ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಗ್ರೇಡಿಂಗ್‌ ವ್ಯವಸ್ಥೆ ರದ್ದು

KannadaprabhaNewsNetwork |  
Published : Jan 29, 2024, 01:33 AM ISTUpdated : Jan 29, 2024, 06:53 AM IST
ಮಾನ್ಯತೆ | Kannada Prabha

ಸಾರಾಂಶ

ಗ್ರೇಡ್ ಬದಲು ಮಾನ್ಯತೆ, ಮಾನ್ಯತೆ ರಹಿತ ಎಂದು ವರ್ಗೀಕರಣ ಮಾಡಲು ನ್ಯಾಕ್‌ ನಿರ್ಧರಿಸಿದೆ. ಮಾನ್ಯತೆ ಪಡೆದ ಸಂಸ್ಥೆಗಳು ಮತ್ತೆ 5 ಹಂತದಲ್ಲಿ ವರ್ಗೀಕರಣ ಮಾಡಲಾಗುವುದು ಎಂದು ನ್ಯಾಕ್‌ ತಿಳಿಸಿದೆ.

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಗ್ರೇಡ್‌ ನೀಡುವ ವ್ಯವಸ್ಥೆಯನ್ನು ಕೈಬಿಡಲು ಹಾಗೂ ಗ್ರೇಡ್ ಬದಲು ಮಾನ್ಯತೆ, ಮಾನ್ಯತೆ ರಹಿತ ಎಂದು ವರ್ಗೀಕರಣ ಮಾಡಲು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್‌) ನಿರ್ಧರಿಸಿದೆ.ಶನಿವಾರ ಇಲ್ಲಿ ನಡೆದ ನ್ಯಾಕ್‌ ಆಡಳಿತ ಮಂಡಳಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಗ್ರೇಡಿಂಗ್‌ ವ್ಯವಸ್ಥೆ ರದ್ದುಗೊಳಿಸಿ ಅದರ ಬದಲಾಗಿ ಮಾನ್ಯತೆ ಹೊಂದಿದ ಮತ್ತು ಮಾನ್ಯತೆ ರಹಿತ ಎಂದು ಎರಡು ವಿಭಾಗಳಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ವರ್ಗೀಕರಣ ಮಾಡಲಾಗುವುದು. 

ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳನ್ನು ಮತ್ತೆ 5 ಹಂತಗಳಲ್ಲಿ ವಿಂಗಡಿಸಲಾಗುವುದು. ಈ ಮೂಲಕ ಪ್ರತಿ ಶಿಕ್ಷಣ ಸಂಸ್ಥೆಗಳು ಮತ್ತಷ್ಟು ಎತ್ತರಕ್ಕೆ ಏರಲು ಪ್ರೋತ್ಸಾಹ ನೀಡಲು ನಿರ್ಧರಿಸಲಾಗಿದೆ.

ಈ ನಿರ್ಧಾರವನ್ನು 2 ಹಂತದಲ್ಲಿ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ ಮುಂದಿನ 4 ತಿಂಗಳ ಅವಧಿಯಲ್ಲಿ ಮಾನ್ಯತೆ ಹೊಂದಿದ ಮತ್ತು ಮಾನ್ಯತೆ ರಹಿತ ವಿಭಾಗಳನ್ನು ರಚಿಸಲಾಗುವುದು. 

ಎರಡನೇ ಹಂತದಲ್ಲಿ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಆಧರಿಸಿ ಅವುಗಳಿಗೆ ಮುಂದಿನ ಡಿಸೆಂಬರ್‌ ಒಳಗೆ ಒಂದರಿಂದ ಐದು ಅಂಕಗಳನ್ನು ನೀಡಲಾಗುವುದು.

ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮಾನ್ಯತೆ ಪ್ರಕ್ರಿಯೆ ವ್ಯಾಪ್ತಿಗೆ ತಂದು ಅವುಗಳ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಈ ಬದಲಾವಣೆ ತರಲಾಗಿದೆ. ಈ ಮೂಲಕ ಗುಣಮಟ್ಟದ ಉನ್ನತ ಶಿಕ್ಷಣ ವ್ಯವಸ್ಥೆ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !