ದೇಶದ ಜನರಿಗೆ ಪ್ರಧಾನಿ ಅಭಯ-ಕೊಲ್ಲಿ ಯುದ್ಧಸ್ಥಿತಿ ನಿರ್ವಹಣೆಗೆ 7 ತಂಡ: ಮೋದಿ

Published : Mar 25, 2026, 05:30 AM IST
Narendra Modi

ಸಾರಾಂಶ

ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಪರಿಣಾಮವನ್ನು ನಿಭಾಯಿಸಲು ಹಾಗೂ ಇಂಧನ, ಪೂರೈಕೆ ಸರಪಳಿ ಮತ್ತು ರಸಗೊಬ್ಬರಗಳ ಮೇಲಿನ ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸಲು ಸರ್ಕಾರವು 7 ಉನ್ನತ ಮಟ್ಟದ ಸಶಕ್ತ ಗುಂಪುಗಳನ್ನು ರಚಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.

ನವದೆಹಲಿ : ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಪರಿಣಾಮವನ್ನು ನಿಭಾಯಿಸಲು ಹಾಗೂ ಇಂಧನ, ಪೂರೈಕೆ ಸರಪಳಿ ಮತ್ತು ರಸಗೊಬ್ಬರಗಳ ಮೇಲಿನ ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸಲು ಸರ್ಕಾರವು 7 ಉನ್ನತ ಮಟ್ಟದ ಸಶಕ್ತ ಗುಂಪುಗಳನ್ನು ರಚಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ. ಜತೆಗೆ ರೈತರೊಂದಿಗೆ ನಾವಿದ್ದೇವೆ, ಅವರಿಗೆ ರಸಗೊಬ್ಬರ ಅಡಚಣೆ ಆಗದಂತೆ ಕ್ರಮ ಜರುಗಿಸುತ್ತೇವೆ ಎಂಬ ಭರವಸೆಯನ್ನೂ ನೀಡಿದ್ದಾರೆ.

ಮಂಗಳವಾರ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ‘ಕದನವು ಜಾಗತಿಕವಾಗಿ ಗಂಭೀರ ಇಂಧನ ಬಿಕ್ಕಟ್ಟನ್ನು ಸೃಷ್ಟಿಸಿದೆ. ಹೀಗಿರುವಾಗ, ಭಾರತದ ಮೇಲೆ ಅದು ಬೀರಿರುವ ಪರಿಣಾಮವನ್ನು ತಗ್ಗಿಸಲು ಯತ್ನಿಸುತ್ತಿದೆ. ಇದಕ್ಕಾಗಿ ಲಭ್ಯವಿರುವ ಎಲ್ಲ ಮೂಲಗಳಿಂದ ಇಂಧನವನ್ನು ತರಿಸಿಕೊಳ್ಳಲಾಗುತ್ತಿದೆ’ ಎಂದರು.

ಇದಲ್ಲದೆ, ‘ರಸಗೊಬ್ಬರ ಪೂರೈಕೆಗೆ ಅಡಚಣೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಇದರ ಹೊರತಾಗಿಯೂ, ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಯತ್ನವನ್ನು ಮುಂದುವರೆಸಿದೆ’ ಎಂದು ಹೇಳಿದರು.

7 ಸಮಿತಿಗಳ ರಚನೆ:

‘ಕೊರೋನಾ ಕಾಲದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಯನ್ನೇ ಈಗಲೂ ಅಳಗಡಿಸಿಕೊಂಡು, ಅಧಿಕಾರಿಗಳು ಮತ್ತು ತಜ್ಞರನ್ನೊಳಗೊಂಡ 7 ಗುಂಪುಗಳನ್ನು ನಿನ್ನೆಯಷ್ಟೇ(ಸೋಮವಾರ) ರಚಿಸಲಾಗಿದೆ. ಈ ಅಂತರ್‌-ಸಚಿವಾಲಯ ಗುಂಪುಗಳು ಪೂರೈಕೆ ಸರಪಳಿ, ಪೆಟ್ರೋಲಿಯಂ ಮತ್ತು ಡೀಸೆಲ್, ರಸಗೊಬ್ಬರ, ನೈಸರ್ಗಿಕ ಅನಿಲ, ಹಣದುಬ್ಬರದಂತಹ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಾರೆ’ ಎಂದು ಪ್ರಧಾನಿ ಮೋದಿ ಹೇಳಿದರು.

ಇದೇ ವೇಳೆ, ಜನರ ಅಸಹಾಯಕತೆಯ ಲಾಭ ಪಡೆಯಲು ಹವಣಿಸುವವರಿಗೆ ಎಚ್ಚರಿಸಿದ ಮೋದಿ, ಕಾಳಸಂತೆಯಲ್ಲಿ ಬಿಕರಿ ಹಾಗೂ ಶೇಖರಣೆಯ ಮೇಲೆ ಕಣ್ಣಿಡುವಂತೆ ರಾಜ್ಯಸರ್ಕಾರಗಳಿಗೆ ಸೂಚಿಸಿದರು.==

ತಂಡದಲ್ಲಿ ಯಾರ್‍ಯಾರು?

ಪೂರೈಕೆ ಸರಪಳಿ, ಪೆಟ್ರೋಲಿಯಂ ಮತ್ತು ಡೀಸೆಲ್, ರಸಗೊಬ್ಬರ, ನೈಸರ್ಗಿಕ ಅನಿಲ, ಹಣದುಬ್ಬರದಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅಂತರ್‌-ಸಚಿವಾಲಯದ ಅಧಿಕಾರಿಗಳ ಮಟ್ಟದ ಗುಂಪು ರಚನೆ.

ಕಾಳಸಂತೆ ಬಗ್ಗೆ ಕಟ್ಟೆಚ್ಚರ ವಹಿಸಿ

ಪ್ರಸಕ್ತ ಪರಿಸ್ಥಿತಿಯಲ್ಲಿ ಜನರ ಅಸಹಾಯಕತೆಯ ಲಾಭ ಪಡೆಯಲು ಹವಣಿಸುವ ಶಕ್ತಿಗಳಿವೆ. ಹೀಗಾಗಿ ಕಾಳಸಂತೆಯಲ್ಲಿ ಬಿಕರಿ ಹಾಗೂ ಶೇಖರಣೆಯ ಮೇಲೆ ರಾಜ್ಯ ಸರ್ಕಾರಗಳು ಕಣ್ಣಿಡಬೇಕು ಎಂದು ಪ್ರಧಾನಿ ಮೋದಿ ಸೂಚನೆ.

ಕೊಲ್ಲಿ ಬಿಕ್ಕಟ್ಟು ಚರ್ಚೆಗೆ ಇಂದು ಸರ್ವಪಕ್ಷ ಸಭೆ

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಸಂಘರ್ಷ, ಅವುಗಳು ಭಾರತದ ಮೇಲೆ ಬೀರಿರುವ ಪರಿಣಾಮ, ಸವಾಲುಗಳ ಕುರಿತು ಚರ್ಚಿಸಲು ಕೇಂದ್ರ ಸರ್ಕಾರ ಬುಧವಾರ ಸರ್ವಪಕ್ಷಗಳ ಸಭೆ ಕರೆದಿದೆ. ದಿನದ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಸಂಸತ್‌ನಲ್ಲಿ ಮಾತನಾಡುವ ವೇಳೆ ‘ಕೋವಿಡ್‌ ಎದುರಿಸಿದಂತೆ ಎಲ್ಲರೂ ಈ ಬಿಕ್ಕಟ್ಟನ್ನು ಎಲ್ಲರೂ ಒಗ್ಗಟ್ಟಾಗಿ ಎದುರಿಸಬೇಕು’ ಎಂದು ಕರೆ ನೀಡಿದ್ದರು. ಈ ಬೆನ್ನಲ್ಲೇ ಸರ್ಕಾರ ಸರ್ವಪಕ್ಷಗಳ ಸಭೆ ಕರೆದಿದೆ. ಯುದ್ಧ ಪರಿಣಾಮ ದೇಶದಲ್ಲಿ ಉಂಟಾಗಿರುವ ಎಲ್‌ಪಿಜಿ ಬಿಕ್ಕಟ್ಟು, ಅಸ್ಥಿರ ಮಾರುಕಟ್ಟೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆಯಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕಾಮಿ ಜ್ಯೋತಿಷಿ ಖರಾತ್‌ನ 1500 ಕೋಟಿ ರು. ಆಸ್ತಿ ! - 100 ಸೆ* ಸಿಡಿ, 5 ಗುಂಡುಗಳು ಪತ್ತೆ
ಇ.ಡಿ. ದಾಳಿಗೆ ಅಡ್ಡಿ : ದೀದಿಗೆ ಸುಪ್ರೀಂ ಕೋರ್ಟ್‌ ಗುದ್ದು