ರಿಲಯನ್ಸ್‌ ಫೌಂಡೇಷನ್‌ ಅಧ್ಯಕ್ಷೆ ನೀತಾ ಅಂಬಾನಿಗೆ ಗ್ಲೋಬಲ್‌ ಲೀಡರ್‌ಶಿಪ್‌ ಗರಿ

KannadaprabhaNewsNetwork | Published : Oct 31, 2023 1:16 AM

ಸಾರಾಂಶ

ಸಮಾಜದಲ್ಲಿ ಅಗಣಿತ ಸೇವೆಗಳನ್ನು ಮಾಡಿದ್ದಕ್ಕಾಗಿ ರಿಲಯನ್ಸ್‌ ಫೌಂಡೇಷನ್‌ ಸಂಸ್ಥಾಪಕಿ, ಅಧ್ಯಕ್ಷೆ ನೀತಾ ಅಂಬಾನಿ ಅವರಿಗೆ ಗ್ಲೋಬಲ್‌ ಲೀಡರ್‌ಶಿಪ್‌ ಪ್ರಶಸ್ತಿ ಲಭಿಸಿದೆ.
ನವದೆಹಲಿ: ಸಮಾಜದಲ್ಲಿ ಅಗಣಿತ ಸೇವೆಗಳನ್ನು ಮಾಡಿದ್ದಕ್ಕಾಗಿ ರಿಲಯನ್ಸ್‌ ಫೌಂಡೇಷನ್‌ ಸಂಸ್ಥಾಪಕಿ, ಅಧ್ಯಕ್ಷೆ ನೀತಾ ಅಂಬಾನಿ ಅವರಿಗೆ ಗ್ಲೋಬಲ್‌ ಲೀಡರ್‌ಶಿಪ್‌ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯನ್ನು ದೆಹಲಿಯಲ್ಲಿನ ಯುಎಸ್‌ ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್‌ನರ್‌ಶಿಪ್ ಫೋರಮ್ ನೀಡಿ ಪುರಸ್ಕರಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಫೋರಂ,‘ನೀತಾ ಅಂಬಾನಿ ನೇತೃತ್ವದಲ್ಲಿ ರಿಲಯನ್ಸ್ ಫೌಂಡೇಷನ್ ಶಿಕ್ಷಣ, ಕಲೆ, ಕ್ರೀಡೆ ಮತ್ತು ಆರೋಗ್ಯ ರಕ್ಷಣೆ ಮೂಲಕ ಲಕ್ಷಾಂತರ ಭಾರತೀಯರ ಜೀವನದ ಮೇಲೆ ಪ್ರಭಾವ ಬೀರಿದೆ’ ಎಂದಿದೆ.

Share this article