ಮುಂಬೈ: ಜನವರಿಯಲ್ಲಿ ನಟ ಸೈಫ್ ಅಲಿಖಾನ್ ಮೇಲೆ ನಡೆದಿದ್ದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಬಾಂದ್ರಾ ಪೊಲೀಸರು ಘಟನೆ ನಡೆದು 3 ತಿಂಗಳ ಬಳಿಕ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ದಾಳಿಕೋರ ಶರೀಫುಲ್ಲಾ ಇಸ್ಲಾಂ ವಿರುದ್ಧ ಬಲವಾದ ಸಾಕ್ಷ್ಯಗಳಿವೆ ಎಂದು ತಿಳಿಸಲಾಗಿದೆ.ಜ.16ರಂದು ಬಾಂದ್ರಾದಲ್ಲಿನ ಸೈಫ್ ಅಲಿಖಾನ್ ಅವರ 12ನೇ ಮಹಡಿಯ ಅಪಾರ್ಟ್‌ಮೆಂಟ್‌ನಲ್ಲಿ ನುಗ್ಗಿದ್ದ ವ್ಯಕ್ತಿ ಸೈಫ್‌ಗೆ ಚಾಕು ಇರಿದು ಪರಾರಿಯಾಗಿದ್ದನು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಜ.19 ರಂದು ಬಾಂಗ್ಲಾ ಪ್ರಜೆ ಶರೀಫುಲ್ಲಾ ಇಸ್ಲಾಂ ಎಂಬಾತನನ್ನು ಥಾಣೆಯಲ್ಲಿ ಬಂಧಿಸಿ, ವಿಚಾರಣೆ ನಡೆಸಿದ್ದರು.ಇದೀಗ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದು, ದಾಳಿಯ ಸಂದರ್ಭದಲ್ಲಿ ನಟನ ಬೆನ್ನುಮೂಳೆಯ ಬಳಿ ಸಿಲುಕಿಕೊಂಡಿದ್ದ ಚಾಕು ತುಂಡು, ಅಪರಾಧ ಸ್ಥಳದಲ್ಲಿ ಸಿಕ್ಕ ಭಾಗ ಮತ್ತು ಆರೋಪಿಯಿಂದ ವಶಪಡಿಸಿಕೊಂಡ ಚಾಕುವಿಗೆ ಹೊಂದಿಕೆಯಾ ಗುತ್ತದೆ. ಈ ಅಪರಾಧವು ಗಂಭೀರಾದದ್ದು ಮತ್ತು ಆರೋಪಿಯ ವಿರುದ್ಧ ಬಲವಾದ ಸಾಕ್ಷ್ಯಗಳಿವೆ ಎಂದು ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಪ್ಯಾಕೇಜ್ಡ್ ಆಹಾರದಲ್ಲೇನಿದೆ?: ನಮೂದಿಸಲು 3 ತಿಂಗಳ ಗಡುವು- 3 ತಿಂಗಳ ಗಡುವು ವಿಧಿಸಿದ ಸುಪ್ರೀಂ ಕೋರ್ಟ್‌ನವದೆಹಲಿ: ಪ್ಯಾಕೇಜ್ಡ್ ಆಹಾರ ಪದಾರ್ಥಗಳಿಗೆ ಸಂಬಂಧಿಸಿದಂತೆ ಆಹಾರ ಸುರಕ್ಷತೆ ನಿಯಮಗಳನ್ನು ಜಾರಿಗೆ ತರಲು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ 3 ತಿಂಗಳ ಗಡುವು ನೀಡಿದೆ. ಇದರಡಿ, ಪ್ಯಾಕೇಜ್ ಆಹಾರ ಪೊಟ್ಟಣಗಳ ಮೇಲೆ ಅವುಗಳಲ್ಲಿರುವ ವಸ್ತುಗಳ ಮಾಹಿತಿ ಪ್ರದರ್ಶಿಸುವುದು ಕಡ್ಡಾಯವಾಗಲಿದೆ.
ಪ್ಯಾಕೆಟ್‌ನ ಮೇಲೆ ಎಚ್ಚರಿಕೆ ಲೇಬಲ್ ಕಡ್ಡಾಯಗೊಳಿಸಲು ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾ। ಜೆ.ಬಿ. ಪರ್ದೀವಾಲ ಮತ್ತು ಆರ್. ಮಹಾದೇವನ್ ಅವರ ಪೀಠ ವಿಚಾರಣೆ ನಡೆಸಿತು. ಬಳಿಕ, ‘ಆಹಾರ ಸುರಕ್ಷತೆ ಮತ್ತು ಮಾನದಂಡ (ಲೇಬಲಿಂಗ್ ಮತ್ತು ಪ್ರದರ್ಶನ) ನಿಯಮಗಳು, 2020ಕ್ಕೆ ತಿದ್ದುಪಡಿ ತರುವ ಬಗ್ಗೆ 3 ತಿಂಗಳುಗಳ ಒಳಗಾಗಿ ನಿರ್ಧಾರ ಕೈಗೊಳ್ಳಬೇಕು’ ಎಂದು ಆದೇಶಿಸಿತು.2024ರ ಜೂನ್‌ನಲ್ಲಿ, ಪ್ಯಾಕ್ ಮಾಡಿದ ಆಹಾರಗಳ ಲೇಬಲ್‌ಗಳಲ್ಲಿ ದಪ್ಪ ಸೂಕ್ತ ಗಾತ್ರದ ಅಕ್ಷರದಲ್ಲಿ ಅದರಲ್ಲಿರುವ ಒಟ್ಟು ಸಕ್ಕರೆ, ಉಪ್ಪು ಮತ್ತು ಸ್ಯಾಚುರೇಟೆಡ್ ಕೊಬ್ಬು ಸೇರಿದಂತೆ ಪೌಷ್ಟಿಕಾಂಶದ ಮಾಹಿತಿಯನ್ನು ಪ್ರದರ್ಶಿಸುವ ಪ್ರಸ್ತಾವನೆಗೆ ಎಫ್‌ಎಸ್‌ಎಸ್‌ಎಐ (ಆಹಾರ ಸುರಕ್ಷತಾ ಸಂಸ್ಥೆ) ಒಪ್ಪಿಗೆ ಸೂಚಿಸಿತ್ತು.
ಮೇ 9ರ ವಿಜಯ ದಿನದ ಪರೇಡ್‌ಗೆ ಮೋದಿಗೆ ರಷ್ಯಾ ಆಹ್ವಾನಮಾಸ್ಕೋ: 2ನೇ ಮಹಾಯುದ್ಧದಲ್ಲಿ ಜರ್ಮನಿ ವಿರುದ್ಧ ಗೆಲುವು ಸಾಧಿಸಿದ ನೆನಪಿಗಾಗಿ ಪ್ರತಿವರ್ಷ ಮೇ 9 ರಂದು ಆಚರಿಸುವ ವಿಜಯ ದಿನದ ಪರೇಡ್‌ನಲ್ಲಿ ಪಾಲ್ಗೊಳ್ಳುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ರಷ್ಯಾ ಆಹ್ವಾನ ನೀಡಿದೆ.ಈ ವರ್ಷ ವಿಜಯ ದಿನಕ್ಕೆ 80 ವರ್ಷ ಹಿನ್ನೆಲೆಯಲ್ಲಿ ಮೋದಿಗೆ ಆಹ್ವಾನ ನೀಡಲಾಗಿದೆ. ಈ ಬಗ್ಗೆ ರಷ್ಯಾದ ಉಪ ವಿದೇಶಾಂಗ ಸಚಿವ ಆಂಡ್ರೆ ರುಡೆಂಕೊ ಖಚಿತಪಡಿಸಿದ್ದರು. ಮೋದಿಗೆ ಆಹ್ವಾನ ಬಂದಿರುವ ಬಗ್ಗೆ ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ. ಭಾರತ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವಿಕೆ ಬಗ್ಗೆ ಖಚಿತಪಡಿಸಿಲ್ಲ. ಆದರೆ ಮೋದಿ ರಷ್ಯಾಗೆ ತೆರಳುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದ್ದು, ಒಂದು ವೇಳೆ ಮೋದಿ ಹೋಗದಿದ್ದರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾರತವನ್ನು ಪ್ರತಿನಿಧಿಸುವ ಸಾಧ್ಯತೆಯಿದೆ.