ಶ್ರೀನಗರ: ಕಾಶ್ಮೀರದ ಐತಿಹಾಸಿಕ ಶಾರದಾ ದೇವಸ್ಥಾನದಲ್ಲಿ 1947ರ ನಂತರ ಮೊದಲ ಬಾರಿ ನವರಾತ್ರಿ ಪೂಜೆ ಆಯೋಜಿಸಲಾಗಿದೆ. ಈ ಪೂಜಾ ಕಾರ್ಯಕ್ರಮದಲ್ಲಿ ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಂಡಿದ್ದರು. ಬಳಿಕ ಈ ಬಗ್ಗೆ ಟ್ವೀಟ್ ಮಾಡಿರುವ ಅವರು ‘ಶಾರದಾ ದೇವಿ ದೇವಸ್ಥಾನದಲ್ಲಿ ನಡೆದ ಪೂಜೆಯು ಕಣಿವೆಯಲ್ಲಿ ಶಾಂತಿ ಮರಳಿದೆ ಎಂಬುದನ್ನು ಸೂಚಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಮ್ಮ ರಾಷ್ಟ್ರದ ಸಾಂಸ್ಕ್ರತಿಕ ಮತ್ತು ಆಧ್ಯಾತ್ಮಿಕ ಜ್ವಾಲೆಯ ಪುನರುಜ್ಜೀವನವನ್ನೂ ಸೂಚಿಸುತ್ತದೆ. ಜೀರ್ಣೋದ್ಧಾರದ ಬಳಿಕ 2023ರ ಮಾರ್ಚ್‌ನಲ್ಲಿ ಈ ದೇವಾಲಯವನ್ನು ಪುನ ತೆರೆಯಲು ನಾನು ಅದೃಷ್ಟಶಾಲಿಯಾಗಿದ್ದೆ’ ಎಂದಿದ್ದಾರೆ.