ತ್ರಿಶಾ-ವಿಜಯ್‌ ಮಧ್ಯೆ ಕುಛ್‌ಕುಛ್‌?

KannadaprabhaNewsNetwork |  
Published : Jun 26, 2024, 01:33 AM IST
ತ್ರಿಶಾ-ವಿಜಯ್‌ | Kannada Prabha

ಸಾರಾಂಶ

ತ್ರಿಶಾ ಪೋಸ್ಟ್‌ ಬಳಿಕ ಅಭಿಮಾನಿಗಳ ಅನುಮಾನ ಪ್ರಾರಂಭವಾಗಿದ್ದು, ಇಬ್ಬರೂ ಸಹ ಸಂಬಂಧದಲ್ಲಿರುವುದಾಗಿ ನೆಟ್ಟಿಗರು ಪೋಸ್ಟ್ ಮಾಡುತ್ತಿದ್ದಾರೆ.

ಚೆನ್ನೈ: ಕಾಲಿವುಡ್‌ ಜನಪ್ರಿಯ ತಾರಾ ಜೋಡಿ ದಳಪತಿ ವಿಜಯ್‌ ಮತ್ತು ತ್ರಿಶಾ ಗುಪ್ತ ಸಂಬಂಧ ಹೊಂದಿದ್ದು ಒಟ್ಟಿಗೆ ವಾಸಿಸುತ್ತಿರಬಹುದಾದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿಯಾಗಿ ಚರ್ಚೆಯಾಗುತ್ತಿದೆ.

ವಿಜಯ್‌ ಹುಟ್ಟುಹಬ್ಬದ ಪ್ರಯುಕ್ತ ತ್ರಿಶಾ ತಮ್ಮಿಬ್ಬರ ಜೋಡಿ ಚಿತ್ರ ಸಮೇತ ‘ಇನ್ನೂ ಹಲವಾರು ಮೈಲುಗಲ್ಲುಗಳು ನಮ್ಮ ಮುಂದಿವೆ’ ಎಂಬುದಾಗಿ ಅಡಿಬರಹ ಹಾಕಿದ್ದರು. ಹಾಗಾಗಿ ಅಭಿಮಾನಿಗಳಿಗೆ ಈ ಅನುಮಾನ ಮೂಡಿದ್ದು, ಅದಕ್ಕೆ ಪೂರಕವೆಂಬಂತೆ ಇಬ್ಬರೂ ಒಟ್ಟಿಗೆಯಾಗಿ ವಿದೇಶಕ್ಕೆ ಕ್ರೂಸ್‌ ಒಂದರಲ್ಲಿ ಪ್ರವಾಸ ಹೋಗಿರುವ ದೃಶ್ಯ, ವಿಮಾನ ನಿಲ್ದಾಣದಲ್ಲಿ ಒಟ್ಟಾಗಿರುವುದು ಹಾಗೂ ವಿಜಯ್‌ ಅವರ ಅಪಾರ್ಟ್‌ಮೆಂಟ್‌ನಲ್ಲಿ ತ್ರಿಶಾ ಕಾಣಿಸಿಕೊಂಡಿರುವ ಚಿತ್ರ ಶೇರ್ ಮಾಡಿ ಅನುಮಾನ ವ್ಯಕ್ತಪಡಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಾಜಕೀಯ ಪಕ್ಷಗಳಿಗೆ ₹3811 ಕೋಟಿ ಫಂಡ್‌ : ಬಿಜೆಪಿಗೇ 82%!
ಕಾಂಗ್ರೆಸ್‌ನಿಂದ ದೇಶ ವಿರೋಧಿ ಚಟುವಟಿಕೆ : ಮೋದಿ ಮತ್ತೆ ತರಾಟೆ