ಚೀನಾದಲ್ಲಿ ಹೊಸ ಕೋವಿಡ್ ರೂಪಾಂತರಿ ಎಚ್‌ಕೆಯು5 ಪತ್ತೆ ಶಂಕೆ

KannadaprabhaNewsNetwork |  
Published : Jun 07, 2025, 02:36 AM ISTUpdated : Jun 07, 2025, 05:37 AM IST
ಕೊರೋನಾ | Kannada Prabha

ಸಾರಾಂಶ

ಆಗ್ನೇಯ ಏಷ್ಯಾ ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿರುವ ನಡುವೆಯೇ, ಚೀನಾದಲ್ಲಿ ಎಚ್‌ಕೆಯು5-ಕೋವ್-2 ಎಂಬ ಹೊಸ ಕೋವಿಡ್ ರೂಪಾಂತರಿ ಪತ್ತೆಯಾಗಿದೆ ಎಂದು ಅಮೆರಿಕದ ಸಂಶೋಧಕರು ಶಂಕಿಸಿದ್ದಾರೆ.

 ವಾಷಿಂಗ್‌ಟನ್: ಆಗ್ನೇಯ ಏಷ್ಯಾ ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿರುವ ನಡುವೆಯೇ, ಚೀನಾದಲ್ಲಿ ಎಚ್‌ಕೆಯು5-ಕೋವ್-2 ಎಂಬ ಹೊಸ ಕೋವಿಡ್ ರೂಪಾಂತರಿ ಪತ್ತೆಯಾಗಿದೆ ಎಂದು ಅಮೆರಿಕದ ಸಂಶೋಧಕರು ಶಂಕಿಸಿದ್ದಾರೆ.

2020ರಲ್ಲಿ ಕೋವಿಡ್-19 ವೇಳೆ ಚೀನಾದ ಪ್ರಯೋಗಾಲಯವೊಂದರಲ್ಲಿ ನಡೆದ ಸಂಶೋಧನೆಯಲ್ಲಿ ಬಾವಲಿಗಳಲ್ಲಿ ಎಚ್‌ಕೆಯು5 ರೂಪಾಂತರಿ ಇರುವುದು ದೃಢಪಟ್ಟಿತ್ತು. ಇದೀಗ ವಾಷಿಂಗ್‌ಟನ್ ರಾಜ್ಯ ವಿವಿ ಅಧ್ಯಯನ ನಡೆಸಿದ್ದು,‘ ಮಾನವ ಜೀವಕೋಶಗಳಲ್ಲಿ ರೂಪಾಂತರಿ ಕಂಡುಬಂದಿದೆ. 

ಎಚ್‌ಕೆಯು5 ವೈರಸ್‌ನ ಸ್ಪೈಕ್ ಪ್ರೋಟೀನ್‌ನಲ್ಲಾಗುವ ಬದಲಾವಣೆಯು ಮನುಷ್ಯನ ದೇಹದ ಎಸಿಇ2 ಜೀವಕೋಶಗಳಿಗೆ ಹಾನಿಯುಂಟುಮಾಡುತ್ತದೆ’ ಎಂದು ತಿಳಿಸಿದೆ. ಇದುವರೆಗೆ ಯಾವುದೇ ವ್ಯಕ್ತಿಯಲ್ಲಿ ಎಚ್‌ಕೆಯು5 ಸೋಂಕು ದೃಢಪಟ್ಟಿಲ್ಲ. ಅದರ ಲಕ್ಷಣಗಳೂ ತಿಳಿದುಬಂದಿಲ್ಲ. ಆದರೆ ಇದು ಕೋವಿಡ್-19ನ ಉಪಜಾತಿಗೆ ಸೇರಿದ ವೈರಸ್ ಆಗಿರುವುದರಿಂದ, ಕೋವಿಡ್ ಲಕ್ಷಣಗಳಾದ ಜ್ವರ, ಕೆಮ್ಮು, ಉಸಿರಾಟದ ತೊಂದರೆ, ಮೈಕೈನೋವು ಇತ್ಯಾದಿಗಳನ್ನು ಅಂದಾಜಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬೆಂಗಳೂರಿನದ್ದು ಸೇರಿ 16 ಉಪಗ್ರಹಗಳು ಆಗಸದಲ್ಲೇ ಕಾಣೆ
ಅಣ್ಣಾಮಲೈ ರಸಮಲೈ ಎಂದು ರಾಜ್‌ ಠಾಕ್ರೆ ಕೀಳುಭಾಷೆ ಟೀಕೆ