ಒಮಾನ್‌ ಕರಾವಳಿಯಲ್ಲಿ 15 ಜನ ಭಾರತೀಯರಿದ್ದ ಹಡಗಿನ ಮೇಲೆ ದಾಳಿ

KannadaprabhaNewsNetwork |  
Published : Mar 02, 2026, 03:15 AM IST
Oman

ಸಾರಾಂಶ

ಮಧ್ಯಪ್ರಾಚ್ಯ ಹೊತ್ತಿ ಉರಿಯುತ್ತಿರುವ ನಡುವೆಯೇ ಭಾನುವಾರ ಒಮಾನ್‌ ಕಡಲ ತೀರದಲ್ಲಿ 15 ಭಾರತೀಯರಿದ್ದ ತೈಲ ಹಡಗಿನ ಮೇಲೆ ದಾಳಿ ನಡೆದಿದೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಮುಸಂದಮ್‌ನ ದ್ವೀಪದ ಬಳಿ ದಾಳಿ ನಡೆದಿದೆ.

ನವದೆಹಲಿ: ಮಧ್ಯಪ್ರಾಚ್ಯ ಹೊತ್ತಿ ಉರಿಯುತ್ತಿರುವ ನಡುವೆಯೇ ಭಾನುವಾರ ಒಮಾನ್‌ ಕಡಲ ತೀರದಲ್ಲಿ 15 ಭಾರತೀಯರಿದ್ದ ತೈಲ ಹಡಗಿನ ಮೇಲೆ ದಾಳಿ ನಡೆದಿದೆ. 

ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ

ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. 15 ಭಾರತೀಯ ಮತ್ತು 5 ಇರಾನಿ ಸಿಬ್ಬಂದಿಯಿದ್ದ, ಪಲಾವ್‌ ದೇಶದ ಧ್ವಜ ಹೊಂದಿದ್ದ ಸ್ಕೈಲೈಟ್‌ ಹೆಸರಿನ ಹಡಗಿನ ಮೇಲೆ, ಹೋರ್ಮುಜ್‌ ಜಲಸಂಧಿಯ ಬಳಿಯಿರುವ ಒಮಾನ್‌ನ ಮುಸಂದಮ್‌ನ ದ್ವೀಪದ ಬಳಿ ದಾಳಿ ನಡೆದಿದೆ. 

ದಾಳಿ ಮಾಡಿದ್ದು ಯಾರು ?

ಆದರೆ ಈ ಆಕ್ರಮಣವಾಗಿರುವುದು ಇರಾನ್‌ ಕಡೆಯಿಂದಲೇ ಅಥವಾ ಅಮೆರಿಕ ಮತ್ತು ಇಸ್ರೇಲ್‌ ನಡೆಸುತ್ತಿರುವ ದಾಳಿಯ ಭಾಗವೇ ಎಂಬುದು ಸ್ಪಷ್ಟವಿಲ್ಲ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇಸ್ರೇಲ್‌-ಲೆಬನಾನ್‌ ಕದನಕ್ಕೆ 10 ದಿನ ವಿರಾಮ : ಟ್ರಂಪ್‌
ದಿಲ್ಲಿ ಏರ್ಪೋರ್ಟ್‌ನಲ್ಲಿ 2 ವಿಮಾನಗಳ ಡಿಕ್ಕಿ : ತಪ್ಪಿದ ಅನಾಹುತ