ಮೈಸೂರಲ್ಲಿ ಈಗಮತ್ತೊಂದು ಡ್ರಗ್ಸ್‌ ಫ್ಯಾಕ್ಟರಿ ಪತ್ತೆ- ಮನೆಯಲ್ಲೇ ಡ್ರಗ್ಸ್‌ ತಯಾರಿಸುತ್ತಿದ್ದ ಜಾಲ

KannadaprabhaNewsNetwork |  
Published : Feb 25, 2026, 02:15 AM ISTUpdated : Feb 25, 2026, 05:16 AM IST
Drug Factory

ಸಾರಾಂಶ

ಮೈಸೂರಿನಲ್ಲಿ ಮಾದಕ ವಸ್ತು ಉತ್ಪಾದನೆ, ಮಾರಾಟ ದಂಧೆಗೆ ಬ್ರೇಕ್‌ ಹಾಕುವುದಾಗಿ ಭರವಸೆ ನಡುವೆ  ಮತ್ತೊಂದು ಡ್ರಗ್ಸ್‌ ಫ್ಯಾಕ್ಟರಿ ಪತ್ತೆ. ನಗರ ಹೊರವಲಯದ ಮನೆಯೊಂದರಲ್ಲಿ ನಡೆಯುತ್ತಿದ್ದ ಡ್ರಗ್ಸ್ ತಯಾರಿಕಾ ಘಟಕ ಪತ್ತೆ ಮಾಡಿರುವ ಮೈಸೂರು ಜಿಲ್ಲಾ ಪೊಲೀಸರು, ಈ ಜಾಲದಲ್ಲಿದ್ದ  ಐವರನ್ನು ಬಂಧಿಸಿದ್ದಾರೆ.

 ಮೈಸೂರು :  ಮೈಸೂರಿನಲ್ಲಿ ಮಾದಕ ವಸ್ತು ಉತ್ಪಾದನೆ, ಮಾರಾಟ ದಂಧೆಗೆ ಬ್ರೇಕ್‌ ಹಾಕುವುದಾಗಿ ಸರ್ಕಾರದ ಭರವಸೆಗಳ ನಡುವೆಯೇ, ನಗರದಲ್ಲಿ ಮತ್ತೊಂದು ಡ್ರಗ್ಸ್‌ ಫ್ಯಾಕ್ಟರಿ ಪತ್ತೆಯಾಗಿದೆ. ನಗರ ಹೊರವಲಯದ ಮನೆಯೊಂದರಲ್ಲಿ ನಡೆಯುತ್ತಿದ್ದ ಡ್ರಗ್ಸ್ ತಯಾರಿಕಾ ಘಟಕ ಪತ್ತೆ ಮಾಡಿರುವ ಮೈಸೂರು ಜಿಲ್ಲಾ ಪೊಲೀಸರು, ಈ ಜಾಲದಲ್ಲಿದ್ದ ಗುಜರಾತ್‌ ಮೂಲದ ಐವರನ್ನು ಬಂಧಿಸಿದ್ದಾರೆ.

ಈ ಜಾಲದಲ್ಲಿರುವ ಇನ್ನೂ ಹೆಚ್ಚಿನ ಮಂದಿಯ ಬಂಧನಕ್ಕೆ ಶೋಧ

ಈ ಜಾಲದಲ್ಲಿರುವ ಇನ್ನೂ ಹೆಚ್ಚಿನ ಮಂದಿಯ ಬಂಧನಕ್ಕೆ ಜಿಲ್ಲಾ ಪೊಲೀಸರು ಗುಜರಾತಿನಲ್ಲಿ ಶೋಧ ಮುಂದುವರಿಸಿದ್ದಾರೆ. ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿನ ಫ್ಯಾಕ್ಟರಿಯಲ್ಲಿ ಡ್ರಗ್ಸ್ ತಯಾರಿಕೆ ಪತ್ತೆಯಾಗುತ್ತಿದ್ದಂತೆ ಅಲರ್ಟ್ ಆಗಿದ್ದ ಜಿಲ್ಲಾ ಪೊಲೀಸರು, ಕಳೆದ ಜ.28 ರಂದು ಮೈಸೂರು ತಾಲೂಕು ಯಾಂದಳ್ಳಿಯಲ್ಲಿನ ಮನೆಯೊಂದರಲ್ಲಿ ಡ್ರಗ್ಸ್ ತಯಾರಿಕೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದರು.

ಹಲವು ರಾಸಾಯನಿಕ ವಸ್ತುಗಳು ಪತ್ತೆ

ದಾಳಿ ವೇಳೆ ಆ ಮನೆಯಲ್ಲಿ ಹಲವು ರಾಸಾಯನಿಕ ವಸ್ತುಗಳು ಹಾಗೂ 10 ಬ್ಯಾರಲ್ ರಾಸಾಯನಿಕ ದ್ರವ್ಯ ಪತ್ತೆಯಾಗಿತ್ತು. ಇದು ಡ್ರಗ್ಸ್ ಎಂಬ ಅಂತಿಮ ತೀರ್ಮಾನ ಕೈಗೊಳ್ಳದ ಪೊಲೀಸರು, ಅಲ್ಲಿ ದೊರೆತ ರಾಸಾಯನಿಕ ವಸ್ತುಗಳು ಮತ್ತು ದ್ರವ್ಯಗಳ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಎಫ್ಎಸ್‌ಎಲ್ ವರದಿ ಈಗ ಪೊಲೀಸರ ಕೈ ಸೇರಿದ್ದು, ಮನೆಯಲ್ಲಿ ದೊರೆತ ರಾಸಾಯನಿಕ ವಸ್ತುಗಳು ಡ್ರಗ್ಸ್ ಎಂದು ಪ್ರಯೋಗಾಲಯದ ವರದಿ ಖಚಿತಪಡಿಸಿದೆ. ಆ ಮನೆಯಲ್ಲಿ ದೊರೆತ 1 ಕೇಜಿ ತೂಕದ ಮಾದಕ ವಸ್ತು ಹಾಗೂ ಡ್ರಗ್ಸ್ ತಯಾರಿಕೆಗೆ ಅವಶ್ಯವಿರುವ ಕಚ್ಚಾ ರಾಸಾಯನಿಕ ಡ್ರಗ್ಸ್ ತಯಾರಿಗೆ ಬಳಸುವ ವಸ್ತುಗಳು ಎಂಬುದು ಧೃಡಪಟ್ಟಿದೆ.

ಕಳೆದ ಜ.28ರಂದು ಮೈಸೂರಿನ ಕೈಗಾರಿಕಾ ಪ್ರದೇಶದ ಮನೆ ಮೇಲೆ ಪೊಲೀಸರ ದಾಳಿ

ಮನೆಯಲ್ಲಿ ಭಾರೀ ಪ್ರಮಾಣದ ರಾಸಾಯನಿಕ ಪತ್ತೆ. ಇದನ್ನು ತಪಾಸಣೆಗೆ ಕಳಿಸಿದ್ದ ಪೊಲೀಸರು

ಈಗ ಎಫ್‌ಎಸ್‌ಎಲ್‌ ವರದಿ ಆಗಮನ. ಅದರಲ್ಲಿ ಮನೆಯಲ್ಲಿ ಪತ್ತೆಯಾಗಿದ್ದು ಡ್ರಗ್ಸ್‌ ಎಂದು ಸಾಬೀತು

ಈ ಹಿನ್ನೆಲೆಯಲ್ಲಿ ದಂಧೆ ನಡೆಸುತ್ತಿದ್ದ ಗುಜರಾತ್‌ ಮೂಲದ ಐವರ ಬಂಧಿಸಿದ ಮೈಸೂರು ಪೊಲೀಸರು

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಅಮೆರಿಕದಲ್ಲಿ ಭಾರೀ ಹಿಮಪಾತ: 11,000 ವಿಮಾನಗಳು ಸ್ಥಗಿತ
ಇರಾನ್‌ ಮೇಲೆ ಯುದ್ಧಕ್ಕೆ ಹೊರಟ 5000ಅಮೆರಿಕ ಯೋಧರಿಗೆ ಟಾಯ್ಲೆಟ್‌ ಪ್ರಾಬ್ಲಂ