ಸಿಂದೂರ ಖ್ಯಾತಿ, ಪಾಕ್‌ ತಜ್ಞ ಪರಾಗ್‌ ಜೈನ್‌ ರಾ ಮುಖ್ಯಸ್ಥ

KannadaprabhaNewsNetwork |  
Published : Jun 29, 2025, 01:33 AM ISTUpdated : Jun 29, 2025, 04:27 AM IST
Parag Jain

ಸಾರಾಂಶ

ಪಾಕಿಸ್ತಾನಕ್ಕೆ ಎಂದೂ ಮರೆಯದ ಪೆಟ್ಟನ್ನು ಕೊಟ್ಟ ಆಪರೇಷನ್‌ ಸಿಂದೂರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿರಿಯ ಐಪಿಎಸ್‌ ಅಧಿಕಾರಿ ಪರಾಗ್‌ ಜೈನ್‌ ಅವರನ್ನು ದೇಶದ ಬಾಹ್ಯ ಗುಪ್ತಚರ ಸಂಸ್ಥೆಯಾದ ರಾನ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

ನವದೆಹಲಿ: ಪಾಕಿಸ್ತಾನಕ್ಕೆ ಎಂದೂ ಮರೆಯದ ಪೆಟ್ಟನ್ನು ಕೊಟ್ಟ ಆಪರೇಷನ್‌ ಸಿಂದೂರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿರಿಯ ಐಪಿಎಸ್‌ ಅಧಿಕಾರಿ ಪರಾಗ್‌ ಜೈನ್‌ ಅವರನ್ನು ದೇಶದ ಬಾಹ್ಯ ಗುಪ್ತಚರ ಸಂಸ್ಥೆಯಾದ ರಾನ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಪ್ರಸ್ತುತ ‘ರಾ’ ಮುಖ್ಯಸ್ಥರಾಗಿರುವ ರವಿ ಸಿನ್ಹಾ ಅವಧಿ ಜೂ.30ರಂದು ಅಂತ್ಯವಾಗಲಿದ್ದು, ಜು.1ರಂದು ಜೈನ್‌ ಅವರು 2 ವರ್ಷಗಳ ಕಾಲ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ.

ಪರಾಗ್‌ ಹಿನ್ನೆಲೆ:

1989ನೇ ಬ್ಯಾಚ್‌ನ ಪಂಜಾಬ್‌ ಕೇಡರ್‌ ಐಎಎಸ್‌ ಅಧಿಕಾರಿಯಾದ ಜೈನ್‌, 2 ವರ್ಷ ‘ರಾ’ದಲ್ಲಿ ಕೆಲಸದ ಅನುಭವ ಹೊಂದಿದ್ದಾರೆ. ಗುಪ್ತಚರ ಮಾಹಿತಿ ಸಂಗ್ರಹಣೆ, ನೆರೆದೇಶಗಳಿಗೆ ಸಂಬಂಧಿಸಿ ವಿಷಯಗಳಲ್ಲಿ ಪರಿಣತರು. ಪಾಕ್‌ ಉಗ್ರನೆಲೆಗಳ ಮೇಲೆ ಇವರ ನೇತೃತ್ವದಲ್ಲಿ ಭಾರತ ನಡೆಸಿದ ನಿಖರ ದಾಳಿಯೇ ಇದಕ್ಕೆ ಸಾಕ್ಷಿ.

ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿಯ ಸಮಯದಲ್ಲಿ ಪಾಕಿಸ್ತಾನಕ್ಕೆ ಸಂಬಂಧಿಸಿದ ವಿಭಾಗದಲ್ಲಿ ಜೈನ್‌ ಕಾರ್ಯನಿರ್ವಹಿಸಿದ್ದರು. ಶ್ರೀಲಂಕಾ, ಕೆನಡಾದಲ್ಲಿ ಭಾರತ ನಡೆಸಿದ ಕಾರ್ಯಾಚರಣೆಗಳ ಭಾಗವೂ ಆಗಿದ್ದ ಪರಾಗ್‌, ಕೆನಡಾದಲ್ಲಿ ಖಲಿಸ್ತಾನಿ ಉಗ್ರರ ಮೇಲೆ ನಿಗಾ ವಹಿಸಿದ್ದರು. ಜತೆಗೆ, ಪಂಜಾಬ್‌ನಲ್ಲಿ ಉಗ್ರವಾದ ಅತಿಯಾಗಿದ್ದ ವೇಳೆ ಹಲವು ಯಶಸ್ವಿ ಕಾರ್ಯಾಚರಣೆಗಳನ್ನು ಕೈಗೊಂಡ, ವಿವಿಧ ಜಿಲ್ಲೆಗಳ ಎಸ್‌ಎಸ್‌ಪಿ, ಡಿಜಿಪಿ ಆಗಿ ಕಾರ್ಯನಿರ್ವಹಿಸಿದ ಖ್ಯಾತಿ ಜೈನ್‌ ಅವರದ್ದು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬೆಂಗಳೂರಿನದ್ದು ಸೇರಿ 16 ಉಪಗ್ರಹಗಳು ಆಗಸದಲ್ಲೇ ಕಾಣೆ
ಅಣ್ಣಾಮಲೈ ರಸಮಲೈ ಎಂದು ರಾಜ್‌ ಠಾಕ್ರೆ ಕೀಳುಭಾಷೆ ಟೀಕೆ