ನವದೆಹಲಿ : ದೇಶದ ಗಡಿ ಪ್ರದೇಶಗಳಲ್ಲಿ ವಿಧ್ವಂಸಕ ಕೃತ್ಯ ಸೃಷ್ಟಿಸಲು ಸದಾ ಹೊಂಚು ಹಾಕುವ ಉಗ್ರ ಜಾಲದ ಬೇಟೆಗೆ ರಾಷ್ಟ್ರೀಯ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಇಳಿದಿದ್ದು, ಕರ್ನಾಟಕ ಸೇರಿ 6 ರಾಜ್ಯಗಳ 22 ಕಡೆಗಳಲ್ಲಿ ಶೋಧ ನಡೆಸಿದೆ. ಭಯೋತ್ಪಾದನೆಗೆ ಹಣಕಾಸು ಒದಗಿಸುವುದು, ನೇಮಕಾತಿ ಮತ್ತು ಗಡಿಯಾಚೆಗಿನ ನಿರ್ವಾಹಕರೊಂದಿಗೆ ಸಮನ್ವಯ ಸಾಧಿಸುವ ಪಿತೂರಿಯ ಪುರಾವೆಗಳನ್ನು ಬಹಿರಂಗಪಡಿಸುವುದು ಪ್ರಸ್ತುತ ದಾಳಿಗಳ ಗುರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ಕಾಶ್ಮೀರದ 9 ಸ್ಥಳಗಳು, ಬಿಹಾರದ 8, ಉತ್ತರ ಪ್ರದೇಶದ 2, ಕರ್ನಾಟಕ, ಮಹಾರಾಷ್ಟ್ರ ಮತ್ತು ತಮಿಳುನಾಡಿದ 1 ಕಡೆಗಳಲ್ಲಿ ಶೋಧ ಕೈಗೊಳ್ಳಲಾಗಿದೆ. ರಾಷ್ಟ್ರ ವಿರೋಧಿ ಜಾಲಗಳೊಂದಿಗೆ ಸಂಪರ್ಕ ಹೊಂದಿರುವ ಶಂಕಿತ ವ್ಯಕ್ತಿಗಳ ನಿವಾಸಗಳು ಮತ್ತು ಸಂಬಂಧಿತ ಸ್ಥಳಗಳಲ್ಲಿ ರಾಜ್ಯ ಪೊಲೀಸರ ಸಹಕಾರದೊಂದಿಗೆ ಈ ಕಾರ್ಯಾಚರಣೆ ನಡೆಸಲಾಗಿದೆ. ಜಮ್ಮು ಕಾಶ್ಮೀರದ ಬಾರಾಮುಲ್ಲಾ, ಕುಲ್ಗಾಂ, ಅನಂತನಾಗ್ ಮತ್ತು ಪುಲ್ವಾಮಾದಲ್ಲಿ ಶೋಧ ನಡೆದಿದೆ.
ಈ ವರ್ಷಾರಂಭದಲ್ಲಿ ಕಾಶ್ಮೀರದಲ್ಲಿ ಎನ್‌ಐಎ ದಾಳಿ ಮಾಡಿದಾಗ ವಿಧ್ವಂಸಕ ಕೃತ್ಯದ ಸಂಚು ಬಯಲಾಗಿತ್ತು. ಆ ಜಾಲ ಇನ್ನಷ್ಟು ವ್ಯಾಪಿಸಿರುವ ಶಂಕೆ ಇದ್ದು ಅದನ್ನು ಬಯಲಿಗೆಳೆಯಲು ದಾಳಿ ನಡೆದಿದೆ.
ಕಾಶ್ಮೀರದ ಉಗ್ರರಿಗೆ ಹಣ: ರಾಜ್ಯದಲ್ಲಿ ಎನ್‌ಐಎ ಬೇಟೆ - 6 ರಾಜ್ಯಗಳಲ್ಲಿ 22 ಸ್ಥಳದಲ್ಲಿ ಏಕಕಾಲಕ್ಕೆ ದಾಳಿ - ಶಂಕಿತರ ನಿವಾಸಗಳು, ಸ್ಥಳಗಳ ಪರಿಶೀಲನೆ ವರ್ಷಾರಂಭದಲ್ಲಿ ಕಾಶ್ಮೀರದ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿದಾಗ ಉಗ್ರರ ವಿಧ್ವಂಸಕ ಕೃತ್ಯದ ಬಗ್ಗೆ ಎನ್‌ಎಐಗೆ ಮಹತ್ವದ ಸುಳಿವು
ಈ ಸುಳಿವು ಆಧರಿಸಿ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಯುಪಿ, ಕಾಶ್ಮೀರ, ಬಿಹಾರದ 22 ಸ್ಥಳಗಳ ಮೇಲೆ ಅಧಿಕಾರಿಗಳಿಂದ ದಾಳಿ ಉಗ್ರರಿಗೆ ಹಣ, ನೇಮಕ, ಗಡಿಯಾಚೆಗಿನ ನಿರ್ವಾಹಕರೊಂದಿಗೆ ಸಮನ್ವಯ ಸಾಧಿಸುವ ಪಿತೂರಿಯ ಪುರಾವೆ ಬಹಿರಂಗಕ್ಕೆ ಈ ಕಾರ್ಯಾಚರಣೆ