ಮೋದಿ ಎಂದಾದರೂ ಮುಸ್ಲಿಮರ ಟೋಪಿ ಧರಿಸಲಿ : ನಾಸಿರುದ್ದೀನ್‌

KannadaprabhaNewsNetwork |  
Published : Jun 13, 2024, 12:52 AM ISTUpdated : Jun 13, 2024, 05:22 AM IST
Naseeruddin Shah

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಮುಸಲ್ಮಾನರ ಟೋಪಿಯನ್ನು ಧರಿಸುವ ಮೂಲಕ ಸಮುದಾಯದ ಬಗ್ಗೆ ತಮಗೆ ದ್ವೇಷ ಭಾವವಿಲ್ಲ ಎಂಬುದನ್ನು ಪ್ರದರ್ಶಿಸಬೇಕು ಎಂದು ಬಾಲಿವುಡ್‌ ನಟ ನಾಸಿರುದ್ದೀನ್‌ ಶಾ ಸಲಹೆ ಮಾಡಿದ್ದಾರೆ.

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ಮುಸಲ್ಮಾನರ ಟೋಪಿಯನ್ನು ಧರಿಸುವ ಮೂಲಕ ಸಮುದಾಯದ ಬಗ್ಗೆ ತಮಗೆ ದ್ವೇಷ ಭಾವವಿಲ್ಲ ಎಂಬುದನ್ನು ಪ್ರದರ್ಶಿಸಬೇಕು ಎಂದು ಬಾಲಿವುಡ್‌ ನಟ ನಾಸಿರುದ್ದೀನ್‌ ಶಾ ಸಲಹೆ ಮಾಡಿದ್ದಾರೆ.

ಮೋದಿ ಅವರು ಮುಸ್ಲಿಮರ ಟೋಪಿ ಧರಿಸುವುದು ಒಂದು ಉತ್ತಮವಾದ ನಡವಳಿಕೆ. ಹೀಗಾಗಿ ಅವರು ಎಂದಾದರೂ ಒಂದು ದಿನ ಮುಸ್ಲಿಮರ ಟೋಪಿ ಧರಿಸಲಿ ಎಂದು ನಾನು ಬಯಸುತ್ತೇನೆ. 2011ರಲ್ಲಿ ಮೌಲ್ವಿಗಳು ಟೋಪಿ ನೀಡಲು ಬಂದಾಗ ಮೋದಿ ಅವರು ಅದನ್ನು ತೊಡಲು ನಿರಾಕರಿಸಿದ್ದರು. ಆ ನೆನಪನ್ನು ಅಳಿಸಿ ಹಾಕಲು ಕಷ್ಟವಾಗುತ್ತಿದೆ. ಹೀಗಾಗಿ ಅವರು ಟೋಪಿ ಧರಿಸಿದರೆ ಉತ್ತಮ ನಡವಳಿಕೆಯಾಗುತ್ತದೆ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಮೋದಿ 3.0 ಸಚಿವ ಸಂಪಟದಲ್ಲಿ ಒಬ್ಬರೂ ಮುಸ್ಲಿಂ ಸಚಿವರು ಇಲ್ಲವಲ್ಲ ಎಂಬ ಪ್ರಶ್ನೆಗೆ ಸಂದರ್ಶನವೊಂದರಲ್ಲಿ ಉತ್ತರ ನೀಡಿರುವ ಅವರು, ಅದು ನೋವಿನ ವಿಚಾರ ಹೌದು. ಆದರೆ ಅಚ್ಚರಿಯದ್ದೇನಲ್ಲ. ಮುಸ್ಲಿಮರ ಬಗ್ಗೆ ದ್ವೇಷಭಾವ ಅಂತರ್ಮುಖವಾಗಿರುವಂತಿದೆ. ದೇಶದಲ್ಲಿರುವ ಮುಸ್ಲಿಮರಲ್ಲಿ ಒಂದು ಬಗೆಯ ಆತಂಕವಿದೆ ಎಂದು ಮಾಜಿ ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಅವರೇ ಈ ಹಿಂದೆ ಹೇಳಿದ್ದರು. ಅದು ಹೋಗಬೇಕು. ಹಿಂದುಗಳು ಅಥವಾ ಮುಸ್ಲಿಮರು ಏಕಾಂಗಿಯಾಗಿ ಅದನ್ನು ಮಾಡಲು ಆಗದು. ನಾವೆಲ್ಲರೂ ಕೂಡಿಯೇ ಮಾಡಬೇಕು ಎಂದು ಹೇಳಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದೇಶದಲ್ಲಿ ಮತ್ತೆ 2 ಕಂಪನಿಗೆ ವಿಮಾನ ಸೇವೆಗೆ ಅನುಮತಿ
ತೆಲಂಗಾಣ ಸಾರಿಗೆ ಅಧಿಕಾರಿ ₹100 ಕೋಟಿ ಆಸ್ತಿ ಒಡೆಯ?