ಬಿಹಾರದಲ್ಲಿ ರಾಜಕೀಯ ವಿಪ್ಲವ ಮುಂದುವರಿದಿದ್ದು, ಆರ್‌ಜೆಡಿ ಜತೆಗಿನ ಮೈತ್ರಿ ಮುರಿದುಕೊಂಡು ಜೆಡಿಯು ನೇತಾರ ನಿತೀಶ್ ಕುಮಾರ್ ಅವರು ಬಿಜೆಪಿ ಬೆಂಬಲದೊಂದಿಗೆ ಭಾನುವಾರ 9ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಪಟನಾ: ಬಿಹಾರದಲ್ಲಿ ರಾಜಕೀಯ ವಿಪ್ಲವ ಮುಂದುವರಿದಿದ್ದು, ಆರ್‌ಜೆಡಿ ಜತೆಗಿನ ಮೈತ್ರಿ ಮುರಿದುಕೊಂಡು ಜೆಡಿಯು ನೇತಾರ ನಿತೀಶ್ ಕುಮಾರ್ ಅವರು ಬಿಜೆಪಿ ಬೆಂಬಲದೊಂದಿಗೆ ಭಾನುವಾರ 9ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಇನ್ನು ಹೊಸ ಜೆಡಿಯು-ಬಿಜೆಪಿ ಮೈತ್ರಿಕೂಟದ ಸರ್ಕಾರದಲ್ಲಿ ಬಿಜೆಪಿಗೆ 2 ಉಪಮುಖ್ಯಮಂತ್ರಿ ಸ್ಥಾನ ಲಭಿಸಲಿವೆ ಎಂದೂ ತಿಳಿದುಬಂದಿದೆ.ಬಿಹಾರದಲ್ಲಿ ಹೇಗೂ ಮುಂದಿನ ವರ್ಷ ಚುನಾವಣೆ ನಡೆಯಬೇಕಿದೆ.
ಹೀಗಾಗಿ ಈಗ ಅಸೆಂಬ್ಲಿ ವಿಷರ್ಜಿಸಲು ನಿತೀಶ್ ಮುಂದಾಗುವುದಿಲ್ಲ. ಇದರ ಬದಲು ಹಳೇ ಸ್ನೇಹಿತ ಬಿಜೆಪಿ ಜತೆ ಮತ್ತೆ ಒಂದುಗೂಡಿ ಸರ್ಕಾರ ರಚಿಸಲಿದ್ದಾರೆ. ಇದೇ ಬೇಸಿಗೆಯಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯ ಮೇಲೆ ತಕ್ಷಣದ ಗಮನ ಕೇಂದ್ರೀಕರಿಸಲಿದ್ದಾರೆ ಎಂದು ಗೊತ್ತಾಗಿದೆ.
ತೀವ್ರ ರಾಜಕೀಯ ಚಟುವಟಿಕೆ:ಗುರುವಾರ ನಿತೀಶ್ ಅವರು ಆರ್‌ಜೆಡಿ ವಂಶಪಾರಂಪರ್ಯ ರಾಜಕೀಯದ ಬಗ್ಗೆ ಕುಟುಕು ಮಾತುಗಳನ್ನಾಡಿದ್ದರು. ಇದಕ್ಕೆಆರ್‌ಜೆಡಿ ಸಂಸ್ಥಾಪಕ ಲಾಲು ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ತೀಕ್ಷ್ಣ ತಿರುಗೇಟು ನೀಡಿದ್ದರು.
ಇದರ ಮುಂದುವರಿದ ಭಾಗವಾಗಿ ಶುಕ್ರವಾರ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಕಡೆದ ಗಣರಾಜ್ಯೋತ್ಸವ ಚಹಾಕೂಟಕ್ಕೆ ನಿತೀಶ್ ಆಗಮಿಸಿದರೆ, ಉಪಮುಖ್ಯಮಂತ್ರಿ ಹಾಗೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಗೈರು ಹಾಜರಾದರು.
ಇನ್ನು ಆರ್‌ಜೆಡಿ ನಾಯಕರು ನಿತೀಶ್ ಭೇಟಿಗೆ ಸಮಯ ಕೋರಿದ್ದರೂ, ನಿತೀಶ್ ಯಾವುದೇ ಉತ್ತರ ನೀಡಿಲ್ಲ ಎಂದು ಲಾಲು ಆಪ್ತ ಶಿವಾನಂದ ತಿವಾರಿ ಕಿಡಿಕಾರಿದ್ದಾರೆ.
ಇದು ಉಭಯ ಪಕ್ಷಗಳ ನಡುವಿನ ಹಳಸಿದ ಸಂಬಂಧದ ದ್ಯೋತಕವಾಗಿದೆ.ಇನ್ನೊಂದು ಕಡೆ ಬಿಜೆಪಿ ಮತ್ತು ಜೆಡಿಯು- ಎರಡೂ ಪಕ್ಷಗಳು ತಮ್ಮ ಸಂಸದರು ಮತ್ತು ಶಾಸಕರನ್ನು ಕರೆಸಿ ಒಪ್ಪಂದಕ್ಕೆ ಅಂತಿಮ ಮುದ್ರೆ ಒತ್ತಿವೆ ಎಂದು ಗೊತ್ತಾಗಿದೆ.
ಇದೇ ವೇಳೆ ನಿತೀಶ್ ಜ.28ರವರೆಗಿನ ತಮ್ಮ ಎಲ್ಲ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಜ.28ರಂದು (ಭಾನುವಾರ) ಬಿಜೆಪಿ ಜತೆಗೂಡಿ ಸರ್ಕಾರ ರಚಿಸಿ ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಮೂಲಗಳು ಹೇಳಿವೆ.
ಬಿಜೆಪಿಗೆ 2 ಡಿಸಿಎಂ ಪಟ್ಟ?
ಇನ್ನು ಬಿಜೆಪಿ ವತಿಯಿಂದ ಸುಶೀಲ್ ಮೋದಿ ಹಾಗೂ ಅಲೋಕ್ ಕುಮಾರ್ ಚೌಧರಿ ಉಪಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ.
ಇದಕ್ಕೆ ಪೂರಕವಾಗಿ ಗಣರಾಜ್ಯ ದಿನದ ರಾಜ್ಯಪಾಲರ ಚಹಾಕೂಟಕ್ಕೆ ಡಿಸಿಎಂ ತೇಜಸ್ವಿ ಯಾದವ್ ಗೈರಾಗಿದ್ದರು. ಅವರ ಹೆಸರಿನಲ್ಲಿ ಕುರ್ಚಿ ಮೀಸಲಿರಿಸಿ ಅವರ ಹೆಸರಿನ ಸ್ಟಿಕ್ಕರ್ ಅಂಟಿಸಲಾಗಿತ್ತು. ಈ ಸ್ಟಿಕ್ಕರನ್ನು ಕಿತ್ತು ನಿತೀಶ್ ಪಕ್ಕದ ಆ ಸೀಟಿನಲ್ಲಿ ಚೌಧರಿ ಅವರು ಕೂತಿದ್ದು ಗಮನ ಸೆಳೆಯಿತು.
ನಿತೀಶ್ ಮುನಿಸು ಏಕೆ?
ಇಂಡಿಯಾ ಕೂಟಕ್ಕೆ ಕಳೆದ 4-5 ತಿಂಗಳಲ್ಲಿ ಯಾವುದೇ ವೇಗ ಸಿಕ್ಕಿಲ್ಲ. ಸದ್ಯದ ಪರಿಸ್ಥಿತಿ ನೋಡಿದರೆ ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರುವ ಸಾಧ್ಯತೆ ದೂರವಾಗಿರುವುದು.
ಆರ್‌ಜೆಡಿ ಸಚಿವರು ಯಾವುದೇ ವಿಷಯದಲ್ಲಿ ನಿತೀಶ್ ಜೊತೆ ಚರ್ಚಿಸದೇ ಇರುವುದು. ಮಹತ್ವದ ಖಾತೆಗಳ ನಿರ್ವಹಣೆಯಲ್ಲಿ ಆರ್‌ಜೆಡಿ ಸಚಿವರ ವೈಫಲ್ಯ.
ಆಡಳಿತವನ್ನು ಹಿಡಿತಕ್ಕೆ ಪಡೆಯಲು ಡಿಸಿಎಂ ತೇಜಸ್ವಿ ಯಾದವ್ ಸೇರಿ ಇತರೆ ಆರ್‌ಜೆಡಿ ನಾಯಕರ ಪ್ರಯತ್ನ.ಗದಿರುವುದು ಹಾಗೂ ಕೂಟದ ನೇತೃತ್ವವನ್ನು ತಮಗೆ ವಹಿಸದಿರುವುದು ನಿತೀಶ್ ಆಕ್ರೋಶಕ್ಕೆ ಕಾರಣ ಎನ್ನಲಾಗಿದೆ. ಹೀಗಾಗಿ ಅವರು ಮತ್ತೆ ಬಿಜೆಪಿ ಜತೆ ಮೈತ್ರಿಗೆ ಮುಂದಾಗಿದ್ದಾರೆ ಎನ್ನಲಾಗಿದೆ.