ಕನಿಷ್ಠ ಶುಲ್ಕ ಪಡೆದು ಭಕ್ತರಿಗೆ ವಿವಾಹ, ಉಪನಯನ, ಚೌಲ, ಸತ್ಯನಾರಾಯಣ ಪೂಜೆ ಮೊದಲಾದ ಕಾರ್ಯಕ್ರಮಗಳನ್ನು ನಡೆಸಿಕೊಡುವ ಯೋಜನೆಯನ್ನು ಸೋಮವಾರದಿಂದ ಆರಂಭಿಸಿರುವುದಾಗಿ ತಿರುಪತಿ ವೆಂಕಟೇಶ್ವರ ದೇವಸ್ಥಾನವನ್ನು ನಿರ್ವಹಿಸುವ ಟಿಟಿಡಿ ತಿಳಿಸಿದೆ.

ತಿರುಪತಿ: ಕನಿಷ್ಠ ಶುಲ್ಕ ಪಡೆದು ಭಕ್ತರಿಗೆ ವಿವಾಹ, ಉಪನಯನ, ಚೌಲ, ಸತ್ಯನಾರಾಯಣ ಪೂಜೆ ಮೊದಲಾದ ಕಾರ್ಯಕ್ರಮಗಳನ್ನು ನಡೆಸಿಕೊಡುವ ಯೋಜನೆಯನ್ನು ಸೋಮವಾರದಿಂದ ಆರಂಭಿಸಿರುವುದಾಗಿ ತಿರುಪತಿ ವೆಂಕಟೇಶ್ವರ ದೇವಸ್ಥಾನವನ್ನು ನಿರ್ವಹಿಸುವ ಟಿಟಿಡಿ ತಿಳಿಸಿದೆ.

ಅಡುಗೆ ಮತ್ತು ಹೂವಿನ ಅಲಂಕಾರಗಳಂತಹ ಇತರ ವ್ಯವಸ್ಥೆಗಳಿಗೆ ಹಣ

‘ತಿರುಮಲದ ಪಾಪ ವಿನಾಶನಂ ರಸ್ತೆಯಲ್ಲಿರುವ ವಿಶಾಲವಾದ ಕಲ್ಯಾಣ ಮಂಟಪದಲ್ಲಿ, ಪುರೋಹಿತರ ಮೂಲಕ ಭಕ್ತರಿಗೆ ಅಗತ್ಯವಿರುವ ಸಮಾರಂಭಗಳನ್ನು ಕನಿಷ್ಠ ಶುಲ್ಕದಲ್ಲಿ ನಡೆಸಿಕೊಡಲಾಗುತ್ತದೆ. ವಿವಾಹ ಉಚಿತವಾಗಿದ್ದು ಪುರೋಹಿತರು ದಕ್ಷಿಣೆ ಪಡೆಯಲ್ಲ. ಆದರೆ ಅಡುಗೆ ಮತ್ತು ಹೂವಿನ ಅಲಂಕಾರಗಳಂತಹ ಇತರ ವ್ಯವಸ್ಥೆಗಳಿಗೆ ಹಣ ಪಾವತಿಸಬೇಕಾಗುತ್ತದೆ’ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.

ಯಾವುದಕ್ಕೆ ಎಷ್ಟು ದಕ್ಷಿಣೆ?:

ಮದುವೆ - ಉಚಿತ, ಉಪನಯನ - 300 ರು., ಸತ್ಯನಾರಾಯಣ ವ್ರತ - 300 ರು., ಚೌಲ - 200 ರು., ನಾಮಕರಣ - 200 ರು., ಅನ್ನಪ್ರಾಶನ - 200 ರು., ಅಕ್ಷರಾಭ್ಯಾಸ - 200 ರು., ವಾಹನ ಪೂಜೆ - 200 ರು., ಕಿವಿ ಚುಚ್ಚುವಿಕೆ - 50 ರು., ಕಿವಿ ಚುಚ್ಚುವಿಕೆ (ಕುಟೀರದಲ್ಲಿ) - 100 ರು., ಮೇಳ (1 ಸೆಟ್) - 100 ರು., ಮೇಳ (2 ಸೆಟ್) - 300 ರು., ದಸ್ತ್ರ ಪೂಜೆ - 200 ರು. ಮತ್ತು ಇತರ ಧಾರ್ಮಿಕ ಸಮಾರಂಭಗಳಿಗೆ - 200 ರು. ನಿಗದಿಪಡಿಸಲಾಗಿದೆ.