ನವದೆಹಲಿ: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಶನಿವಾರ ಘೋಷಣೆಯಾಗಿವೆ. ಮಮ್ಮುಟ್ಟಿ ಹಾಗೂ ಕಾರ್ತಿಕ್ ಆರ್ಯನ್ ಶ್ರೇಷ್ಠ ನಟರು ಹಾಗೂ ಯಾಮಿ ಗೌತಮ್ ಶ್ರೇಷ್ಠ ನಟಿ ಪ್ರಶಸ್ತಿ ಪಡೆದಿದ್ದಾರೆ. ‘ಆರ್ಟಿಕಲ್ 370’ಗೆ ಅತ್ಯುತ್ತಮ ಚಲನಚಿತ್ರ ಹಾಗೂ ರಾಜ್‌ಕುಮಾರ್ ಪೆರಿಯಸಾಮಿ ಶ್ರೇಷ್ಠ ನಿರ್ದೇಶಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು 2019ರಲ್ಲಿ ರದ್ದುಪಡಿಸಿದ ಘಟನೆ ಆಧರಿತ ‘ಆರ್ಟಿಕಲ್ 370’ಗೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ಇದೇ ಚಿತ್ರದ ಮುಖ್ಯ ಪಾತ್ರಧಾರಿಯಾಗಿದ್ದ ಯಾಮಿ ಗೌತಂ ಅವರಿಗೆ ‘ಅತ್ಯುತ್ತಮ ನಟಿ’ ಪ್ರಶಸ್ತಿ ದೊರೆತಿದೆ. ಮಲಯಾಳಂ ಚಿತ್ರ ಬ್ರಮಯುಗಂಗಾಗಿ ಮಮ್ಮುಟ್ಟಿ ಹಾಗೂ ಹಿಂದಿಯ ಚಂದು ಚ್ಯಾಂಪಿಯನ್‌ಗಾಗಿ ಕಾರ್ತಿಕ್ ಆರ್ಯನ್‌ಗೆ ಶ್ರೇಷ್ಠ ನಟ ಗೌರವ ಲಭಿಸಿದೆ.
ಮರಾಠಿಯ ''''''''ಹಮಸಫರ್'''''''' ಅತ್ಯುತ್ತಮ ಕಿರುಚಿತ್ರವಾಗಿದೆ. ತಮಿಳು ಚಿತ್ರ ‘ಅಮರನ್’ಗಾಗಿ ರಾಜ್‌ಕುಮಾರ್ ಪೆರಿಯಸಾಮಿ ಅತ್ಯುತ್ತಮ ನಿರ್ದೇಶನ ಪ್ರಶಸ್ತಿಯನ್ನು ಪಡೆದಿದ್ದಾರೆ. ಶಾಶ್ವತ್ ಸಚ್‌ದೇವ್ ಮತ್ತು ಜಿ.ವಿ. ಪ್ರಕಾಶ್ ಕುಮಾರ್ ಅವರು ಅತ್ಯುತ್ತಮ ಸಂಗೀತ ನಿರ್ದೇಶಕರು ಎನಿಸಿಕೊಂಡಿದ್ದಾರೆ.‘ಭಕ್ಷಕ್’ಗಾಗಿ ಸಂಜಯ್ ಮಿಶ್ರಾ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಹಾಗೂ ‘ಮಹಾರಾಜಾ’ ಸಿನಿಮಾಗಾಗಿ ಸಚನಾ ನಮಿದಾಸ್ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಲಭಿಸಿದೆ. ಕನ್ನಡತಿ ರೂಪಶ್ರೀ ವರ್ಕಾಡಿ ಅವರೊಂದಿಗೆ ಇದನ್ನು ಹಂಚಿಕೊಂಡಿದ್ದಾರೆ.
ಶ್ರೇಷ್ಠ ಹಿನ್ನೆಲೆ ಗಾಯಕರುನವಸಾಚಿ ಗೌರಿ ಮಾಝಿ ಚಿತ್ರದ ‘ಘರಾತ್ ಗಣಪತಿ’ಗಾಗಿ ಅಭಯ್ ಜೋಧ್ಪುರ್ಕರ್ ಅವರಿಗೆ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ಪ್ರಶಸ್ತಿ ಹಾಗೂ ‘ಅಂಗು ವನ ಕೊನಿಲು’ಗಾಗಿ ವೈಕೋಂ ವಿಜಯಲಕ್ಷ್ಮಿ ಅವರಿಗೆ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಪ್ರಶಸ್ತಿ ಘೋಷಣೆಯಾಗಿದೆ.
ತೆಲುಗು ಚಿತ್ರ ‘ಚಿನ್ನ ಕಥಾ ಕಾದು’ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿಯನ್ನು ಪಡೆಯಲಿದೆ. ಅದ್ಭುತ ಮನರಂಜನೆ ನೀಡಿದ ‘ಕಲ್ಕಿ 2898 ಎಡಿ’ ಜನಪ್ರಿಯ ಚಿತ್ರ ಎನಿಸಿಕೊಂಡಿದೆ. ಸುಮಿರಾ ರಾಯ್ ನಿರ್ದೇಶನದ ''''''''ಭಂಗಾರ್'''''''' ಚಿತ್ರವು ಅತ್ಯುತ್ತಮ ನಾನ್-ಫೀಚರ್ ಸಿನಿಮಾ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇದೇ ವಿಭಾಗದಲ್ಲಿ ''''''''ಸ್ಟ್ಯಾಚ್ಯೂ ಆಫ್ ಯೂನಿಟಿ-ಏಕ್ತಾ ಕಾ ಪ್ರತೀಕ್’ಗಾಗಿ ಆನಂದ್ ಎಲ್. ರೈ ಅವರು ಅತ್ಯುತ್ತಮ ನಿರ್ದೇಶನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅತ್ಯುತ್ತಮ ಸಿನಿಮಾ ವಿಮರ್ಶಕ ಪ್ರಶಸ್ತಿಯನ್ನು ಸಂಜೀವ್ ಶ್ರೀವಾಸ್ತವ ಅವರಿಗೆ ನೀಡಲಾಗುವುದು. ರಾಷ್ಟ್ರೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಉತ್ತೇಜಿಸುವ ಅತ್ಯುತ್ತಮ ಚಲನಚಿತ್ರಕ್ಕಾಗಿ ''''''''ಕ್ಯಾಪ್ಟನ್ ಮಿಲ್ಲರ್'''''''' ಪ್ರಶಸ್ತಿಯನ್ನು ಪಡೆದಿದೆ.