಯ ತೀರ್ಮಾನವನ್ನು ಆಧರಿಸಿ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

==

ವೈದ್ಯೆ ರೇಪ್‌: ಸೆ.17ರವರೆಗೆ ಡಾ। ಘೋಷ್‌, ಮಂಡಲ್‌ ಸಿಬಿಐ ಕಸ್ಟಡಿಗೆ

ಕೋಲ್ಕತಾ: ಆರ್‌ಜಿ ಕರ್‌ ವೈದ್ಯಕೀಯ ಕಾಲೇಜಿನ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಪ್ರಾಂಶುಪಾಲ ಡಾ। ಸಂದೀಪ್ ಘೋಷ್ ಹಾಗೂ ತಾಲಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್‌ ಅಭಿಜಿತ್ ಮಂಡಲ್‌ರನ್ನು ಸೆ.17ರ ವರೆಗೆ ಸಿಬಿಐ ಕಸ್ಟಡಿಗೆ ಸ್ಥಳೀಯ ನ್ಯಾಯಾಲಯ ಒಪ್ಪಿಸಿದೆ.ವೈದ್ಯೆಯ ಸಾವನ್ನು ತಕ್ಷಣವೇ ಘೋಷಿಸದೆ, ಎಫ್‌ಐಆರ್‌ ದಾಖಲಿಸಿಕೊಳ್ಳುವಲ್ಲಿ ತಡ ಮಾಡಿ, ಸಾಕ್ಷ್ಯ ನಾಶ ಮಾಡಿದ್ದಾರೆ ಎಂದು ಸಿಬಿಐ ಇವರ ವಿರುದ್ಧ ಆರೋಪಿಸಿ ಶನಿವಾರ ಬಂಧಿಸಿತ್ತು. ಇದರೊಂದಿಗೆ ಬಂಧಿತರ ಸಂಖ್ಯೆ 3ಕ್ಕೇರಿತ್ತು.

ಈ ನಡುವೆ, ಘೋಷ್‌, ಮಂಡಲ್‌ರನ್ನು ಕೋರ್ಟಿಗೆ ಕರೆತರುವಾಗ ಕೆಲವು ಪ್ರತಿಭಟನಾನಿರತ ವೈದ್ಯರು ಇವರ ವಿರುದ್ಧ ಘೋಷಣೆ ಕೂಗಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ